Ind vs Pak Asia Cup: ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಟೀಮ್ ಇಂಡಿಯಾ WAGs!
ಭಾರತ ಹಾಗೂ ಪಾಕಿಸ್ತಾನದ ಏಷ್ಯಾಕಪ್ ಮಹಾ ಕದನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ರಣರೋಚಕ ಕಾಳಗ ಏರ್ಪಡುವ ನಿರೀಕ್ಷೆಯೂ ಇದೆ. ಇದರ ನಡುವೆ ಟೀಮ್ ಇಂಡಿಯಾ ಪ್ಲೇಯರ್‌ಗಳ ವ್ಯಾಗ್ಸ್ (ವೈಫ್ ಆಂಡ್ ಗರ್ಲ್‌ಫ್ರೆಂಡ್ಸ್) ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದ ವೀಕ್ಷಿಸಲಿದ್ದಾರೆ. ಭಾರತ-ಪಾಕ್ ಮುಖಾಮುಖಿಯ ವೇಳೆ ತಮ್ಮ ಆಟಗಾರರಾಗಿರುವ ತಮ್ಮ ಪತಿ ಹಾಗೂ ಗೆಳೆಯನ್ನು ಬೆಂಬಲಿಸಲು ದುಬೈ ಸ್ಟ್ಯಾಂಡ್‌ನಲ್ಲಿ ಕಾಣಬಹುದಾದ ವ್ಯಾಗ್ಸ್‌ಗಳ ಪಟ್ಟಿ ಇಲ್ಲಿದೆ.
ಜಸ್‌ಪ್ರೀತ್ ಬುಮ್ರಾ ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಅವರ ಪತ್ನಿ ಸಂಜನಾ ಗಣೇಶನ್ ನಿರೂಪಕಿಯಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ದುಬೈ ಸ್ಟೇಡಿಯಂನಲ್ಲಿ ಕಾಣಿಸಲಿದ್ದಾರೆ.
ರೋಹಿತ್ ಶರ್ಮಾ ಅವರ ಪತ್ನಿಯೂ ಅವರ ಮ್ಯಾನೇಜರ್ ಆಗಿರುವುದರಿಂದ ಅವರು ಹೋದಲ್ಲೆಲ್ಲಾ ಅವರೊಂದಿಗೆ ಪ್ರಯಾಣಿಸುತ್ತಾರೆ. ರೋಹಿತ್ ಕ್ರಿಕೆಟ್‌ಗಾಗಿ ವಿದೇಶಕ್ಕೆ ಪ್ರಯಾಣಿಸುವಾಗ ರಿತಿಕಾ, ಮಗಳು ಸಮೈರಾ ಸಾಮಾನ್ಯವಾಗಿ ಅವರೊಂದಿಗೆ ಪ್ರಯಾಣ ಮಾಡುತ್ತಾರೆ.
ಏಷ್ಯಾಕಪ್ 2022 ಟೂರ್ನಿಗಾಗಿ ಹಾರ್ದಿಕ್ ಪಾಂಡ್ಯ ದುಬೈಗೆ ತೆರಳಿದ ಬೆನ್ನಲ್ಲಿಯೇ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದ ಅವರ ಪತ್ನಿ ನತಾಶಾ ಸ್ಟಾಂಕೋವಿಕ್, ಈಗಾಗಲೇ ತಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಪಾಕಿಸ್ತಾನದ ವಿರುದ್ಧದ ಮುಖಾಮುಖಿಯನ್ನು ವೀಕ್ಷಿಸಲು ಅವರು ದುಬೈಗೆ ತೆರಳುವ ಸಾಧ್ಯತೆ ಇದೆ.
ರಿಷಭ್ ಪಂತ್ ಸದ್ಯ ಕೆಟ್ಟ ಕಾರಣಗಳಿಂದಾಗಿಯೇ ಸುದ್ದಿಯಲ್ಲಿದ್ದಾರೆ. ಊರ್ವಶಿ ರೌಟೇಲಾ ಹಾಗೂ ಅವರ ನಡುವಿನ ಸಮರ ಕಳೆದ 15 ದಿನಗಳಿಂದ ಸುದ್ದಿಯಲ್ಲಿದೆ. ಈ ಹಂತದಲ್ಲಿ ಬಾಯ್‌ಫ್ರೆಂಡ್ ಪರವಾಗಿ ನಿಲ್ಲಲು, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಇಶಾ ನೇಗಿ ಬರುವ ಸಾಧ್ಯತೆ ಇದೆ. 2022ರ ಐಪಿಎಲ್‌ನಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಇಶಾ ನೇಗಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.
ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರು ಪ್ರೀತಿಯಲ್ಲಿ ಬಿದ್ದಾಗಿನಿಂದ ಅವರ ಪತಿ ದಿನೇಶ್ ಕಾರ್ತಿಕ್‌ಗೆ ಬೆಂಬಲವಾಗಿ ನಿಂತಿದ್ದರು. ಈ ಬಾರಿ ಅವರಿಗೂ ಕೂಡ ಯಾವುದೇ ಟೂರ್ನಮೆಂಟ್‌ಗಳು ಇರದೇ ಇರುವ ಕಾರಣ ಅವಳಿ ಮಕ್ಕಳೊಂದಿಗೆ ದುಬೈನಲ್ಲಿ ಪಂದ್ಯವನ್ನು ವೀಕ್ಷಿಸಲು ಆಗಮಿಸುವ ನಿರೀಕ್ಷೆ ಇದೆ. 2022ರಲ್ಲಿ ಆರ್‌ಸಿಬಿ ಪರ ಡಿಕೆ ಆಡಿದ್ದ ವೇಳೆ ಅವರು ಮೈದಾನಕ್ಕೆ ಬಂದಿದ್ದರು.
ಪತಿ ಯಜುವೇಂದ್ರ ಚಾಹಲ್ ಅವರೊಂದಿಗೆ ಧನಶ್ರೀ ವರ್ಮ ಕೂಡ ದುಬೈಗೆ ವಿಮಾನ ಏರಿದ್ದರು. ಗಾಯದ ಕಾರಣದಿಂದಾಗಿ ಧನಶ್ರಿ ವರ್ಮ ನೃತ್ಯದಿಂದ ದೂರ ಉಳಿದಿದ್ದಾರೆ. ಕೆಲವು ತಿಂಗಳ ಹಿಂದೆ, ಚಾಹಲ್ ಅವರ ಜೊತೆ ಎಂದಿಗೂ ಇರುವುದಾಗಿ ಹೇಳಿದ್ದರು. ಇತ್ತೀಚೆಗೆ ಇವರಿಬ್ಬರೂ ಡೈವೋರ್ಸ್ ಪಡೆದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿತ್ತು.
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ ಪತ್ನು ಅನುಷ್ಕಾ ಶರ್ಮ, ಪಾಕಿಸ್ತಾನದ ವಿರುದ್ಧದ ದೊಡ್ಡ ಪಂದ್ಯವನ್ನು ಸಾಮಾನ್ಯವಾಗಿ ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಅದಲ್ಲದೆ, ಕೊಹ್ಲಿ 100ನೇ ಅಂತಾರಾಷ್ಟ್ರೀಯ ಟಿ20 ಆಗಿರುವ ಕಾರಣ ಅವರು ಆಗಮಿಸುವ ಸಾಧ್ಯತೆ ಹೆಚ್ಚಿದೆ.