ಸಾಕ್ಷಿ ಧೋನಿ ಶೇರ್ ಮಾಡಿದ ಥ್ರೋಬ್ಯಾಕ್ ಫೋಟೋ ವೈರಲ್!
First Published Jan 12, 2021, 5:06 PM IST
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂ.ಎಸ್. ಧೋನಿ) ನಿವೃತ್ತಿಯ ನಂತರ ಅವರ ಕುಟುಂಬ ಮತ್ತು ಹೊಸ ವ್ಯವಹಾರದತ್ತ ಗಮನ ಹರಿಸಿದ್ದಾರೆ. ಅದೇ ಸಮಯದಲ್ಲಿ, ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆ್ಯಕ್ಟಿವ್ ಇದ್ದಾರೆ. ಪ್ರತಿದಿನ ಫೊಟೋಗಳನ್ನು ಪೋಸ್ಟ್ ಮಾಡುವ ಮೂಲಕ ಆಕರ್ಷಣೆಯ ಕೇಂದ್ರವಾಗಿದ್ದಾರೆ ಸಾಕ್ಷಿ ಧೋನಿ. ಇತ್ತೀಚೆಗೆ, ಅವರು ಹಂಚಿಕೊಂಡ ಥ್ರೋಬ್ಯಾಕ್ ಫೋಟೋ ಸಖತ್ ವೈರಲ್ ಆಗಿದೆ. (ಫೋಟೋ ಮೂಲ - Instagram)

ಸಾಕ್ಷಿ ಧೋನಿ, 10 ಜನವರಿ 2021 ರಂದು ಎರಡು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಮತ್ತು ಎಂ.ಎಸ್.ಧೋನಿ ಕಾಣಿಸಿಕೊಂಡಿದ್ದಾರೆ. ಎರಡೂ ಚಿತ್ರಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಏಕೆಂದರೆ ಒಂದು ಫೋಟೋ 2008ರದ್ದು , ಇನ್ನೊಂದು ಇತ್ತೀಚೆಗೆ ತೆಗೆದ ಫೋಟೋ.

ಇಬ್ಬರ ಈ ಥ್ರೋಬ್ಯಾಕ್ ಫೋಟೋಗಳಿಗೆ ಫುಲ್ ಫಿದಾ ಆಗಿದ್ದಾರೆ ಫ್ಯಾನ್ಸ್. 13 ವರ್ಷಗಳಲ್ಲಿ ಈ ಕಪಲ್ ಸಾಕಷ್ಟು ಬದಲಾಗಿದ್ದಾರೆ. ಸಾಕ್ಷಿ ತಮ್ಮ ಮತ್ತು ಧೋನಿಯ 2 ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?