IPL ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಕೊಹ್ಲಿಯೂ ಅಲ್ಲ, ಧೋನಿಯೂ ಅಲ್ಲ!
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಬನ್ನಿ ನಾವಿಂದು ಐಪಿಎಲ್ ಇತಿಹಾಸದಲ್ಲಿಯೇ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಯಾರು ಎನ್ನುವುದನ್ನು ನೋಡೋಣ.

Yashasvi Jaiswal (Photo: IPL)
ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟರ್‌ಗಳದ್ದೇ ಕಾರುಬಾರು. ಕ್ರಿಕೆಟ್ ಯಾವ ಮಟ್ಟಿಗೆ ಬಂದಿದೆ ಎಂದರೆ ಸಿಕ್ಸರ್ ಬಾರಿಸುವುದು ಕೆಲ ಆಟಗಾರರ ಪಾಲಿಗೆ ನೀರು ಕುಡಿದಷ್ಟೇ ಸುಲಭ ಎನ್ನುವಂತೆ ಕಾಣುತ್ತಿದೆ.
Image Credit: Twitter
ಕೆಲವು ಆಟಗಾರರು ಮುಗಿಲೆತ್ತರದ ಸಿಕ್ಸರ್‌ಗಳನ್ನು ಸಿಡಿಸಿದರೆ, ಮತ್ತೆ ಕೆಲವು ಆಟಗಾರರು ಚೆಂಡನ್ನು ಸ್ಟೇಡಿಯಂನಾಚೆ ಕಳಿಸುವುದನ್ನು ನೋಡಿದ್ದೇವೆ. ಬನ್ನಿ ನಾವಿಂದು ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ, ಇನ್ನು ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಯಾರು ಎನ್ನುವುದನ್ನು ನೋಡೋಣ.
Image Credit: Twitter
ಅತಿಹೆಚ್ಚು ಐಪಿಎಲ್ ಸಿಕ್ಸರ್:
ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಐಪಿಎಲ್ ಸಿಕ್ಸರ್ ಸಿಡಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಐಪಿಎಲ್‌ನಲ್ಲಿ 357 ಸಿಕ್ಸರ್ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ 350 ಸಿಕ್ಸರ್ ಬಾರಿಸುವುದಿರಲಿ, ಗೇಲ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಸಹ ಐಪಿಎಲ್‌ನಲ್ಲಿ 300+ ಸಿಕ್ಸರ್ ಸಿಡಿಸಿಲ್ಲ.
Rohit Sharma. (Photo: IPL)
ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಯಾರು?
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಯಾರಿರಬಹುದು ಎನ್ನುವ ಕುತೂಹಲ ನಿಮಗೂ ಇರಬಹುದು ಅಲ್ಲವೇ?
ಕೊಹ್ಲಿಯೂ ಅಲ್ಲ, ಧೋನಿಯೂ ಅಲ್ಲ!
ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಧೋನಿಯೂ ಅಲ್ಲ, ಕೊಹ್ಲಿಯೂ ಅಲ್ಲ ಎಂದರೆ ನಿಮಗೂ ಅಚ್ಚರಿಯಾಗಬಹುದು. ಕೊಹ್ಲಿ276 ಸಿಕ್ಸರ್ ಸಿಡಿಸಿದ್ದರೇ, ಧೋನಿ 256 ಸಿಡಿಸಿದ್ದಾರೆ.
ಗರಿಷ್ಠ ಸಿಕ್ಸರ್ ಸಿಡಿಸಿದ್ದು ಹಿಟ್‌ಮ್ಯಾನ್:
ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಸಿಡಿಸಿದ ಭಾರತೀಯ ಬ್ಯಾಟರ್ ಎನ್ನುವ ಹೆಗ್ಗಳಿಕೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 281 ಸಿಕ್ಸರ್ ಸಿಡಿಸಿ ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಎರಡನೇ ಸ್ಥಾನದಲ್ಲಿರುವ ರೋಹಿತ್:
ಇನ್ನು ಐಪಿಎಲ್ ಇತಿಹಾಸದಲ್ಲಿ ಒಟ್ಟಾರೆ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ ಬಳಿಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಗೇಲ್ ಈಗಾಗಲೇ ಐಪಿಎಲ್‌ಗೆ ಗುಡ್ ಬೈ ಹೇಳಿರುವುದರಿಂದ ರೋಹಿತ್ ಶರ್ಮಾ, ಮೊದಲ ಹಾಗೂ ಎರಡನೇ ಸ್ಥಾನಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ವಿಶ್ವಾಸದಲ್ಲಿದ್ದಾರೆ.
ರೋಹಿತ್ ಐಪಿಎಲ್ ದಾಖಲೆ:
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಾಯಕನಾಗಿ ಐದು ಹಾಗೂ ಆಟಗಾರನಾಗಿ ಒಂದು ಟ್ರೋಫಿ ಸೇರಿದಂತೆ ಐಪಿಎಲ್‌ನಲ್ಲಿ ಆರು ಟ್ರೋಫಿ ಜಯಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.