IPL ನಲ್ಲಿ ಸಿಗದ ಅವಕಾಶ; ವಿದೇಶದತ್ತ ಮುಖ ಮಾಡಿದ ಸ್ಟಾರ್ ಸ್ಪಿನ್ನರ್..!

First Published Jun 27, 2020, 6:22 PM IST

ಐಪಿ​ಎಲ್‌ನಲ್ಲಿ ಆಡಲು ಅನ​ರ್ಹ​ರಾದ ಮುಂಬೈ ಮೂಲದ 48 ವರ್ಷದ ಲೆಗ್‌ ಸ್ಪಿನ್ನರ್‌ ಪ್ರವೀಣ್‌ ತಾಂಬೆ, ಕೆರಿ​ಬಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಸಿ​ಪಿ​ಎಲ್‌) ಟಿ20 ಟೂರ್ನಿ​ಯಲ್ಲಿ ಆಡುವ ಅವ​ಕಾಶ ಪಡೆ​ದಿ​ದ್ದಾರೆ. 

ವಿದೇಶಿ ಲೀಗ್‌ನಲ್ಲಿ ಆಡಿದ ಭಾರತದ ಆಟಗಾರರಿಗೆ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಅವಕಾಶ ನೀಡುವುದಿಲ್ಲ. ಹೀಗಿದ್ದೂ ಆಟಗಾರರ ಹರಾಜಿನಲ್ಲಿ ತಾಂಬೆಯನ್ನು 20 ಲಕ್ಷ ರುಪಾಯಿ ಮೂಲ ಬೆಲೆಗೆ ಕೋಲ್ಕತ್ ನೈಟ್ ರೈಡರ್ಸ್ ತಂಡ ಖರೀದಿಸಿತ್ತು. ಆದರೆ ಆ ಬಳಿಕ ಬಿಸಿಸಿಐ ತಾಂಬೆ ಹರಾಜನ್ನು ರದ್ದು ಮಾಡಿತ್ತು.