IPL 2021: ಈ ಐವರಿಗೆ ಗೇಟ್‌ಪಾಸ್ ನೀಡುತ್ತಾ ಆರ್‌ಸಿಬಿ..?
ಬೆಂಗಳೂರು: ಕಳೆದ 13 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಾದರೂ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಹೀಗಾಗಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟಲು ಬೆಂಗಳೂರು ಮೂಲದ ಫ್ರಾಂಚೈಸಿ ಮುಂದಾಗಿದೆ.ಇದರ ಬೆನ್ನಲ್ಲೇ ಆಟಗಾರರ ರೀಟೈನ್ ಹಾಗೂ ರಿಲೀಸ್‌ಗೆ ಇಂದು(ಜ.20) ಕಡೆಯ ದಿನವಾಗಿದ್ದು, ಆರ್‌ಸಿಬಿ ಫ್ರಾಂಚೈಸಿ ಈ ಐವರು ಆಟಗಾರರಿಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

1. ಉಮೇಶ್ ಯಾದವ್

1. ಉಮೇಶ್ ಯಾದವ್

ವೇಗದ ಬೌಲರ್, ಕಳೆದ ಎರಡು ಆವೃತ್ತಿಗಳಲ್ಲೂ ದುಬಾರಿ ಬೌಲರ್ ಎನಿಸಿರುವ ಉಮೇಶ್ ಯಾದವ್ 4 ಕೋಟಿ ರುಪಾಯಿಗೆ ಬಿಡ್ ಆಗಿದ್ದರು. ನಿರೀಕ್ಷಿತ ಪ್ರದರ್ಶನ ಮೂಡಿ ಬರದ ಬೆನ್ನಲ್ಲೇ ಉಮೇಶ್ ಯಾದವ್‌ಗೆ ಗೇಟ್‌ಪಾಸ್ ಸಿಗುವ ಸಾಧ್ಯತೆಯಿದೆ.

2. ಶಿವಂ ದುಬೆ:

2. ಶಿವಂ ದುಬೆ:

ಮುಂಬೈ ಮೂಲದ ಆಲ್ರೌಂಡರ್ ಶಿವಂ ದುಬೆಯನ್ನು 5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ದುಬೆ ಕೂಡಾ ಸಾಕಷ್ಟು ದುಬಾಯಿಯಾಗಿದ್ದು, ಆರ್‌ಸಿಬಿ ತಂಡದಿಂದ ಕೈಬಿಡುವ ಸಾಧ್ಯತೆಯಿದೆ.

3. ಕ್ರಿಸ್ ಮೋರಿಸ್

3. ಕ್ರಿಸ್ ಮೋರಿಸ್

ದಕ್ಷಿಣ ಆಫ್ರಿಕಾ ಮೂಲದ ಆಲ್ರೌಂಡರ್ ಕ್ರಿಸ್ ಮೋರಿಸ್ ಸಾಕಷ್ಟು ದುಬಾರಿ ಮೊತ್ತಕ್ಕೆ ಆರ್‌ಸಿಬಿ ಕೂಡಿಕೊಂಡಿದ್ದರು. ಒಂದೆರಡು ಪಂದ್ಯಗಳಲ್ಲಿ ಮೋರಿಸ್ ಮಿಂಚಿದ್ದು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಅಬ್ಬರಿಸಿರಲಿಲ್ಲ.

4. ಇಸುರು ಉದಾನ

4. ಇಸುರು ಉದಾನ

ಕೇವಲ 50 ಲಕ್ಷ ರುಪಾಯಿಗೆ ಆರ್‌ಸಿಬಿ ತಂಡ ಕೂಡಿಕೊಂಡಿದ್ದ ಲಂಕಾ ಆಲ್ರೌಂಡರ್ ಉದಾನ ಕೂಡಾ ಬೌಲಿಂಗ್‌ನಲ್ಲಿ ಸಾಕಷ್ಟು ದುಬಾರಿಯಾಗಿದ್ದರು. ಇನ್ನು ಬ್ಯಾಟಿಂಗ್‌ನಲ್ಲೂ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ.

5. ಮೋಯಿನ್ ಅಲಿ

5. ಮೋಯಿನ್ ಅಲಿ

ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಮೋಯಿನ್ ಅಲಿಗೂ ಆರ್‌ಸಿಬಿ ಈ ಬಾರಿ ಗೇಟ್‌ಪಾಸ್ ನೀಡುವ ಸಾಧ್ಯತೆ ಇದೆ. ಕಳೆದ ಆವೃತ್ತಿಯಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಅಲಿ ವಿಫಲವಾಗಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.