MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • Royal Challengers Bengaluru: 2026ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿಗೆ ಸೇರಲಿವೆಯಾ ಏಳು ಮಹಾ ದಾಖಲೆಗಳು

Royal Challengers Bengaluru: 2026ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿಗೆ ಸೇರಲಿವೆಯಾ ಏಳು ಮಹಾ ದಾಖಲೆಗಳು

ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಲವು ಮಹತ್ವದ ಮೈಲಿಗಲ್ಲುಗಳನ್ನು ತಲುಪುವ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 9000 ರನ್‌, ಒಂದು ತಂಡದ ಪರ 10000 ರನ್‌, ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 4000 ರನ್‌ಗಳಂತಹ ವಿಶ್ವದಾಖಲೆಗಳು ಅವರ ಕೈಗೆಟಕುವ ದೂರದಲ್ಲಿವೆ.

2 Min read
Author : Kannadaprabha News
Published : Mar 23 2026, 07:35 AM IST
Share this Photo Gallery
  • FB
  • TW
  • Linkdin
  • Whatsapp
17
1. ಐಪಿಎಲ್‌ನಲ್ಲಿ 9000 ರನ್‌
Image Credit : X/@KohliSensation

1. ಐಪಿಎಲ್‌ನಲ್ಲಿ 9000 ರನ್‌

ಐಪಿಎಲ್‌ನಲ್ಲಿ 9000 ರನ್‌ ಪೂರೈಸಿದ ಮೊದಲ ಆಟಗಾರ ಎನಿಸಲು ವಿರಾಟ್‌ ಕೊಹ್ಲಿಗೆ ಕೇವಲ 339 ರನ್‌ ಬೇಕಿದೆ. 267 ಪಂದ್ಯಗಳಲ್ಲಿ ಕೊಹ್ಲಿ 8661 ರನ್‌ ದಾಖಲಿಸಿ, ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

27
2. ಒಂದು ತಂಡದ ಪರ 10000 ರನ್‌
Image Credit : X/@Trend_VKohli

2. ಒಂದು ತಂಡದ ಪರ 10000 ರನ್‌

ವಿರಾಟ್‌ ಆರ್‌ಸಿಬಿ ಪರ 282 ಟಿ20 ಪಂದ್ಯಗಳಲ್ಲಿ 9085 ರನ್‌ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರು ಕನಿಷ್ಠ 915 ರನ್‌ ಗಳಿಸಿದರೆ, ಯಾವುದೇ ಒಂದು ತಂಡದ ಪರ 10000 ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆ ಬರೆಯಲಿದ್ದಾರೆ.

Related Articles

Related image1
ಲಂಡನ್‌ಗೆ ಚಾರ್ಟರ್ಡ್ ವಿಮಾನದ ಬೇಡಿಕೆ: ಕೊನೆಗೂ ಮೌನ ಮುರಿದ ವಿರಾಟ್​ ಕೊಹ್ಲಿ ಏನ್​ ಹೇಳಿದ್ರು ನೋಡಿ
Related image2
19ನೇ ಸೀಸನ್ ಐಪಿಎಲ್‌ ಸಮರಕ್ಕೆ ಭರದ ಸಿದ್ಧತೆ ಶುರು! ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು!
37
3. ಒಂದು ದೇಶದಲ್ಲಿ 10000 ಟಿ20 ರನ್‌
Image Credit : Getty

3. ಒಂದು ದೇಶದಲ್ಲಿ 10000 ಟಿ20 ರನ್‌

ಕೊಹ್ಲಿ ಭಾರತದಲ್ಲಿ 284 ಟಿ20 ಪಂದ್ಯಗಳನ್ನಾಡಿದ್ದು 9704 ರನ್‌ ಕಲೆಹಾಕಿದ್ದಾರೆ. 2026ರ ಐಪಿಎಲ್‌ನಲ್ಲಿ 296 ರನ್‌ ಗಳಿಸಿದರೆ, ಒಂದು ದೇಶದಲ್ಲಿ 10000 ಟಿ20 ರನ್‌ ಪೂರೈಸಿದ ವಿಶ್ವದ ಮೊದಲ ಬ್ಯಾಟರ್‌ ಎನ್ನುವ ಹಿರಿಮೆ ಗಳಿಸಲಿದ್ದಾರೆ.

