ಐಪಿಎಲ್‌ನಿಂದ ಹೊರಬಿದ್ದ ಮುಸ್ತಾಫಿಜುರ್‌ಗೆ ಒಂದು ರುಪಾಯಿ ಕೂಡ ಸಿಗಲ್ಲ! ಯಾಕೆ ಹೀಗೆ?
ಕೋಲ್ಕತಾ: 2026ರ ಐಪಿಎಲ್ ಟೂರ್ನಿಯಲ್ಲಿ ಹೊರಬಿದ್ದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರಹಮಾನ್‌ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಐಪಿಎಲ್‌ನಿಂದ ಒಂದೇ ಒಂದು ರುಪಾಯಿ ಸಿಗಲ್ಲ ಎಂದು ವರದಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಮುಸ್ತಾಫಿಜುರ್ ರಹಮಾನ್ ಐಪಿಎಲ್‌ನಿಂದ ಔಟ್
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಿಂಸಾಚಾರವನ್ನು ಖಂಡಿಸಿ, ಆ ದೇಶದ ವೇಗಿ ಮುಸ್ತಾಫಿಜುರ್ ರಹಮಾನ್‌ರನ್ನು ಬಿಸಿಸಿಐ ಐಪಿಎಲ್‌ನಿಂದ ಹೊರಹಾಕಿದೆ.
ಮುಸ್ತಾಫಿಜುರ್‌ಗೆ ಸಿಗಲ್ಲ ಒಂದೇ ಒಂದು ರುಪಾಯಿ!
ಹರಾಜಿನಲ್ಲಿ 9.2 ಕೋಟಿ ರು.ಗೆ ಬಿಕರಿಯಾಗಿದ್ದ ಮುಸ್ತಾಫಿಜುರ್‌ಗೆ ಈಗ ಒಂದು ರುಪಾಯಿ ಕೂಡ ಸಿಗುವುದಿಲ್ಲ ಎಂದು ತಿಳಿದುಬಂದಿದೆ.
ಚರ್ಚೆಗೆ ಗ್ರಾಸವಾದ ಈ ನಡೆ
ಈ ಬಗ್ಗೆ ಸಾಕಷ್ಟು ಚರ್ಚೆ ಸಹ ಆರಂಭಗೊಂಡಿದೆ. ಮುಸ್ತಾಫಿಜುರ್ ಸ್ವತಃ ತಾವೇ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿಲ್ಲ, ಇನ್ನು ಅವರು ಯಾವುದೇ ತಪ್ಪು ಮಾಡಿಲ್ಲ. ಹೀಗಿದ್ದರೂ ಅವರಿಗೇಕೆ ಅನ್ಯಾಯ ಎಂದು ಹಲವರು ವಾದಿಸುತ್ತಿದ್ದಾರೆ.
ವಿಮೆ ಪರಿಹಾರ ಕೂಡಾ ಸಿಗಲ್ಲ
ಆದರೆ, ಐಪಿಎಲ್ ನಿಯಮಾವಳಿ ಪ್ರಕಾರ ಮುಸ್ತಾಫಿಜುರ್‌ಗೆ ಕೆಕೆಆರ್ ಯಾವುದೇ ಹಣ ಪಾವತಿಸುವಂತಿಲ್ಲ. ಅವರು ವಿಮೆ ಬಳಸಿಕೊಂಡು ಪರಿಹಾರ ಕೂಡ ಪಡೆಯಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.
ಕೋರ್ಟ್ ಮೆಟ್ಟಿಲೇರಿದ್ರೂ ಯಾವುದೇ ಪ್ರಯೋಜನ ಇಲ್ಲ
ಒಂದು ವೇಳೆ ಮುಸ್ತಾಫಿಜುರ್ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದರೂ, ಕೋರ್ಟ್‌ನಲ್ಲಿ ಆ ಪ್ರಕರಣ ನಿಲುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವಿಲ್ಲ
ಇನ್ನು ಮುಸ್ತಾಫಿಜುರ್ ರಹಮಾನ್ ಅವರನ್ನು ಐಪಿಎಲ್‌ನಿಂದ ಹೊರದಬ್ಬಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರ ಬ್ಯಾನ್ ಮಾಡಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.
ಬಾಂಗ್ಲಾದೇಶ ಮನವಿಗೆ ಸೊಪ್ಪು ಹಾಕದ ಐಸಿಸಿ
ಇನ್ನು ಫೆಬ್ರವರಿ 07ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಪಾಲಿನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಶಿಫ್ಟ್ ಮಾಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಐಸಿಸಿ ಬಳಿ ಮನವಿ ಮಾಡಿಕೊಂಡಿದೆ. ಇದಕ್ಕೆ ಐಸಿಸಿ ಕ್ಯಾರೆ ಎಂದಿಲ್ಲ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

