MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲಿನ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಅವರ ಕ್ಯಾಪ್ಟನ್ಸಿ ನಿರ್ಧಾರಗಳ ವಿರುದ್ಧ ರವಿಚಂದ್ರನ್ ಅಶ್ವಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

2 Min read
Author : Naveen Kodase
Published : Apr 13 2026, 05:30 PM IST
Share this Photo Gallery
  • FB
  • TW
  • Linkdin
  • Whatsapp
17
ಹಾರ್ದಿಕ್ ಪಾಂಡ್ಯ ನಾಯಕತ್ವ ಟೀಕಿಸಿದ ಅಶ್ವಿನ್
Image Credit : Facebook/Chennai Super Kings

ಹಾರ್ದಿಕ್ ಪಾಂಡ್ಯ ನಾಯಕತ್ವ ಟೀಕಿಸಿದ ಅಶ್ವಿನ್

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ, ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್, ನಾಯಕ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದ್ದಾರೆ.
27
ಸರಾಸರಿಗಿಂತ ಕಳಪೆ ನಾಯಕತ್ವ
Image Credit : Getty

ಸರಾಸರಿಗಿಂತ ಕಳಪೆ ನಾಯಕತ್ವ

ಸ್ಪಿನ್ನರ್‌ಗಳನ್ನು ಚೆನ್ನಾಗಿ ಎದುರಿಸುವ ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ಗೆ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅವರನ್ನು ಬೌಲಿಂಗ್‌ಗೆ ಇಳಿಸಿದ ಹಾರ್ದಿಕ್ ನಿರ್ಧಾರ ದೊಡ್ಡ ತಪ್ಪು. ಈ ಪಂದ್ಯದಲ್ಲಿ ಹಾರ್ದಿಕ್ ನಾಯಕತ್ವ ತೀರಾ ಸಾಧಾರಣವಾಗಿತ್ತು ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

Related Articles

Related image1
IPL 2026: ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
Related image2
ಹಾರ್ದಿಕ್ ಪಾಂಡ್ಯ ಔಟಾಗುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಕೃನಾಲ್ ಪಾಂಡ್ಯ! ದಾಯಾದಿಗಳಾದ್ರಾ ಅಣ್ತಮ್ಮಾಸ್? ವಿಡಿಯೋ ವೈರಲ್
37
ಹೈದರಾಬಾದ್‌ನಲ್ಲಿ ಮನಬಂದಂತೆ ಥಳಿಸಿದ್ದ ಪಾಟೀದಾರ್
Image Credit : ANI

ಹೈದರಾಬಾದ್‌ನಲ್ಲಿ ಮನಬಂದಂತೆ ಥಳಿಸಿದ್ದ ಪಾಟೀದಾರ್

2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ ಪಾಟಿದಾರ್, ಮಯಾಂಕ್ ಮಾರ್ಕಂಡೆ ಅವರನ್ನು ಎದುರಿಸಿದ ರೀತಿಯನ್ನು ಅಶ್ವಿನ್ ನೆನಪಿಸಿಕೊಂಡಿದ್ದಾರೆ. ರಜತ್ ಪಾಟಿದಾರ್ ಒಬ್ಬ ಸ್ಪಿನ್ ಹಿಟ್ಟರ್ ಎಂದು ಜಗತ್ತಿಗೆ ಸಾರಿದ್ದು ಆ ಪಂದ್ಯದಲ್ಲಿ. ಅಂದು ಹೈದರಾಬಾದ್‌ನಲ್ಲಿ ಮಾರ್ಕಂಡೆಗೆ ಪಾಟಿದಾರ್ ಮನಬಂದಂತೆ ಥಳಿಸಿದ್ದರು. ಆವತ್ತು ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಬಾರಿಸಿದ್ದರು, ಈ ಪಂದ್ಯದಲ್ಲಿ ಮೂರು ಸಿಕ್ಸರ್‌ಗಳನ್ನು ಹೊಡೆದರು. ಪಾಟಿದಾರ್ ಕ್ರೀಸ್‌ಗೆ ಬಂದ ತಕ್ಷಣ ಮತ್ತೆ ಮಾರ್ಕಂಡೆಗೆ ಬೌಲಿಂಗ್ ನೀಡುವುದು ಬುದ್ಧಿವಂತಿಕೆಯ ನಡೆಯಾಗಿರಲಿಲ್ಲ ಎಂದು ಅಶ್ವಿನ್ ಹೇಳಿದರು.

