ವಿರುಷ್ಕಾ ದಂಪತಿ 2ನೇ ಮಗುವಿಗೆ ಅಕಾಯ್ ನಾಮಕರಣ,ಈ ಹೆಸರಿನ ಅರ್ಥವೇನು?
ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ದಂಪತಿ 2ನೇ ಮಗುವಿನ ತಂದೆಯಾಗಿದ್ದಾರೆ. ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್ ಎಂದು ಹೆಸರಿಡಲಾಗಿದೆ. ಈ ಹೆಸರಿನ ಅರ್ಥವೇನು?

ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ದಂಪತಿ 2ನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 15 ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
5 ದಿನಗಳ ಬಳಿಕ ಕೊಹ್ಲಿ 2ನೇ ಬಾರಿಗೆ ತಂದೆಯಾಗಿರುವ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ 2ನೇ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.ವಿರುಷ್ಕಾ ದಂಪತಿ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ.
ಟರ್ಕಿ ಮೂಲದ ಪದ ಹುಡುಕಿ ವಿರುಷ್ಕಾ ದಂಪತಿ 2ನೇ ಮಗುವಿಗೆ ಹೆಸರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಟರ್ಕಿಯಲ್ಲಿ ಅಕಾಯ್ ಎಂದರೆ ಹೊಳೆಯುತ್ತಿರುವ ಚಂದ್ರ ಎಂದರ್ಥವಾಗಿದೆ.
ಮಗ ಹೊಳೆಯುವ ಚಂದ್ರನಂತೆ ಅನ್ನೋ ಅರ್ಥದಲ್ಲಿ ಮುದ್ದಾದ ಹೆಸರನ್ನು ವಿರುಷ್ಕಾ ದಂಪತಿ ತಮ್ಮ ಮಗುವಿಗೆ ಇಟ್ಟಿದ್ದಾರೆ. ಇದೀಗ ಕೊಹ್ಲಿ ದಂಪತಿಯ 2ನೇ ಮಗುವಿನ ಹೆಸರಿನ ಚರ್ಚೆಯಾಗುತ್ತಿದೆ.
ವಿರಾಟ್ ಕೊಹ್ಲಿ ತಮ್ಮ ಎರಡನೇ ಮಗುವಿನ ಕುರಿತ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ನಿಮ್ಮ ಆಶೀರ್ವಾದ , ಪ್ರೀತಿ ಹೀಗೆ ಇರಲಿ ಎಂದಿದ್ದಾರೆ.
ಪೋಸ್ಟ್ ಮೂಲಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಕುಟುಂಬದ ಖಾಸಗಿ ಸಮಯಕ್ಕೆ ಗೌರವ ನೀಡಬೇಕಾಗಿ ಎಲ್ಲರಲ್ಲಿ ವಿನಿಂತಿಸಿಕೊಂಡಿದ್ದಾರೆ.
2021ರಲ್ಲಿ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವಿಗೆ ವಮಿಕಾ ಎಂದು ಹೆಸರಿಡಲಾಗಿದೆ. ಜನವರಿ 11ರಂದು ಕೊಹ್ಲಿ ದಂಪತಿ ವಮಿಕಾಳ 3ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು.
ಫೆ.15ರಂದು 2ನೇ ಮಗುವನ್ನು ಕೊಹ್ಲಿ ದಂಪತಿ ಬರಮಾಡಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ಮಗುವಿಗೆ ಜನ್ಮನೀಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಕುರಿತು ವಿರುಷ್ಕಾ ಜೋಡಿ ಯಾವುದೇ ಮಾಹಿತಿ ಸ್ಪಷ್ಟಪಡಿಸಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.