MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಐಸಿಸಿ ಏಕದಿನ ವಿಶ್ವಕಪ್ ದಿನಾಂಕ ನಿಗಧಿ, ಕಮ್‌ಬ್ಯಾಕ್‌ಗೆ ಸಜ್ಜಾದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ

ಐಸಿಸಿ ಏಕದಿನ ವಿಶ್ವಕಪ್ ದಿನಾಂಕ ನಿಗಧಿ, ಕಮ್‌ಬ್ಯಾಕ್‌ಗೆ ಸಜ್ಜಾದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ದಿನಾಂಕ ಅಂತಿಮಗೊಂಡಿದೆ. ಐಸಿಸಿ ಸಭೆಯಲ್ಲಿ ಚರ್ಚಿಸಿ ದಿನಾಂಕ ಫೈನಲ್ ಮಾಡಲಾಗಿದೆ. ವಿಶೇಷ ಅಂದರೆ ಇದೀಗ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

1 Min read
Author : Chethan Kumar
Published : Jun 12 2026, 06:40 PM IST
Share this Photo Gallery
  • FB
  • TW
  • Linkdin
  • Whatsapp
16
ಐಸಿಸಿ ಎಕದಿನ ವಿಶ್ವಕಪ್ ದಿನಾಂಕ ಫಿಕ್ಸ್
Image Credit : Getty

ಐಸಿಸಿ ಎಕದಿನ ವಿಶ್ವಕಪ್ ದಿನಾಂಕ ಫಿಕ್ಸ್

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿಗಳು ಆರಂಭಗೊಂಡಿದೆ. ಹಲವು ಸುತ್ತಿನ ಚರ್ಚೆ, ಸಭೆಗಳ ಬಳಿಕ ಇದೀಗ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ದಿನಾಂಕ ನಿಗಧಿಯಾಗಿದೆ. 2027ರ ಅಕ್ಟೋಬರ್ 4 ರಂದು ಐಸಿಸಿ ಎಕದಿನ ವಿಶ್ವಕಪ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ದಿನಾಂಕ ಬಹುತೇಕ ಅಂತಿಮಗೊಂಡಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನವೆಂಬರ್ 21ರ ವರೆಗೆ ವಿಶ್ವಕಪ್ ಟೂರ್ನಿ
Image Credit : Google

ನವೆಂಬರ್ 21ರ ವರೆಗೆ ವಿಶ್ವಕಪ್ ಟೂರ್ನಿ

2027ರ ಅಕ್ಟೋಬರ್ 4 ರಿಂದ ನವೆಂಬರ್ 21ರ ವರೆಗೆ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅಹಮ್ಮದಾಬಾದ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ದಿನಾಂಕ ಅಂತಿಮಗೊಳಿಸಲಾಗಿದೆ. ಐಸಿಸಿ ಸದಸ್ಯ ರಾಷ್ಟ್ರಗಳು ದಿನಾಂಕಕ್ಕೆ ಸಮ್ಮತಿ ಸೂಚಿಸಿದೆ. ಇದೀಗ ತಯಾರಿಗಳು ಆರಂಭಗೊಂಡಿದೆ.

Related Articles

Related image1
'ಬೇಕಿದ್ರೆ ಆಯ್ಕೆ ಮಾಡಲಿ...': BCCI ಆಯ್ಕೆ ಸಮಿತಿಗೆ ನೇರವಾಗಿ ಟಾಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್..!
Related image2
ಸಂಕಷ್ಟದಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ, ತಂಡದ ಆಯ್ಕೆಯಲ್ಲಿ ಗೋಲ್‌ಮಾಲ್ ಆರೋಪ
36
ಮೂರು ದೇಶಗಳಿಗೆ ಆತಿಥ್ಯ
Image Credit : Google

ಮೂರು ದೇಶಗಳಿಗೆ ಆತಿಥ್ಯ

2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ್ನು ಮೂರು ದೇಶ ಆತಿಥ್ಯವಹಿಸಿದೆ. ಸೌತ್ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮಿಬಿಯಾ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿ ಆತಿಥ್ಯವಹಿಸಿದೆ. ಒಟ್ಟು 54 ಪಂದ್ಯಗಳ ಪೈಕಿ 41 ಪಂದ್ಯಗಳು ಸೌತ್ ಆಫ್ರಿಕಾದಲ್ಲಿ, 8 ಪಂದ್ಯ ಜಿಂಬಾಬ್ವೆ ಹಾಗೂ 3 ಪಂದ್ಯಗಳು ನಮಿಬಿಯಾದಲ್ಲಿ ಆಯೋಜನೆಗೊಳ್ಳಲಿದೆ.

