ಗಿಲ್ & ಅಂಪೈರ್ ಜಗಳ: ಬೆಂಬಲಕ್ಕೆ ನಿಂತ ವೇಗಿ ಮೊಹಮ್ಮದ್ ಸಿರಾಜ್ ಸಪೋರ್ಟ್!
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಭಾರತದ ನಾಯಕ ಶುಭಮನ್ ಗಿಲ್ ಅಂಪೈರ್ ಜೊತೆ ಜಗಳಕ್ಕಿಳಿದರು. ಉಳಿದ ಭಾರತೀಯ ಆಟಗಾರರು ಕೂಡ ಅಂಪೈರ್‌ಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನಿದು ವಿವಾದ ನೋಡೋಣ ಬನ್ನಿ

ಅಂಪೈರ್ ಜತೆ ಗಿಲ್ ಜಗಳ
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ 387 ರನ್ ಗಳಿಸಿ ಆಲೌಟ್ ಆಯ್ತು. ಜೋ ರೂಟ್ (104), ಜೇಮೀ ಸ್ಮಿತ್ (51), ಬ್ರೈಡನ್ ಕಾರ್ಸ್ (56) ಅರ್ಧಶತಕ ಗಳಿಸಿದರು. ಭಾರತದ ಪರ ಬುಮ್ರಾ 5 ವಿಕೆಟ್ ಪಡೆದರು. ಸಿರಾಜ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 2 ವಿಕೆಟ್ ಪಡೆದರು.
ಡ್ಯೂಕ್ಸ್ ಚೆಂಡಿನ ಬಗ್ಗೆ ಅಸಮಾಧಾನ
10.4 ಓವರ್‌ಗಳ ನಂತರ ಚೆಂಡು ಬದಲಿಸಿದ್ದಕ್ಕೆ ಗಿಲ್ ಅಸಮಾಧಾನ ವ್ಯಕ್ತಪಡಿಸಿದರು. ಸಿರಾಜ್ ಕೂಡ ಪ್ರಶ್ನಿಸಿದರು. ಇಂಗ್ಲೆಂಡ್‌ನಲ್ಲಿ ಬಳಸಲಾಗುತ್ತಿರುವ ಡ್ಯೂಕ್ಸ್ ಚೆಂಡಿನ ಬಗ್ಗೆ ಈಗಾಗಲೇ ಭಾರತೀಯರು ಅಸಮಾಧಾನ ಹೊಂದಿದ್ದಾರೆ.
ಗಿಲ್‌ಗೆ ದಂಡ ವಿಧಿಸುವ ಸಾಧ್ಯತೆ
ಎರಡನೇ ದಿನದಾಟದಲ್ಲಿ ಎರಡು ಬಾರಿ ಡ್ಯೂಕ್ಸ್ ಚೆಂಡು ಬದಲಾಯಿಸಲಾಯಿತು. ಇದು ಟೀಂ ಇಂಡಿಯಾ ನಾಯಕ ಗಿಲ್ ಅಸಮಾಧಾನಕ್ಕೆ ಕಾರಣವಾಯಿತು. ಈ ವೇಲೆ ನಾಯಕ ಗಿಲ್‌ಗೆ ಮೊಹಮ್ಮದ್ ಸಿರಾಜ್ ಕೂಡಾ ಸಾಥ್ ನೀಡಿದರು.
ನಾಯಕನಿಗೆ ಉಪನಾಯಕ ಪಂತ್ ಸಾಥ್
10 ಓವರ್ ಬಳಕೆಯಾಗಿದ್ದ ಚೆಂಡು ತನ್ನ ರೂಪ ಕಳೆದುಕೊಂಡಿದ್ದರಿಂದ ಅದನ್ನು ಬದಲಿಸಲಾಯಿತು. ಆನಂತರ ಆಯ್ಕೆ ಮಾಡಿಕೊಂಡ ಚೆಂಡು ಕೇವಲ 8 ಓವರ್ ಬಾಳಿಕೆ ಬಂತು. ಪದೇಪದೇ ಚೆಂಡು ಬದಲಿಸಿದ್ದರಿಂದ ಭಾರತದ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ನಾಯಕನಿಗೆ ಉಪನಾಯಕ ಪಂತ್ ಕೂಡಾ ಸಾಥ್ ನೀಡಿದರು