ಮತ್ತೆ ಬರ್ತೀವೋ ಇಲ್ವೋ ಗೊತ್ತಿಲ್ಲ; ಭಾರತ ಗೆಲ್ಲಿಸಿದ ರೋಹಿತ್ ಶರ್ಮಾ ಅಚ್ಚರಿ ಹೇಳಿಕೆ!
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಏಕದಿನ ಸರಣಿ ಕೈತಪ್ಪಿದರೂ, ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರ ಅದ್ಭುತ ಪ್ರದರ್ಶನಕ್ಕೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಇನ್ನು ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
15

Image Credit : Asianet News
ಆಸ್ಟ್ರೇಲಿಯಾ ವಿರುದ್ಧ ಭಾರತದ ಭರ್ಜರಿ ಜಯ
ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆಸೀಸ್ ನೀಡಿದ್ದ 237 ರನ್‌ಗಳ ಗುರಿಯನ್ನು ಟೀಂ ಇಂಡಿಯಾ 38.2 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಆರಂಭಿಕ ಆಟಗಾರ ರೋಹಿತ್ ಶರ್ಮಾ (121*) ಭರ್ಜರಿ ಶತಕ ಸಿಡಿಸಿದರು.
25
Image Credit : X/BCCI
ಮತ್ತೆ ಬರ್ತೀವೋ ಇಲ್ವೋ!
ಪಂದ್ಯದ ನಂತರ ಮಾತನಾಡಿದ ರೋಹಿತ್, 'ಮತ್ತೆ ಆಸ್ಟ್ರೇಲಿಯಾಕ್ಕೆ ಬರುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಲ್ಲಿ ಆಡುವುದು ವಿಶೇಷ ಅನುಭವ' ಎಂದು ಭಾವುಕರಾದರು. ಕೊಹ್ಲಿ ಕೂಡ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ತಿಳಿಸಿದರು.
35
Image Credit : Insta/indiancricketteam
ರೋಹಿತ್ ದಾಖಲೆಗಳು
ಈ ಶತಕದೊಂದಿಗೆ ರೋಹಿತ್ ಹಲವು ದಾಖಲೆ ಬರೆದರು. ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ಏಕದಿನ ಶತಕ (6) ಬಾರಿಸಿದ ವಿದೇಶಿ ಆಟಗಾರ, ಹಾಗೂ 2 ಬಾರಿ ಆಸೀಸ್ ನೆಲದಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು.
45
Image Credit : Insta/indiancricketteam
ಕೊಹ್ಲಿಯ ಅದ್ಭುತ ಮೈಲಿಗಲ್ಲುಗಳು
ವಿರಾಟ್ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಹೊಸ ದಾಖಲೆ ಬರೆದರು. ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಂಗಕ್ಕಾರರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಚೇಸಿಂಗ್‌ನಲ್ಲಿ 70 ಬಾರಿ 50+ ಸ್ಕೋರ್ ಮಾಡಿದ ಏಕೈಕ ಆಟಗಾರರಾದರು.
55
Image Credit : Getty
ರೋ-ಕೋ ಜೊತೆಯಾಟ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಮತ್ತೊಮ್ಮೆ ತಂಡದ ಗೆಲುವಿಗೆ ಕಾರಣವಾಯಿತು. ಇವರಿಬ್ಬರು ಏಕದಿನದಲ್ಲಿ 12ನೇ ಬಾರಿಗೆ 150+ ರನ್‌ಗಳ ಜೊತೆಯಾಟವಾಡಿದರು. ಸಚಿನ್-ಗಂಗೂಲಿ ಜೋಡಿಯ ದಾಖಲೆಯನ್ನು ಸರಿಗಟ್ಟಿದರು.
Latest Videos