- Home
- Sports
- Cricket
- 2026ರ ಐಪಿಎಲ್ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಾ? ಇಲ್ಲಿದೆ ನೋಡಿ ಹೊಸ ಅಪ್ಡೇಟ್ಸ್
2026ರ ಐಪಿಎಲ್ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಾ? ಇಲ್ಲಿದೆ ನೋಡಿ ಹೊಸ ಅಪ್ಡೇಟ್ಸ್
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ನಗರದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಾ ಎನ್ನುವ ಕುತೂಹಲ ಜೋರಾಗಿರುವ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕ್ರೀಡಾಂಗಣದ ಸುರಕ್ಷತೆ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಕೆಎಸ್‌ಸಿಎಗೆ ನೋಟಿಸ್ ನೀಡಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

2026ರ ಐಪಿಎಲ್ ಬೆಂಗಳೂರಿನಲ್ಲಿ ನಡೆಯುತ್ತಾ?
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂದಿನ ಆವೃತ್ತಿಯ ಐಪಿಎಲ್ ಆಯೋಜನೆ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.
ಸಮಗ್ರ ವರದಿ ಸಲ್ಲಿಸಲು ರಾಜ್ಯಸರ್ಕಾರ ನೋಟಿಸ್
ಈ ನಡುವೆ, ಪಂದ್ಯಗಳ ಆಯೋಜನೆಗೆ ಬೇಕಿರುವ ಅನುಮತಿ ನೀಡಬೇಕಿದ್ದರೆ ಕ್ರೀಡಾಂಗಣದ ಸುರಕ್ಷತೆಯ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಕೆಎಸ್‌ಸಿಎಗೆ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಕೆಎಸ್‌ಸಿಎಗೆ ರಾಜ್ಯ ಸರ್ಕಾರ ನೋಟಿಸ್
ವರದಿಗಳ ಪ್ರಕಾರ, ಲೋಕೋಪಯೋಗಿ ಇಲಾಖೆಯು ಕೆಎಸ್‌ಸಿಎಗೆ ನೋಟಿಸ್ ನೀಡಿದೆ. ಕ್ರೀಡಾಂಗಣದ ಸುರಕ್ಷತೆಯ ಬಗ್ಗೆ ರಚನಾತ್ಮಕ ವರದಿ ಸಲ್ಲಿಸಬೇಕು. ಸ್ಟೇಡಿಯಂನ ಒಟ್ಟಾರೆ ರಚನೆಯು ಹೆಚ್ಚಿನ ಜನರು ಸೇರಿದರೆ ನಿಭಾಯಿಸಲು ಯೋಗ್ಯ ಎಂದು ಸಾಬೀತುಪಡಿಸಬೇಕು’ ಎಂದು ಸೂಚಿಸಿದೆ ಎನ್ನಲಾಗಿದೆ.
ಸ್ಟೇಡಿಯಂ ಫಿಟ್ನೆಸ್ ಸ್ಟೇಡಿಯಂ ಅಗತ್ಯ
ಕ್ರೀಡಾಂಗಣದ ಸುರಕ್ಷತೆ ಬಗ್ಗೆ ಪ್ರಮಾಣೀಕರಿಸಿದ ನಂತರವೇ 2026ರ ಐಪಿಎಲ್ ಆಯೋಜನೆಗೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ತಿಳಿದುಬಂದಿದೆ.
ಆರ್‌ಸಿಬಿ ಸಂಭ್ರಮಾಚರಣೆ ವೇಳೆ 11 ಮಂದಿ ದುರ್ಮರಣ
ಜೂನ್.4ರಂದು ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇನ್ನು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಕಾಲ್ತುಳಿತ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಿಂದ ಮಹತ್ವದ ಟೂರ್ನಿ ಎತ್ತಂಗಡಿ
ಈ ದುರ್ಘಟನೆಯ ಬಳಿಕ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್, ಡಬ್ಲ್ಯುಪಿಎಲ್‌ನಂತಹ ಪ್ರಮುಖ ಪಂದ್ಯಗಳು ಎತ್ತಂಗಡಿಯಾಗಿತ್ತು.
ಅಭಿಮಾನಿಗಳಿಗೆ ಸಿಗುತ್ತಾ ಗುಡ್ ನ್ಯೂಸ್?
ಕಳೆದೊಂದು ವರ್ಷದಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಮ್ಯಾಚ್ ನೋಡಲು ಸಿಕ್ಕಿಲ್ಲ. ಇನ್ನು ಮುಂದಾದರೂ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