47
4. ಒಂದು ತಂಡದ ಪರ 300 ಸಿಕ್ಸರ್‌
Image Credit : ANI

4. ಒಂದು ತಂಡದ ಪರ 300 ಸಿಕ್ಸರ್‌

ಐಪಿಎಲ್‌ ಆರಂಭದಿಂದಲೂ ಆರ್‌ಸಿಬಿ ಪರವೇ ಆಡುತ್ತಿರುವ ವಿರಾಟ್‌, ಈ ವರೆಗೂ 267 ಪಂದ್ಯಗಳಲ್ಲಿ 291 ಸಿಕ್ಸರ್‌ ಬಾರಿಸಿದ್ದಾರೆ. ಈ ವರ್ಷ ಅವರು 9 ಸಿಕ್ಸರ್‌ ಬಾರಿಸಿದರೆ, ಐಪಿಎಲ್‌ನಲ್ಲಿ ಒಂದು ತಂಡದ ಪರ 300 ಸಿಕ್ಸರ್‌ ದಾಖಲಿಸಿದ ಮೊದಲಿಗ ಎನಿಸಲಿದ್ದಾರೆ.

57
5. ಟಿ20ಯಲ್ಲಿ 14000 ರನ್‌
Image Credit : Getty

5. ಟಿ20ಯಲ್ಲಿ 14000 ರನ್‌

ವಿರಾಟ್‌ ಈ ವರೆಗೂ ದೆಹಲಿ, ಭಾರತ ಹಾಗೂ ಆರ್‌ಸಿಬಿ ಮೂರು ತಂಡಗಳ ಪರ ಒಟ್ಟು 414 ಟಿ20 ಪಂದ್ಯಗಳನ್ನು ಆಡಿದ್ದು, 13543 ರನ್‌ ಕಲೆಹಾಕಿದ್ದಾರೆ. ಈ ವರ್ಷ ಐಪಿಎಲ್‌ನಲ್ಲಿ 457 ರನ್‌ ಗಳಿಸಿದರೆ, ಕೊಹ್ಲಿ ಟಿ20ಯಲ್ಲಿ 14000 ರನ್‌ ಗಳಿಸಿದ ಭಾರತದ ಮೊದಲ, ವಿಶ್ವದ 5ನೇ ಬ್ಯಾಟರ್‌ ಎನಿಸಲಿದ್ದಾರೆ. 

ಗೇಲ್‌, ಪೊಲ್ಲಾರ್ಡ್‌, ಅಲೆಕ್ಸ್‌ ಹೇಲ್ಸ್‌ ಹಾಗೂ ವಾರ್ನರ್‌ರ ಸಾಲಿಗೆ ಸೇರ್ಪಡೆಗೊಳ್ಳಲಿದ್ದಾರೆ. ಟಿ20ಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಗೇಲ್‌ (14562 ರನ್‌) ಹೆಸರಲ್ಲಿದೆ. ಅವರ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 1020 ರನ್ ಬೇಕಿದೆ.