47
ಸ್ಪಿನ್ನರ್‌ಗಳ ವೈಫಲ್ಯ; ಕೈತಪ್ಪಿದ ಪಂದ್ಯ
Image Credit : Getty

ಸ್ಪಿನ್ನರ್‌ಗಳ ವೈಫಲ್ಯ; ಕೈತಪ್ಪಿದ ಪಂದ್ಯ

ಈ ಪಂದ್ಯದಲ್ಲಿ ಮುಂಬೈ ಸ್ಪಿನ್ನರ್‌ಗಳು ನೀಡಿದ ರನ್‌ಗಳೇ ಸೋಲು-ಗೆಲುವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸಿತು ಎಂದು ಅಶ್ವಿನ್ ಹೇಳಿದರು. ಮಯಾಂಕ್ ಮಾರ್ಕಂಡೆ 2 ಓವರ್‌ಗಳಲ್ಲಿ 40 ರನ್ (ಎಕಾನಮಿ: 20.00) ನೀಡಿದರೆ, ಮಿಚೆಲ್ ಸ್ಯಾಂಟ್ನರ್ 4 ಓವರ್‌ಗಳಲ್ಲಿ 43 ರನ್ ಬಿಟ್ಟುಕೊಟ್ಟರು.
57
6 ಓವರ್‌ಗಳಲ್ಲಿ 83 ರನ್
Image Credit : ANI

6 ಓವರ್‌ಗಳಲ್ಲಿ 83 ರನ್

ಸ್ಪಿನ್ನರ್‌ಗಳು ಇಷ್ಟೊಂದು ರನ್ ಬಿಟ್ಟುಕೊಟ್ಟಿದ್ದರಿಂದಲೇ ಆರ್‌ಸಿಬಿ ಸ್ಕೋರ್ 210ರ ನಿರೀಕ್ಷೆಯಿಂದ 240ಕ್ಕೆ ಏರಿತು. ಪಾಟಿದಾರ್‌ರಂತಹ ಆಟಗಾರನಿಗೆ ಸೆಟ್ ಆಗಲು ಬೇಕಾದ ಎಸೆತಗಳನ್ನು ಹಾರ್ದಿಕ್ ನೀಡಿದರು. ಪಾಟಿದಾರ್ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

67
ನಾಯಕತ್ವ ಬದಲಾವಣೆಯ ಪರೋಕ್ಷ ಸುಳಿವು
Image Credit : Getty

ನಾಯಕತ್ವ ಬದಲಾವಣೆಯ ಪರೋಕ್ಷ ಸುಳಿವು

ಐಪಿಎಲ್ 2026 ಪ್ರಾರಂಭವಾಗುವ ಮೊದಲೇ, ಭಾರತ ತಂಡದ ನಾಯಕನೂ ಆಗಿರುವ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಬೇಕು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದರು. ಹಾರ್ದಿಕ್ ನಾಯಕತ್ವದಲ್ಲಿನ ಲೋಪಗಳು ತಂಡವನ್ನು ಸಂಕಷ್ಟಕ್ಕೆ ದೂಡುತ್ತಿವೆ ಎನ್ನುವುದು ಅಶ್ವಿನ್ ವಾದವಾಗಿದೆ.

77
ಮುಂದಿನ ಪಂದ್ಯವೂ ಕಠಿಣ
Image Credit : X/PunjabKingsIPL

ಮುಂದಿನ ಪಂದ್ಯವೂ ಕಠಿಣ

ನಾಲ್ಕು ಪಂದ್ಯಗಳಲ್ಲಿ ಮೂರು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿರುವ ಮುಂಬೈ, ತನ್ನ ಮುಂದಿನ ಪಂದ್ಯವನ್ನು ಗುರುವಾರ ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯವೂ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದುವರೆಗೆ ಸೋಲರಿಯದ ಪಂಜಾಬ್, ನಾಲ್ಕು ಪಂದ್ಯಗಳಿಂದ 7 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಮುಂಬೈ ಇಂಡಿಯನ್ಸ್
ಹಾರ್ದಿಕ್ ಪಾಂಡ್ಯ

Latest Videos
Recommended Stories
Recommended image1
ಜಸ್ಪ್ರೀತ್ ಬುಮ್ರಾಗೆ ಇದೇನಾಯ್ತು? 5 ಮ್ಯಾಚ್, 122 ಎಸೆತ ಆದ್ರೆ ಒಂದೇ ಒಂದು ವಿಕೆಟ್ ಇಲ್ಲ! ಇಲ್ಲಿದೆ 3 ಇಂಟ್ರೆಸ್ಟಿಂಗ್ ಕಾರಣಗಳು
Recommended image2
ಐಪಿಎಲ್ ಇತಿಹಾಸ: ಮೊದಲ ಬಾಲ್, ಮೊದಲ ಸೆಂಚುರಿ, ಮೊದಲ ಸ್ಟಂಪ್! ಇಲ್ಲಿದೆ ರೋಚಕ ಕಹಾನಿ
Recommended image3
ಡಗೌಟ್‌ನಲ್ಲಿ ಫೋನ್ ಬಳಕೆ: ರಾಜಸ್ಥಾನ ರಾಯಲ್ಸ್ ಮ್ಯಾನೇಜರ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್!
Related Stories
Recommended image1
IPL 2026: ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
Recommended image2
ಹಾರ್ದಿಕ್ ಪಾಂಡ್ಯ ಔಟಾಗುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಕೃನಾಲ್ ಪಾಂಡ್ಯ! ದಾಯಾದಿಗಳಾದ್ರಾ ಅಣ್ತಮ್ಮಾಸ್? ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved