IPL 2025: ಆರೆಂಜ್ ಆರ್ಮಿಗೆ ಮರಳಿದ ಆಸೀಸ್ ಡೇಂಜರಸ್ ಆಟಗಾರರು!
SRH ಪ್ಲೇಆಫ್ ನಿಂದ ಹೊರಬಿದ್ದರೂ, ಪ್ಯಾಟ್ ಕಮಿನ್ಸ್ ಮತ್ತು ಟ್ರ್ಯಾವಿಸ್ ಹೆಡ್ ಉಳಿದ ಐಪಿಎಲ್ 2025 ಪಂದ್ಯಗಳಿಗೆ ಆರೆಂಜ್ ಆರ್ಮಿ ಪಡೆಗೆ ಮರಳಲಿದ್ದಾರೆ.

WTC ಫೈನಲ್‌ಗೆ ಆಸೀಸ್ ತಂಡ
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಆಫ್ ನಿಂದ ಹೊರಬಿದ್ದರೂ, ನಾಯಕ ಪ್ಯಾಟ್ ಕಮಿನ್ಸ್ ಮತ್ತು ಟ್ರ್ಯಾವಿಸ್ ಹೆಡ್ ಉಳಿದ ಐಪಿಎಲ್ 2025 ಪಂದ್ಯಗಳಿಗೆ SRH ತಂಡಕ್ಕೆ ಮರಳಲಿದ್ದಾರೆ.
WTC ಫೈನಲ್
ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿರುವ ಆಸ್ಟ್ರೇಲಿಯಾದ ಕಮಿನ್ಸ್ ಮತ್ತು ಹೆಡ್, ಮೇ 17 ರಿಂದ ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಉಳಿದ ಪಂದ್ಯಗಳಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮತ್ತೆ ಸೇರ್ಪಡೆಯಾಗಲಿದ್ದಾರೆ ಎಂದು ESPNcricinfo ವರದಿ ಮಾಡಿದೆ.
ಐಪಿಎಲ್ 2025, 18ನೇ ಆವೃತ್ತಿ
ಕಳೆದ ವಾರ, ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯಿಂದಾಗಿ 18ನೇ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಒಂದು ವಾರ ಮುಂದೂಡಲಾಗಿತ್ತು. ಉಳಿದ ಪಂದ್ಯಗಳು ನಡೆಯುತ್ತವೆಯೇ ಅಥವಾ ರದ್ದಾಗುತ್ತವೆಯೇ ಎಂಬ ಗೊಂದಲವಿತ್ತು. ಆದರೆ, ಐಪಿಎಲ್ ಪಂದ್ಯಗಳು ಮತ್ತೆ ಆರಂಭವಾಗುತ್ತವೆ ಎಂದು ಬಿಸಿಸಿಐ ಘೋಷಿಸಿದ ನಂತರ ಸ್ಪಷ್ಟನೆ ಸಿಕ್ಕಿದೆ.
WTCಗೆ ಕಮಿನ್ಸ್ & ಹೆಡ್
ಜೂನ್ 11 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಆಸ್ಟ್ರೇಲಿಯಾ ತಂಡದಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಟ್ರ್ಯಾವಿಸ್ ಹೆಡ್ ಅವರನ್ನು ಆಯ್ಕೆ ಮಾಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇಆಫ್‌ನಿಂದ ಹೊರಬಿದ್ದಿರುವುದರಿಂದ, ಅವರ ಭಾಗವಹಿಸುವಿಕೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.
SRH ನಾಯಕ ಕಮ್ಮಿನ್ಸ್ & ಹೆಡ್
ESPNcricinfo ಪ್ರಕಾರ, ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಟ್ರ್ಯಾವಿಸ್ ಹೆಡ್ ಭಾರತಕ್ಕೆ ಮರಳುವ ಬಗ್ಗೆ SRHಗೆ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಭಾರತಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂದು ಕಮಿನ್ಸ್ ಅವರ ಮ್ಯಾನೇಜರ್ ನೀಲ್ ಮ್ಯಾಕ್ಸ್‌ವೆಲ್ ದೃಢಪಡಿಸಿದ್ದಾರೆ.
ಇತರ ವಿದೇಶಿ ಆಟಗಾರರು ಇನ್ನೂ ದೃಢಪಡಿಸಿಲ್ಲ
ಹೆನ್ರಿಕ್ ಕ್ಲಾಸೆನ್, ಇಶಾನ್ ಮಲಿಂಗಾ, ಕಮಿಂಡು ಮೆಂಡಿಸ್ ಮತ್ತು ವಿಯಾನ್ ಮುಲ್ಡರ್ ಸೇರಿದಂತೆ ಇತರ ವಿದೇಶಿ ಆಟಗಾರರು SRHಗೆ ಮರಳುತ್ತಾರೆಯೇ ಎಂಬುದು ಇನ್ನೂ ದೃಢವಾಗಿಲ್ಲ ಎಂದು ESPNcricinfo ತಿಳಿಸಿದೆ. WTC ಫೈನಲ್‌ಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಮುಲ್ಡರ್ ಸ್ಥಾನ ಪಡೆದಿದ್ದಾರೆ.