MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಐಪಿಎಲ್‌ನಿಂದ ತನ್ನ ಕ್ರಿಕೆಟ್ ಬದುಕೇ ಹಾಳು ಮಾಡಿಕೊಂಡೆ: ಅಚ್ಚರಿ ಹೇಳಿಕೆ ಕೊಟ್ಟ ಕೆವಿನ್ ಪೀಟರ್‌ಸನ್!

ಐಪಿಎಲ್‌ನಿಂದ ತನ್ನ ಕ್ರಿಕೆಟ್ ಬದುಕೇ ಹಾಳು ಮಾಡಿಕೊಂಡೆ: ಅಚ್ಚರಿ ಹೇಳಿಕೆ ಕೊಟ್ಟ ಕೆವಿನ್ ಪೀಟರ್‌ಸನ್!

ಗುವಾಹಟಿ: ಇಂಗ್ಲೆಂಡ್ ದಿಗ್ಗಜ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಬೆಂಬಲಿಸಲು ಹೋಗಿ ತಮ್ಮ ಕ್ರಿಕೆಟ್ ಬದುಕು ಹಾಳು ಮಾಡಿಕೊಂಡೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಕೆವಿನ್ ಪೀಟರ್‌ಸನ್ ಏನಂದ್ರು ನೋಡೋಣ ಬನ್ನಿ.

1 Min read
Author : Naveen Kodase
Published : Apr 08 2026, 10:04 AM IST
Share this Photo Gallery
  • FB
  • TW
  • Linkdin
  • Whatsapp
16
ತಮ್ಮ ಕ್ರಿಕೆಟ್ ಬದುಕು ಕೊನೆಯಾಗಲು ಐಪಿಎಲ್ ಕಾರಣ
Image Credit : Getty

ತಮ್ಮ ಕ್ರಿಕೆಟ್ ಬದುಕು ಕೊನೆಯಾಗಲು ಐಪಿಎಲ್ ಕಾರಣ

ಐಪಿಎಲ್ ಆಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಜೊತೆ ನಾನು ನಡೆಸಿದ ಹೋರಾಟದಿಂದಾಗಿಯೇ ನನ್ನ ಅಂತರರಾಷ್ಟ್ರೀಯ ಕೆರಿಯರ್ ಬೇಗ ಮುಗಿದುಹೋಯ್ತು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

26
ನಾನು ಕಷ್ಟಪಟ್ಟಿದ್ದಕ್ಕೆ ಈಗಿನ ಆಟಗಾರರಿಗೆ ಅನುಕೂಲವಾಗಿದೆ
Image Credit : Getty

ನಾನು ಕಷ್ಟಪಟ್ಟಿದ್ದಕ್ಕೆ ಈಗಿನ ಆಟಗಾರರಿಗೆ ಅನುಕೂಲವಾಗಿದೆ

ಫ್ರಾಂಚೈಸಿ ಕ್ರಿಕೆಟ್‌ಗೆ ತಾವು ಪ್ರಾಮುಖ್ಯತೆ ನೀಡಿದ್ದಕ್ಕೆ ಆಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, ತಮ್ಮ ಆ ನಿಲುವಿನಿಂದಾಗಿ ನಂತರದ ಆಟಗಾರರಿಗೆ ಅಂತರರಾಷ್ಟ್ರೀಯ ಪಂದ್ಯಗಳ ಜೊತೆಗೆ ಟಿ20 ಲೀಗ್‌ಗಳನ್ನೂ ಆಡಲು ದಾರಿ ಸುಗಮವಾಯಿತು ಎಂದೂ ಅವರು ತಿಳಿಸಿದ್ದಾರೆ.

Related Articles

Related image1
ಆರ್‌ಸಿಬಿಗೆ ಸಿಕ್ಕ ನಿಧಿ ರಜತ್ ಪಾಟೀದಾರ್! ಬೆಂಗಳೂರಿಗೆ ಎರಡನೇ ಐಪಿಎಲ್ ಟ್ರೋಫಿ ಗೆಲ್ಲಲು ಪಣತೊಟ್ಟ ಕ್ಯಾಪ್ಟನ್
Related image2
RCB ಕೈಬಿಟ್ಟು ಈ 4 ತಂಡಗಳೇ ಐಪಿಎಲ್ ಪ್ಲೇ ಆಫ್ ಪ್ರವೇಶಿಸಲಿವೆ ಎಂದು ಅಚ್ಚರಿ ಭವಿಷ್ಯ ನುಡಿದ ಕೆವಿನ್ ಪೀಟರ್‌ಸನ್‌!
36
ನಾನು 150-160 ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು!
Image Credit : Getty

ನಾನು 150-160 ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು!

ಈ ಕುರಿತಂತೆ ಮಾತನಾಡಿರುವ ಅವರು "ಐಪಿಎಲ್ ಆಡಲು ನಾನು ದೊಡ್ಡ ತ್ಯಾಗವನ್ನೇ ಮಾಡಬೇಕಾಯ್ತು, ನನ್ನ ಕೆರಿಯರ್ ಅನ್ನೇ ಕಳೆದುಕೊಂಡೆ. ನಿಜ ಹೇಳಬೇಕೆಂದರೆ, ನಾನು 150-160 ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು. ಆಗ ನಾನು 12,000 ದಿಂದ 13,000 ರನ್ ಗಳಿಸಬಹುದಿತ್ತು," ಎಂದಿದ್ದಾರೆ.

