- Home
- Sports
- Cricket
- ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಲಕ್ಕಿ ಆಟಗಾರ ಸೇರಿ ಈ 5 ಆಟಗಾರನ್ನು ಕೈಬಿಡುತ್ತಾ ಆರ್‌ಸಿಬಿ?
ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಲಕ್ಕಿ ಆಟಗಾರ ಸೇರಿ ಈ 5 ಆಟಗಾರನ್ನು ಕೈಬಿಡುತ್ತಾ ಆರ್‌ಸಿಬಿ?
ಬೆಂಗಳೂರು: ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದೆ. ಹೀಗಿದ್ದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮೊದಲು ಈ 5 ಆಟಗಾರರಿಗೆ ಗೇಟ್ ಪಾಸ್ ಕೊಡುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಪ್ರಶಸ್ತಿ ಬರ ನೀಗಿಸಿಕೊಂಡ ಆರ್‌ಸಿಬಿ
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
RCB 5 ಆಟಗಾರರಿಗೆ ಗೇಟ್‌ಪಾಸ್
ಇನ್ನು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಬಹುತೇಕ ಎಲ್ಲಾ ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಿದ್ದೂ ಈ ಐದು ಆಟಗಾರರಿಗೆ ಮಿನಿ ಹರಾಜಿಗೂ ಮುನ್ನ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ. ಯಾರು 5 ಆಟಗಾರರು ನೋಡೋಣ ಬನ್ನಿ.
1. ಟಿಮ್ ಸೈಫರ್ಟ್:
ನ್ಯೂಜಿಲೆಂಡ್ ಮೂಲದ ಸ್ಪೋಟಕ ಅಗ್ರಕ್ರಮಾಂಕದ ಬ್ಯಾಟರ್ ಟಿಮ್ ಸೈಫರ್ಟ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಜೆಕೊಬ್ ಬೆಥೆಲ್ ಬದಲಿಗೆ ತಾತ್ಕಲಿಕವಾಗಿ ತಂಡ ಕೂಡಿಕೊಂಡಿದ್ದ ಸೈಫರ್ಟ್ ಅವರನ್ನು ಆರ್‌ಸಿಬಿ ತಂಡದಿಂದ ರಿಲೀಸ್ ಮಾಡುವುದು ಬಹುತೇಕ ಖಚಿತ ಎನಿಸಿದೆ.
2. ಬ್ಲೆಸ್ಸಿಂಗ್ ಮುಜರಬಾನಿ:
ಲುಂಗಿ ಎಂಗಿಡಿ ಬದಲಿಗೆ ಜಿಂಬಾಬ್ವೆ ಮೂಲದ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಪ್ಲೇ ಆಫ್ ಪಂದ್ಯಕ್ಕೆ ತಾತ್ಕಾಲಿಕವಾಗಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಮುಜರಬಾನಿ ಅವರಿಗೆ ಒಂದೇ ಒಂದು ಪಂದ್ಯವನ್ನಾಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಮುಜರಬಾನಿ ಅವರನ್ನು ಬೆಂಗಳೂರು ಫ್ರಾಂಚೈಸಿಯು ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.
3. ಲುಂಗಿ ಎಂಗಿಡಿ:
ದಕ್ಷಿಣ ಆಫ್ರಿಕಾ ಮೂಲದ ಅನುಭವಿ ವೇಗದ ಬೌಲರ್ ಲುಂಗಿ ಎಂಗಿಡಿಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ ಎಂಗಿಡಿ 4 ವಿಕೆಟ್ ಕಬಳಿಸಿದ್ದರು. ತಂಡದಲ್ಲಿ ಜೋಶ್ ಹೇಜಲ್‌ವುಡ್, ನುವಾನ್ ತುಷಾರ ಅವರಂತಹ ವಿದೇಶಿ ವೇಗಿಗಳಿರುವುದರಿಂದ ಎಂಗಿಡಿ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಡುವ ಸಾದ್ಯತೆಯಿದೆ.
4. ಸ್ವಪ್ನಿಲ್ ಸಿಂಗ್:
2024ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಕ್ಕಿ ಚಾರ್ಮ್ ಆಗಿದ್ದ ಸ್ವಪ್ನಿಲ್ ಸಿಂಗ್‌ಗೆ ಈ ಬಾರಿಯ ಐಪಿಎಲ್‌ನಲ್ಲಿ ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ. ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಸ್ವಪ್ನಿಲ್‌ಗೆ ಗೇಟ್ ಪಾಸ್ ನೀಡುವುದು ಬಹುತೇಕ ಖಚಿತ.
5. ಲಿಯಾಮ್ ಲಿವಿಂಗ್‌ಸ್ಟೋನ್:
ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಲಿವಿಂಗ್‌ಸ್ಟೋನ್ 10 ಪಂದ್ಯಗಳನ್ನಾಡಿ ಕೇವಲ 112 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಲಿವಿಂಗ್‌ಸ್ಟೋನ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ತಂಡದಿಂದ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.