46
ಕೊಹ್ಲಿ-ರೋಹಿತ್‌ ಕಮ್‌ಬ್ಯಾಕ್ ತಯಾರಿ
Image Credit : our own

ಕೊಹ್ಲಿ-ರೋಹಿತ್‌ ಕಮ್‌ಬ್ಯಾಕ್ ತಯಾರಿ

2027ರ ಅಕ್ಟೋಬರ್ ತಿಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಅಂದರೆ ಸರಿಸುಮಾರು ಒಂದೂವರೆ ವರ್ಷವಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಬ್ಬರಿಗೂ ಇನ್ನು ಒಂದೂವರೆ ವರ್ಷ ಸಮಯವಿದೆ.

56
ರೋಹಿತ್ 39, ಕೊಹ್ಲಿ 37
Image Credit : our own

ರೋಹಿತ್ 39, ಕೊಹ್ಲಿ 37

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಭವಿಷ್ಯದ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಸದ್ಯ ರೊಹಿತ್ ಶರ್ಮಾ ವಯಸ್ಸು 39. ಕೊಹ್ಲಿ ವಯಸ್ಸು 37. ಇನ್ನು ಒಂದೂವರೆ ವರ್ಷ ಇಬ್ಬರು ಏಕದಿನ ಆಡಲು ಸಜ್ಜಾಗಿರುತ್ತಾರಾ, ಫಿಟ್ನೆಸ್ ಫಾರ್ಮ್ ಕುರಿತು ಹಲವು ಚರ್ಚೆಗಳು ನಡೆಯುತ್ತಿದೆ. ಇಬ್ಬರು ಉತ್ತಮ ಫಿಟ್ನೆಸ್ ಹಾಗೂ ಫಾರ್ಮ್ ಕಂಡುಕೊಂಡಿದ್ದಾರೆ.

66
ಆಫ್ರಿಕಾ ದೇಶಗಳಿಗೆ ಐಸಿಸಿ ಟೂರ್ನಿ
Image Credit : Getty

ಆಫ್ರಿಕಾ ದೇಶಗಳಿಗೆ ಐಸಿಸಿ ಟೂರ್ನಿ

2003ರ ಬಳಿಕ ಸೌತ್ ಆಫ್ರಿಕಾ ಏಕದಿನ ವಿಶ್ವಕಪ್ ಟೂರ್ನಿ ಆಯೋಜಿಸಿಲ್ಲ. ಆಫ್ರಿಕಾ ದೇಶಗಳು 2007ರ ಟಿ20 ವಿಶ್ವಕಪ್, 2009ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿದೆ. ಇದನ್ನು ಹೊರತುಪಡಿಸಿದರೆ ಯಾವುದೇ ಐಸಿಸಿ ಟೂರ್ನಿ ಆಯೋಜಿಸಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವಿಶ್ವಕಪ್
ಕ್ರಿಕೆಟ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ

Latest Videos
Recommended Stories
Recommended image1
ಆಫ್ಘಾನಿಸ್ತಾನ ಎದುರಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ; ಓರ್ವ ಟೀಂ ಇಂಡಿಯಾಗೆ ಪಾದಾರ್ಪಣೆ?
Recommended image2
Wonder Kid ವೈಭವ್ ಸೂರ್ಯವಂಶಿ ಬಗ್ಗೆ ಕನ್ನಡದಲ್ಲೇ ಗುಣಗಾನ ಮಾಡಿದ ರಾಹುಲ್ ದ್ರಾವಿಡ್! ವಿಡಿಯೋ ಇಲ್ಲಿದೆ ನೋಡಿ
Recommended image3
Sachin Tendulkar: 'ನನ್ನ ಔಟ್‌ ಮಾಡೋಕೆ ನಿಮಗೆ ಸಾಧ್ಯ ಆಗೋದಿಲ್ಲ..' ಮಗಳು, ಸೊಸೆ ಜೊತೆ ಫ್ಲೈಟ್‌ನಲ್ಲೇ ಮಾಸ್ಟರ್‌ ಬ್ಲಾಸ್ಟರ್‌ ಕ್ರಿಕೆಟ್‌
Related Stories
Recommended image1
'ಬೇಕಿದ್ರೆ ಆಯ್ಕೆ ಮಾಡಲಿ...': BCCI ಆಯ್ಕೆ ಸಮಿತಿಗೆ ನೇರವಾಗಿ ಟಾಂಗ್ ಕೊಟ್ಟ RCB ಕ್ಯಾಪ್ಟನ್ ರಜತ್ ಪಾಟೀದಾರ್..!
Recommended image2
ಸಂಕಷ್ಟದಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ, ತಂಡದ ಆಯ್ಕೆಯಲ್ಲಿ ಗೋಲ್‌ಮಾಲ್ ಆರೋಪ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved