WPL 2026 ಹರಾಜಿಗೂ ಮುನ್ನವೇ ಎದುರಾಳಿಗಳಿಗೆ ಬೆವರಿಳಿಸಿದ ಆರ್‌ಸಿಬಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡವು WPL 2026 ಗಾಗಿ ಸ್ಮೃತಿ ಮಂಧಾನ, ರಿಚಾ ಘೋಷ್ ಸೇರಿದಂತೆ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುವ ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ಮತ್ತೊಂದು ಟ್ರೋಫಿಗಾಗಿ ಆರ್‌ಸಿಬಿ ರೆಡಿ
2024ರ WPL ಟ್ರೋಫಿ ಗೆದ್ದ RCB, 2026ರ ಮೆಗಾ ಹರಾಜಿಗೆ ಸಜ್ಜಾಗಿದೆ. ನಾಯಕಿ ಸ್ಮೃತಿ ಮಂಧನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ ಮತ್ತು ಶ್ರೇಯಾಂಕಾ ಪಾಟೀಲ್ ಅವರನ್ನು ಉಳಿಸಿಕೊಂಡಿದೆ.
ಈ ನಾಲ್ವರಿಗೆ ₹8.85 ಕೋಟಿ ಖರ್ಚು ಮಾಡಿದ್ದು, ಉಳಿದ ₹6.15 ಕೋಟಿಯೊಂದಿಗೆ ನವೆಂಬರ್ 27ರ ಹರಾಜಿನಲ್ಲಿ ಭಾಗವಹಿಸಲಿದೆ.
ಸ್ಮೃತಿ ಮಂಧಾನ ಜೊತೆ ಆರ್‌ಸಿಬಿ ಬಲಿಷ್ಠ ಬ್ಯಾಟಿಂಗ್
ಭಾರತದ ಉಪನಾಯಕಿ ಸ್ಮೃತಿ ಮಂಧಾನರನ್ನು ಆರ್‌ಸಿಬಿ ₹3.50 ಕೋಟಿಗೆ ಉಳಿಸಿಕೊಂಡಿದೆ. 2024ರಲ್ಲಿ ತಂಡಕ್ಕೆ ಮೊದಲ ಟೈಟಲ್ ಗೆಲ್ಲಿಸಿಕೊಟ್ಟಿದ್ದ ಅವರು, 2025ರ ವಿಶ್ವಕಪ್‌ನಲ್ಲೂ ಅತಿ ಹೆಚ್ಚು ರನ್ ಗಳಿಸಿದ್ದರು.
ಸ್ಮೃತಿ ನಾಯಕತ್ವದಲ್ಲಿ ಆರ್‌ಸಿಬಿಯ ಆತ್ಮವಿಶ್ವಾಸ ಹೆಚ್ಚಿದೆ. ಅವರ ಬ್ಯಾಟಿಂಗ್ ಜೊತೆಗೆ ತಂತ್ರಗಾರಿಕೆಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದೆ.
ಎಲ್ಲಿಸ್ ಪೆರ್ರಿ, ರಿಚಾ ಘೋಷ್ ಅವರನ್ನು ಉಳಿಸಿಕೊಂಡ ಆರ್‌ಸಿಬಿ
ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿಯನ್ನು ಆರ್‌ಸಿಬಿ ₹2 ಕೋಟಿಗೆ ಉಳಿಸಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರು ತಂಡಕ್ಕೆ ಆಧಾರವಾಗಿದ್ದಾರೆ.
ಯುವ ವಿಕೆಟ್ ಕೀಪರ್ ರಿಚಾ ಘೋಷ್ ಅವರನ್ನು ₹2.75 ಕೋಟಿಗೆ ಉಳಿಸಿಕೊಳ್ಳಲಾಗಿದೆ. ಅವರ ಫಿನಿಶಿಂಗ್ ಕೌಶಲ್ಯ ಮತ್ತು ಪವರ್ ಹಿಟ್ಟಿಂಗ್ ಮೇಲೆ ತಂಡಕ್ಕೆ ನಂಬಿಕೆ ಇದೆ.
ಯುವ ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಮೇಲೆ ಆರ್‌ಸಿಬಿಗೆ ಬಲವಾದ ನಂಬಿಕೆ
ಯುವ ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಅವರನ್ನು ಆರ್‌ಸಿಬಿ ₹60 ಲಕ್ಷಕ್ಕೆ ಉಳಿಸಿಕೊಂಡಿದೆ. 2024ರಲ್ಲಿ 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದಿದ್ದರು. ಗಾಯದಿಂದ ಚೇತರಿಸಿಕೊಂಡು ಈ ಬಾರಿ ಕಣಕ್ಕಿಳಿಯಲಿದ್ದಾರೆ.
ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರ್ತಿಯರು ಯಾರು?
ಆರ್‌ಸಿಬಿ ಈ ಬಾರಿ ದೊಡ್ಡ ಬದಲಾವಣೆ ಮಾಡಿದೆ. ಮೇಘನಾ, ಸ್ನೇಹ ರಾಣಾ, ಕನಿಕಾ, ಆಶಾ, ರೇಣುಕಾ, ಸೋಫಿ ಡಿವೈನ್, ಹೀದರ್ ಗ್ರಹಾಂ, ಕೇಟ್ ಕ್ರಾಸ್ ರನ್ನು ಬಿಡುಗಡೆ ಮಾಡಿದೆ.
ತಂಡಕ್ಕೆ ಒಂದು RTM ಕಾರ್ಡ್ ಇದ್ದು, ಬಿಡುಗಡೆ ಮಾಡಿದ ಆಟಗಾರ್ತಿಯನ್ನು ಮತ್ತೆ ಖರೀದಿಸುವ ಅವಕಾಶವಿದೆ.