ಸಿಡ್ನಿಯಲ್ಲಿ ಶತಕ ಸಿಡಿಸಿ ಹಲವು ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ!
ಸಿಡ್ನಿ: ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸುವ ಮೂಲಕ ಹಲವು ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

50ನೇ ಶತಕ ಸಿಡಿಸಿದ ರೋಹಿತ್
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ತಮ್ಮ 50ನೇ ಶತಕವನ್ನು ಪೂರೈಸಿದ್ದಾರೆ. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಹಿಟ್‌ಮ್ಯಾನ್ ಈ ಮೈಲಿಗಲ್ಲು ದಾಟಿದ್ದಾರೆ.
50 ಶತಕ ಪೂರೈಸಿದ ಹಿಟ್‌ಮ್ಯಾನ್
ಏಕದಿನದಲ್ಲಿ 33, ಟೆಸ್ಟ್‌ನಲ್ಲಿ 12 ಮತ್ತು ಟಿ20ಯಲ್ಲಿ 5 ಶತಕಗಳನ್ನು ರೋಹಿತ್ ಗಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ವಿದೇಶಿ ಬ್ಯಾಟರ್ ಕೂಡ ರೋಹಿತ್ ಆಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ
33 ಇನ್ನಿಂಗ್ಸ್‌ಗಳಿಂದ 6 ಶತಕಗಳನ್ನು ಗಳಿಸಿದ್ದಾರೆ. 32 ಇನ್ನಿಂಗ್ಸ್‌ಗಳಲ್ಲಿ 5 ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಮತ್ತು ಕುಮಾರ್ ಸಂಗಕ್ಕಾರ (49 ಇನ್ನಿಂಗ್ಸ್‌ಗಳಲ್ಲಿ 5) ಅವರನ್ನು ರೋಹಿತ್ ಹಿಂದಿಕ್ಕಿದ್ದಾರೆ.
ಆಸೀಸ್ ಎದುರು 9 ಶತಕ ಸಿಡಿಸಿದ ರೋಹಿತ್
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರೋಹಿತ್ ಸರಿಗಟ್ಟಿದ್ದಾರೆ. ಇಬ್ಬರೂ ಆಸ್ಟ್ರೇಲಿಯಾ ವಿರುದ್ಧ ತಲಾ ಒಂಬತ್ತು ಶತಕಗಳನ್ನು ಗಳಿಸಿದ್ದಾರೆ.
ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ
ಒಂದು ಎದುರಾಳಿಯ ವಿರುದ್ಧ ಅತಿ ಹೆಚ್ಚು ಶತಕಗಳ ದಾಖಲೆಯಲ್ಲಿ ರೋಹಿತ್ ಈಗ ಕೊಹ್ಲಿಗಿಂತ ಕೆಳಗಿದ್ದಾರೆ. ಶ್ರೀಲಂಕಾ ವಿರುದ್ಧ 10 ಶತಕಗಳನ್ನು ಗಳಿಸಿರುವ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಸಚಿನ್ ದಾಖಲೆ ಸರಿಗಟ್ಟಿದ ರೋಹಿತ್
ಆಸೀಸ್ ವಿರುದ್ಧ ಒಂಬತ್ತು ಶತಕ ಗಳಿಸಿರುವ ರೋಹಿತ್ ಶರ್ಮಾ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ್ದಾರೆ.
ಮೂರು ಮಾದರಿಯಲ್ಲಿ 5ಕ್ಕಿಂತ ಹೆಚ್ಚು ಶತಕ ಸಿಡಿಸಿದ ಏಕೈಕ ಬ್ಯಾಟರ್
ಮೂರೂ ಮಾದರಿಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಏಕೈಕ ಆಟಗಾರ ರೋಹಿತ್.