ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಲವ್‌ಸ್ಟೋರಿಗಳು!
ಜನವರಿ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡವು ಕಾಂಗರೂಗಳನ್ನು 2–1ರಿಂದ ಸೋಲಿಸಿತು. 33 ವರ್ಷಗಳ ನಂತರ ಸರಣಿ ಗೆದ್ದುಕೊಂಡು, ಸಂಭ್ರಮಿಸುತ್ತಿದೆ. ಪಂದ್ಯದಲ್ಲಿ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿದರೂ ಭಾರತದ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಇನ್ನಿಂಗ್ಸ್ ಸ್ಮರಣೀಯವಾಗಿತ್ತು. ಅವರು 89 ರನ್‌ಗಳ ಆಕರ್ಷಕ ಇನ್ನಿಂಗ್ಸ್‌ಗಳಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟರು. ಪಂತ್ ಲವಲೈಫ್ ಸಾಕಷ್ಟು ಚರ್ಚೆಯಲ್ಲಿದೆ. ಈ ಕ್ರಿಕೆಟಿಗನ ಹೆಸರು ಬಾಲಿವುಡ್ ನಟಿ ಊರ್ವಶಿ ರೌತೆಲಾ ಜೊತೆಯೂ ಕೇಳಿಬಂದಿದೆ. ರಿಷಭ್ ಪಂತ್ ಅವರ ಲವ್‌ಸ್ಟೋರಿ ವಿವರ ಇಲ್ಲಿದೆ.
ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಬಹಳ ಕಡಿಮೆ ಸಮಯದಲ್ಲಿ ಸಾಕಷ್ಟು ಫೇಮಸ್ ಆದವರಲ್ಲಿ ಒಬ್ಬರು. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಆಡಿದ ಅವರ ಗೆಲುವಿನ ಇನ್ನಿಂಗ್ಸ್ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ.
ಬಿಸ್ಬೇನ್ ಮೈದಾನದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಪಂತ್, ಭಾರತಕ್ಕೆ ಐತಿಹಾಸಿಕ ಗೆಲುವು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು, ಔಟಾಗದೇ 89 ರನ್ ಗಳಿಸಿದ ಭಾರತೀಯ ತಂಡಕ್ಕೆ ಅದ್ಭುತ ಗೆಲುವು ನೀಡಿ, ಎಲ್ಲ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ಮೈದಾನದಲ್ಲಿ ಲಾಂಗ್ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ರಿಷಭ್ ಪಂತ್, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ರೊಮ್ಯಾಂಟಿಕ್. ಕಳೆದ ವರ್ಷ, ಫೋಟೋವೊಂದನ್ನು ಶೇರ್ ಮಾಡಿ, 'ನಿನ್ನೊಂದಿಗೆ ಇರುವಾಗ ನಾನು ಹೆಚ್ಚು ಉತ್ತಮ ಎಂಬುದು ಅನುಭವವಾಗುತ್ತದೆ,' ಎಂದು ತಮ್ಮ ಲೇಡಿ ಲವ್ ಬಗ್ಗೆ ಬರೆದುಕೊಂಡಿದ್ದರು.
ದೆಹಲಿ ಹುಡುಗಿ ಇಶಾ ನೇಗಿ ಪಂತ್ ಹಿಮ ಪರ್ವತಗಳಲ್ಲಿ ರಜಾ ದಿನಗಳನ್ನು ಆನಂದಿಸುತ್ತಿದ್ದಾರೆ. ಈ ಪೋಸ್ಟ್ ಮೂಲಕ ಇಶಾ ಹಾಗೂ ಪಂತ್‌ರ ಆಫೇರ್ ಕನ್ಫರ್ಮ್ ಆಗುವಂತಾಗಿದೆ.
ಆದರೆ, ಇದಕ್ಕೂ ಮೊದಲು, ರಿಷಭ್ ಪಂತ್ ಅವರ ಹೆಸರು ನಟಿ ಊರ್ವಶಿ ರೌತೆಲಾ ಅವರೊಂದಿಗೆ ಕೇಳಿ ಬಂದಿತ್ತು. 2019ರಲ್ಲಿ ಇಬ್ಬರೂ ಜುಹುನ ಎಸ್ಟೆಲ್ಲಾ ಹೊಟೇಲ್‌ಗೆ ತಡರಾತ್ರಿ ಡಿನ್ನರ್ ಡೇಟ್‌ಗೆ ಹೋಗಿದ್ದರು.
ಅಂದಿನಿಂದ, ಇಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ನಂತರ, ಊರ್ವಶಿ ರಿಷಭ್ ಜೊತೆ ಮಾತನಾಡಲು ಹಲವಾರು ಬಾರಿ ಕಾಲ್ ಮಾಡಿದ್ದರಂತೆ. ಆದರೆ ರಿಷಬ್ ಫೋನ್ ಎತ್ತಲಿಲ್ಲ ಹಾಗೂ ಊರ್ವಶಿಯನ್ನು ವಾಟ್ಸಾಪ್ ಮತ್ತು ಕಾಂಟ್ಯಾಕ್ಟ್ ಲಿಸ್ಟ್‌ನಿಂದ ಬ್ಲಾಕ್ ಮಾಡಿದ್ದಾರೆಂಬ ಸುದ್ದಿ ಸದ್ದು ಮಾಡಿತ್ತು.
ವಾಸ್ತವವಾಗಿ, ಆ ಸಮಯದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಆಡಲು ಪಂತ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದಾಗಿ ಪಂತ್ ತುಂಬಾ ಅಸಮಾಧಾನಗೊಂಡಿದ್ದರು. ಸುದ್ದಿಯ ಪ್ರಕಾರ, ಆಗ ಊರ್ವಶಿಯೊಂದಿಗೆ ಮಾತನಾಡಲು ಈ ಕ್ರಿಕೆಟಗನಿಗೆ ಇಷ್ಟವಿರಲಿಲ್ಲ, ಅದಕ್ಕಾಗಿಯೇ ನಟಿ ನಂಬರ್ ಬ್ಲಾಕ್ ಮಾಡಿದ್ದರಂತೆ.
ಇದರ ನಂತರ, ಪಂತ್ ಹೆಸರು ಇಶಾ ನೇಗಿಯೊಂದಿಗೆ ಸೇರಿಕೊಂಡಿತು. ಇವರಿಬ್ಬರೂ 5 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಹಾಗೂ ಇವರ ರಿಲೆಷನ್‌ಶಿಪ್ ವಿಷಯ 2019ರಲ್ಲಿ ಪಬ್ಲಿಕ್ ಆಯಿತು.
ಪಂತ್ ಗರ್ಲ್‌ಫ್ರೆಂಡ್ ಇಶಾ ಒಬ್ಬ ಉದ್ಯಮಿ ಮತ್ತು ಇಂಟಿರೀಯರ್ ಡಿಸೈನರ್. ಪಂತ್ ಜೊತೆಯ ರಿಲೆಷನ್‌ಶಿಪ್ ಬಹಿರಂಗವಾದ ನಂತರ ಸೆಲೆಬ್ರೆಟಿ ಆಗಿರುವ ಇಶಾ ಇನ್ಸ್ಟಾಗ್ರಾಮ್‌ನಲ್ಲಿ 1.40 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.