46
33ನೇ ವಯಸ್ಸಿಗೆ ಕೊನೆಯದಾ ಪೀಟರ್‌ಸನ್ ಕ್ರಿಕೆಟ್ ಬದುಕು
Image Credit : Getty

33ನೇ ವಯಸ್ಸಿಗೆ ಕೊನೆಯದಾ ಪೀಟರ್‌ಸನ್ ಕ್ರಿಕೆಟ್ ಬದುಕು

"ಕ್ರಿಕೆಟ್ ಅಧಿಕಾರಿಗಳು ನನ್ನ ವಿರುದ್ಧ ತಿರುಗಿಬೀಳಲು ಇದೊಂದೇ ಕಾರಣವಾಗಿತ್ತು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪೀಟರ್ಸನ್ ತಮ್ಮ 33ನೇ ವಯಸ್ಸಿನಲ್ಲಿ, 104 ಟೆಸ್ಟ್ ಪಂದ್ಯಗಳನ್ನು ಆಡಿ 8,181 ರನ್ ಗಳಿಸಿದ್ದರು. ಇದರಲ್ಲಿ 23 ಶತಕ ಹಾಗೂ 35 ಅರ್ಧಶತಕಗಳು ಸೇರಿವೆ. ಇದಾದ ಬಳಿಕ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಕೊನೆಯಾಯಿತು.

56
ಇಸಿಬಿ ಟಾರ್ಗೆಟ್ ಮಾಡಲು ಮಾಧ್ಯಮಗಳನ್ನು ಬಳಸಿಕೊಂಡಿತು
Image Credit : our own

ಇಸಿಬಿ ಟಾರ್ಗೆಟ್ ಮಾಡಲು ಮಾಧ್ಯಮಗಳನ್ನು ಬಳಸಿಕೊಂಡಿತು

2009ರ ಐಪಿಎಲ್ ಎರಡನೇ ಸೀಸನ್‌ನಲ್ಲಿ ಇಂಗ್ಲೆಂಡ್ ಆಟಗಾರರಿಗೆ ಕೇವಲ ಮೂರು ವಾರಗಳ ಕಾಲ ಆಡಲು ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಆಗಿನ ಕೋಚ್ ಪೀಟರ್ ಮೂರ್ಸ್ ಜೊತೆಗಿನ ಜಗಳ ಮತ್ತು ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ಗೆ ಹೆಚ್ಚು ಆದ್ಯತೆ ನೀಡಿದ ಪೀಟರ್ಸನ್ ನಿರ್ಧಾರ, ಬೋರ್ಡ್ ಜೊತೆಗಿನ ಸಂಬಂಧವನ್ನು ಹಾಳುಮಾಡಿತು. "ಇಸಿಬಿ ನನ್ನನ್ನು ಟಾರ್ಗೆಟ್ ಮಾಡಲು ಮಾಧ್ಯಮಗಳನ್ನು ಬಳಸಿಕೊಂಡಿತು," ಎಂದು ಪೀಟರ್ಸನ್ ಗಂಭೀರ ಆರೋಪ ಮಾಡಿದ್ದಾರೆ.

66
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್
Image Credit : Twitter/Delhi Capitals

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್

ಐಪಿಎಲ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳ ಪರ ಆಡಿದ್ದಾರೆ. ಇದೀಗ 2025ರಿಂದ ಸೀಸನ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪೀಟರ್ಸನ್‌ರನ್ನು ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಇಂಗ್ಲೆಂಡ್ ಕ್ರಿಕೆಟ್

Latest Videos
Recommended Stories
Recommended image1
ಚಿನ್ನಸ್ವಾಮಿ ಸ್ಟೇಡಿಯಂ; ಫ್ಯಾನ್ಸ್‌ಗೆ ಮತ್ತೊಂದು ಗುಡ್ ನ್ಯೂಸ್ ಕೊಡಲು ರೆಡಿಯಾದ ಕೆಎಸ್‌ಸಿಎ!
Recommended image2
ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಗೆಲುವಿನ ಗುರಿ; ಆದ್ರೆ ಗುಜರಾತ್ ಟೈಟಾನ್ಸ್ ಎದುರು ಮ್ಯಾಚ್ ನಡಿಯೋದೇ ಅನುಮಾನ!
Recommended image3
IPL 2026: ನಿನ್ನೆ ತಡರಾತ್ರಿ ನಡೆದ ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
Related Stories
Recommended image1
ಆರ್‌ಸಿಬಿಗೆ ಸಿಕ್ಕ ನಿಧಿ ರಜತ್ ಪಾಟೀದಾರ್! ಬೆಂಗಳೂರಿಗೆ ಎರಡನೇ ಐಪಿಎಲ್ ಟ್ರೋಫಿ ಗೆಲ್ಲಲು ಪಣತೊಟ್ಟ ಕ್ಯಾಪ್ಟನ್
Recommended image2
RCB ಕೈಬಿಟ್ಟು ಈ 4 ತಂಡಗಳೇ ಐಪಿಎಲ್ ಪ್ಲೇ ಆಫ್ ಪ್ರವೇಶಿಸಲಿವೆ ಎಂದು ಅಚ್ಚರಿ ಭವಿಷ್ಯ ನುಡಿದ ಕೆವಿನ್ ಪೀಟರ್‌ಸನ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved