ಸಾಕ್ಷಿಯನ್ನು ಧೋನಿ ಮೊದಲು ಭೇಟಿಯಾಗಿದ್ದೆಲ್ಲಿ? ಇಲ್ಲಿದೆ ನೋಡಿ ನಿಜವಾದ ಇಂಟ್ರೆಸ್ಟಿಂಗ್ ಸ್ಟೋರಿ
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಹಾಗೂ ಸಾಕ್ಷಿ ದಾಂಪತ್ಯ ಜೀವನ ಯಶಸ್ವಿಯಾಗಿ 13 ವರ್ಷ ಪೂರೈಸಿದ್ದಾರೆ. ಧೋನಿ ಹಾಗೂ ಸಾಕ್ಷಿ ಭಾರತ ಕ್ರಿಕೆಟ್ನ ಮುದ್ದಾದ ಜೋಡಿಗಳಲ್ಲಿ ಒಂದು ಎನಿಸಿದೆ. ಇನ್ನು ಇದೇ ವೇಳೆ ಧೋನಿ ಮದುವೆಯ ಕುರಿತಂತೆ ಸಾಕಷ್ಟು ಊಹಾಪೋಹಗಳು ಇವೆ. ಇವೆಲ್ಲವುಗಳಿಗೆ ನಾವಿಂದು ತೆರೆ ಎಳೆಯುತ್ತಿದ್ದೇವೆ
ಕ್ರಿಕೆಟ್ ಜಗತ್ತಿನ ಮುದ್ದಾದ ಜೋಡಿಗಳ ಪೈಕಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಜೋಡಿ ಅಗ್ರಸಾಲಿನಲ್ಲಿ ನಿಲ್ಲುತ್ತದೆ. ಆಗಾಗ ಈ ಜೋಡಿ ಮೈದಾನದಲ್ಲಿ ಹಾಗೂ ಮೈದಾನದಾಚೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಇನ್ನು ಧೋನಿ ಮೊದಲ ಬಾರಿಗೆ ಸಾಕ್ಷಿಯನ್ನು ಭೇಟಿಯಾಗಿದ್ದು ಎಲ್ಲಿ? ಅವರು ಬಾಲ್ಯದ ಸ್ನೇಹಿತರಾಗಿದ್ದರೇ ಎಂಬಿತ್ಯಾದಿ ವಿಚಾರಗಳ ಕುರಿತಂತೆ ಆಗಾಗ ಕಪೋಲಕಲ್ಪಿತ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಧೋನಿ-ಸಾಕ್ಷಿ ಮದುವೆಯಾಗಿ 13 ವರ್ಷವೇ ಕಳೆದಿದ್ದರೂ ಈ ಗಾಳಿಸುದ್ದಿಗಳಿಗೇನು ಬ್ರೇಕ್ ಬಿದ್ದಿಲ್ಲ.
ನಾವಿಂದು ಈ ಎಲ್ಲಾ ರೂಮರ್ಸ್ಗಳಿಗೆ ತೆರೆ ಎಳೆಯುತ್ತೇವೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ 2023ರ ಜುಲೈ 04ರಂದು ತಮ್ಮ 13ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.
ಹಲವು ಮಂದಿ ಎಂ ಎಸ್ ಧೋನಿ ಹಾಗೂ ಸಾಕ್ಷಿ ಧೋನಿ ಇಬ್ಬರೂ ಬಾಲ್ಯದ ಸ್ನೇಹಿತರಾಗಿದ್ದರು. ಧೋನಿ ತಂದೆ ಪಾನ್ ಸಿಂಗ್ ಹಾಗೂ ಸಾಕ್ಷಿ ತಂದೆ ಆರ್ ಕೆ ಸಿಂಗ್ ಇಬ್ಬರೂ ಒಂದೇ ಆಫೀಸ್ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂಬ ಸುದ್ದಿ ನಂಬಿಕೊಂಡಿದ್ದರು.
ಇನ್ನು ಇದಷ್ಟೇ ಅಲ್ಲದೇ ಎಂ ಎಸ್ ಧೋನಿ ಹಾಗೂ ಸಾಕ್ಷಿ ಧೋನಿ ಇಬ್ಬರು ರಾಂಚಿಯಲ್ಲಿ ಒಟ್ಟಿಗೆ ಒಂದೇ ಶಾಲೆಯಲ್ಲಿ ಓದಿದ್ದಾರೆ ಎಂಬ ಸುದ್ದಿಯೂ ಸಾಕಷ್ಟು ಕಡೆ ವೈರಲ್ ಆಗಿತ್ತು. ಆದರೆ ಈ ಎಲ್ಲಾ ಸುದ್ದಿಗಳು ಅಕ್ಷರಶಃ ಸುಳ್ಳು.
ಇಬ್ಬರು ಒಟ್ಟಿಗೆ ಒಂದೇ ಶಾಲೆಯಲ್ಲಿ ಓದಿದ್ದಾರೆ ಎನ್ನುವ ವಿಚಾರವನ್ನು ಈ ಹಿಂದೆಯೇ ಸ್ವತಃ ಎಂ ಎಸ್ ಧೋನಿ ಹಾಗೂ ಸಾಕ್ಷಿ ಧೋನಿ ಇಬ್ಬರು ಅಲ್ಲಗಳೆದಿದ್ದಾರೆ. ನನಗೂ ಮತ್ತು ಸಾಕ್ಷಿ ನಡುವೆ 7 ವರ್ಷ ವಯಸ್ಸಿನ ಅಂತರವಿದೆ ಎಂದು ಧೋನಿ ಹೇಳಿದ್ದಾರೆ.
ಹೀಗಾಗಿ ಧೋನಿ ಹಾಗೂ ಸಾಕ್ಷಿ ಒಟ್ಟಿಗೆ ಒಂದೇ ಶಾಲೆಯಲ್ಲಿ ಓದುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು 2020ರಲ್ಲಿ ಇನ್ಸ್ಟಾಗ್ರಾಂ ಲೈವ್ನಲ್ಲಿ ಸ್ವತಃ ಸಾಕ್ಷಿ ಧೋನಿ, ಮದುವೆಗೂ ಮುನ್ನ ತಾವು ರಾಂಚಿಗೆ ಹೋಗಿಯೇ ಇಲ್ಲ ಎಂದು ಹೇಳಿದ್ದಾರೆ.
ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಹಾಗೂ ಸಾಕ್ಷಿ ಧೋನಿ, ಡಿಸೆಂಬರ್ 19, 2007ರಲ್ಲಿ ಕೋಲ್ಕತಾದ ಹೋಟೆಲ್ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಧೋನಿ, ಟೀಂ ಇಂಡಿಯಾ ಜತೆ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾಗಲೇ ಆ ಹೋಟೆಲ್ನಲ್ಲಿ ಸಾಕ್ಷಿ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದರು.
ಸಾಕ್ಷಿ ಇಂಟರ್ನ್ಶಿಪ್ನ ಕೊನೆಯ ದಿನ ಕಾಮನ್ಫ್ರೆಂಡ್ ಮೂಲಕ ಧೋನಿಯನ್ನು ಮೊದಲ ಬಾರಿ ಭೇಟಿಯಾಗಿದ್ದರು. ಇದಾದ ಬಳಿಕ ಇಬ್ಬರ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಜುಲೈ 04, 2010ರಲ್ಲಿ ಡೆಹರಾಡೂನ್ನಲ್ಲಿ ಧೋನಿ-ಸಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ಧೋನಿ ಹಾಗೂ ಸಾಕ್ಷಿ ಮದುವೆಯಾದ ಮೂರು ದಿನಗಳ ಬಳಿಕ ಧೋನಿ ಹುಟ್ಟುಹಬ್ಬವಾದ ಜುಲೈ 07ರಂದು ಮೊದಲ ಬಾರಿಗೆ ಧೋನಿಯ ಹುಟ್ಟೂರು ರಾಂಚಿಗೆ ಭೇಟಿ ನೀಡಿದ್ದರು. ಈ ಸುಂದರ ಕುಟುಂಬಕ್ಕೆ ಝಿವಾ ಎನ್ನುವ ಮಗಳು ಸಾಥ್ ನೀಡಿದ್ದಾರೆ.