67
6. ಒಂದು ಕ್ರೀಡಾಂಗಣದಲ್ಲಿ 4000 ರನ್‌
Image Credit : Getty

6. ಒಂದು ಕ್ರೀಡಾಂಗಣದಲ್ಲಿ 4000 ರನ್‌

ವಿರಾಟ್‌ ಈ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನಿಷ್ಠ 5 ಪಂದ್ಯ (ತಂಡ ಫೈನಲ್‌ಗೇರಿದರೆ ಗರಿಷ್ಠ 7 ಪಂದ್ಯ) ಆಡಲಿದ್ದಾರೆ. ಚಿನ್ನಸ್ವಾಮಿಯಲ್ಲಿ 4000 ಟಿ20 ರನ್‌ ಪೂರೈಸಲು ಕೊಹ್ಲಿಗೆ 382 ರನ್‌ ಅಗತ್ಯವಿದೆ. ಈ ಮೈಲುಗಲ್ಲು ತಲುಪಿದರೆ, ಒಂದು ಕ್ರೀಡಾಂಗಣದಲ್ಲಿ 4000 ಟಿ20 ರನ್‌ ಗಳಿಸಿದ ವಿಶ್ವದ ಮೊದಲಿಗ ಎನ್ನುವ ದಾಖಲೆ ನಿರ್ಮಿಸಲಿದ್ದಾರೆ

77
7. ಒಂದು ಕ್ರೀಡಾಂಗಣದಲ್ಲಿ ಗರಿಷ್ಠ ಟಿ20 ಶತಕ
Image Credit : X/imVkohli

7. ಒಂದು ಕ್ರೀಡಾಂಗಣದಲ್ಲಿ ಗರಿಷ್ಠ ಟಿ20 ಶತಕ

ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 109 ಟಿ20 ಪಂದ್ಯಗಳನ್ನು ಆಡಿದ್ದು, 4 ಶತಕ ಬಾರಿಸಿದ್ದಾರೆ. 2026ರ ಐಪಿಎಲ್‌ನಲ್ಲಿ ಅವರು 1 ಶತಕ ಗಳಿಸಿದರೆ, ಕ್ರಿಸ್‌ ಗೇಲ್‌ರ ದಾಖಲೆ ಸರಿಗಟ್ಟಲಿದ್ದಾರೆ. ಗೇಲ್‌ ಢಾಕಾದ ಶೇರ್‌-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ 5 ಶತಕ ಗಳಿಸಿ ದಾಖಲೆ ಹೊಂದಿದ್ದಾರೆ. 

ಒಂದು ವೇಳೆ ಕೊಹ್ಲಿ 2 ಶತಕ ಬಾರಿಸಿದರೆ, ಒಂದು ಕ್ರೀಡಾಂಗಣದಲ್ಲಿ ಅತಿಹೆಚ್ಚು ಟಿ20 ಶತಕ ಸಿಡಿಸಿದ ವಿಶ್ವ ದಾಖಲೆಗೆ ಪಾತ್ರರಾಗಲಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವಿರಾಟ್ ಕೊಹ್ಲಿ
ಐಪಿಎಲ್
ಕ್ರಿಕೆಟ್
ಆರ್‌ಸಿಬಿ
Latest Videos
Recommended Stories
Recommended image1
ಲಂಡನ್‌ಗೆ ಚಾರ್ಟರ್ಡ್ ವಿಮಾನದ ಬೇಡಿಕೆ: ಕೊನೆಗೂ ಮೌನ ಮುರಿದ ವಿರಾಟ್​ ಕೊಹ್ಲಿ ಏನ್​ ಹೇಳಿದ್ರು ನೋಡಿ
Recommended image2
ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್
Recommended image3
ಕೆಕೆಆರ್‌ಗೆ ಮತ್ತೊಂದು ಶಾಕ್: ಹರ್ಷಿತ್ ರಾಣಾ ಬಳಿಕ ಮತ್ತೋರ್ವ ಪ್ರಮುಖ ವೇಗಿ ಐಪಿಎಲ್ ಸೀಸನ್‌ನಿಂದಲೇ ಔಟ್?
Related Stories
Recommended image1
ಲಂಡನ್‌ಗೆ ಚಾರ್ಟರ್ಡ್ ವಿಮಾನದ ಬೇಡಿಕೆ: ಕೊನೆಗೂ ಮೌನ ಮುರಿದ ವಿರಾಟ್​ ಕೊಹ್ಲಿ ಏನ್​ ಹೇಳಿದ್ರು ನೋಡಿ
Recommended image2
19ನೇ ಸೀಸನ್ ಐಪಿಎಲ್‌ ಸಮರಕ್ಕೆ ಭರದ ಸಿದ್ಧತೆ ಶುರು! ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved