ಗುರಾಯಿಸುತ್ತಿದ್ದ ಕ್ರಿಕೆಟಿಗರು, ಮೊದಲ ಲೇಡಿ ಆ್ಯಂಕರ್ ಮಂದಿರಾ ಬಿಚ್ಚಿಟ್ಟ ಸತ್ಯ
ಕಿರುತೆರೆಯಿಂದ ಬೆಳ್ಳಿತೆರೆವರೆಗೆ, ಮಾಡೆಲಿಂಗ್ ಸ್ಟೇಜ್‌ನಿಂದ ಕ್ರಿಕೆಟ್‌ನ ಕಾಮೆಂಟರಿ ಬಾಕ್ಸ್‌ವರೆಗೆ ತನ್ನದೇ ಆದ ಐಡೆಂಟಿಟಿಯನ್ನು ಮೂಡಿಸಿರುವ ಹೆಸರು ಮಂದಿರಾ ಬೇಡಿ (Mandira Bedi). ಬಾಲಿವುಡ್ (Bollywood) ಟಾಪ್ ನಟಿಯರ ಪಟ್ಟಿಯಲ್ಲಿ ಮಂದಿರಾ ಹೆಸರು ಸೇರಲೇ ಇಲ್ಲ. ಆದರೆ ಅವರ ಕಿರು ವೃತ್ತಿ ಜೀವನದಲ್ಲಿ ಬೇರೆ ಯಾವ ನಟಿಯೂ ಮಾಡದ ಸಾಧನೆ ಮಾಡಿದ್ದಾರೆ. ಈವೆರೆಗೆ ಮಂದಿರಾರಂತೆ ನಟನೆಯಿಂದ ಕಾಮೆಂಟರಿಯವರೆಗೂ ವಿಭಿನ್ನ ಪಾತ್ರಗಳನ್ನು ಮಾಡಲು ಯಾರಿಗೂ ಸಾಧ್ಯವಾಗಿಲ್ಲ ಎಂಬುದಂತೂ ಸತ್ಯ. ಇತ್ತೀಚಿಗೆ ಇಂಟರ್‌ವ್ಯೂವ್‌ನಲ್ಲಿ ಮಂದಿರಾ ಅವರ ಕ್ರಿಕೆಟ್ ಆ್ಯಂಕರಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಮಂದಿರಾ 2003 ಮತ್ತು 2007ರಲ್ಲಿ ICC ಕ್ರಿಕೆಟ್ ವಿಶ್ವಕಪ್ (ICC Cricket Worldcup) ಆಯೋಜಿಸಿದ ಮತ್ತು ಕಾಮೆಂಟ್ ಮಾಡಿದ ಮೊದಲ ಮಹಿಳಾ ಕ್ರಿಕೆಟ್ ಆ್ಯಂಕರ್. ಇದಲ್ಲದೆ, ಅವರು ಐಪಿಎಲ್‌ನ ಎರಡು ಸೀಸನ್‌ಗಳು ಮತ್ತು 2004 ಮತ್ತು 2006 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಹೋಸ್ಟ್ ಮಾಡಿದ್ದಾರೆ.
ಈ ಸಮಯದಲ್ಲಿ, ಟಿವಿಯ ಧಾರಾವಾಹಿ ಶಾಂತಿಯ ವಿಭಿನ್ನ ಶೈಲಿಯಲ್ಲಿ ಜನ ನೋಡಿದರು. ಮಂದಿರಾ ಇತ್ತೀಚೆಗೆ ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಆ ಸಮಯಕ್ಕೆ ಸಂಬಂಧಿಸಿದ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟಿಗರು ತನ್ನನ್ನು ಗುರಾಯಿಸುತ್ತಿದ್ದರು ಎಂದು ಮಂದಿರಾ ಹೇಳಿದ್ದಾರೆ.
ಆರಂಭದಲ್ಲಿ ಯಾರೂ ನನ್ನನ್ನು ಯಾರೂ ಸ್ವೀಕರಿಸಲಿಲ್ಲ. ಜನರು ನನ್ನ ಪ್ಯಾನಲ್‌ಗೆ ಚರ್ಚೆಗೆ ಹಾಜರಾಗಲಿಲ್ಲ. ಇಂದು ಅನೇಕ ಮಾಜಿ ಕ್ರಿಕೆಟಿಗರು ನನ್ನ ಸ್ನೇಹಿತರಾಗಿದ್ದಾರೆ. ಆದರೆ ಸೀರೆ ಧರಿಸಿದ ಯಾವುದೇ ಹುಡುಗಿ ಕ್ರಿಕೆಟ್ ಬಗ್ಗೆ ಮಾತನಾಡುವುದನ್ನು ಅವರು ಇಷ್ಟಪಡುತ್ತಿರಲಿಲ್ಲ ಎಂದು ಅವರು ಹೇಳಿದರು.
ಆ ಸಮಯದಲ್ಲಿ ನನ್ನ ಮನಸ್ಸಿಗೆ ಬಂದ ಪ್ರಶ್ನೆಗಳನ್ನು ಕೇಳುವ ಸ್ವಾತಂತ್ರ್ಯವನ್ನು ನನಗಿತ್ತು. ನಾನು ಇಲ್ಲಿ ನಿಭಾಸಬಲ್ಲೆ ಎಂದು ಅವರು ಭಾವಿಸಿದ್ದರಿಂದ ಚಾನಲ್ ಕಡೆಯಿಂದ ನನ್ನನ್ನು ಆಯ್ಕೆ ಮಾಡಲಾಯಿತು ಎಂದು ಮಂದಿರಾ ಹೇಳಿದ್ದಾರೆ.
ಅಂತಹ ಸಮಯದಲ್ಲಿ ಅನೇಕ ಕ್ರಿಕೆಟಿಗರು ನಾನು ಅವರಿಗೆ ಏನು ಕೇಳಿದೆ ಅಥವಾ ನಾನು ಯಾಕೆ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ ಎಂದು ನನ್ನತ್ತ ಗುರಾಯಿಸುತ್ತಿದ್ದರು, ಎಂದು ಸಂದರ್ಶನದಲ್ಲಿ ಮಂದಿರಾ ಬೇಡಿ ಬಹಿರಂಗಪಡಿಸಿದ್ದಾರೆ .
ಯಾರೂ ನನಗೆ ಮಾರ್ಗದರ್ಶನ ನೀಡಲು ಇರಲಿಲ್ಲ. ಇದ್ದವರೂ ತಿದ್ದಿಕೊಳ್ಳುವಂತೆ ಹೇಳಲಿಲ್ಲ.ಪ್ರಶ್ನೆಗಳನ್ನು ರೆಡಿ ಮಾಡಿ ಕೊಡಲಿಲ್ಲ. ನಾನೇ ಸ್ವತಃ ಪ್ರಶ್ನೆಗಳನ್ನು ಸಿದ್ಧ ಪಡಿಸಿಕೊಂಡು, ಕೇಳುತ್ತಿದ್ದೆ. ಆ ಸಮಯದಲ್ಲಿ ನಾನು ಕ್ರಿಕೆಟ್‌ನ ತಾಂತ್ರಿಕತೆ ತಿಳಿಯದ ಜನರನ್ನು ಪ್ರತಿನಿಧಿಸುತ್ತಿದ್ದೆ. ಹಾಗಾಗಿ ಇಂತಹ ವಿಷಯಗಳನ್ನು ನನ್ನ ಮೂಲಕ ಜನರಿಗೆ ತಲುಪಿಸುತ್ತಿದ್ದೆ ಎಂದಿದ್ದಾರೆ ಮಂದಿರಾ.
ಜೂನ್ 2021 ರಲ್ಲಿ, ಮಂದಿರಾ ಬೇಡಿ ಅವರ ಪತಿ ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ಕೌಶಲ್ ಹೃದಯಾಘಾತದಿಂದ ನಿಧನರಾದರು. ಮಂದಿರಾ ಈಗ ತನ್ನ ಇಬ್ಬರ ಮಕ್ಕಳ ಜೊತೆ ಇದ್ದಾರೆ. ಅವರಿಗೆ ಒಬ್ಬ ಮಗನಿದ್ದು ಮತ್ತೊಂದು ಮಗಳನ್ನು ದತ್ತು ಪಡೆದಿದ್ದಾರೆ.