IPL 2021 ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 5 ಕ್ರಿಕೆಟಿಗರಿವರು..!
ಬೆಂಗಳೂರು: ಚೆನ್ನೈನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜು ಮುಕ್ತಾಯವಾಗಿದ್ದು, ಎಲ್ಲಾ 8 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಒಟ್ಟು 291 ಆಟಗಾರರ ಪೈಕಿ 8 ಫ್ರಾಂಚೈಸಿಗಳು 22 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 57 ಆಟಗಾರರನ್ನು ಖರೀದಿಸಿವೆ.ಇನ್ನು ಐಪಿಎಲ್ ಆಟಗಾರರ ಹರಾಜಿನ ಇತಿಹಾಸದಲ್ಲೇ ಈ ಬಾರಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ 16.25 ಕೋಟಿ ರುಪಾಯಿಗೆ ಹರಾಜಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ 14ನೇ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 5 ಆಟಗಾರರ ವಿವರ ಇಲ್ಲಿದೆ ನೋಡಿ.

1. ಕ್ರಿಸ್ ಮೋರಿಸ್: 16.25 ಕೋಟಿ ರುಪಾಯಿ

1. ಕ್ರಿಸ್ ಮೋರಿಸ್: 16.25 ಕೋಟಿ ರುಪಾಯಿ

ದಕ್ಷಿಣ ಆಫ್ರಿಕಾ ಆಲ್ರೌಂಡರ್ ಮೋರಿಸ್‌ನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 16.25 ಕೋಟಿ ರುಪಾಯಿಗೆ ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಹಿಂದೆ ಯುವರಾಜ್ ಸಿಂಗ್‌ರನ್ನು ಡೆಲ್ಲಿ ತಂಡ 16 ಕೋಟಿ ರುಪಾಯಿಗೆ ಖರೀದಿಸಿದ್ದೇ ಇಲ್ಲೀವರೆಗಿನ ದಾಖಲೆಯಾಗಿತ್ತು.

2. ಕೈಲ್ ಜಾಮಿಸನ್: 15 ಕೋಟಿ ರುಪಾಯಿ

2. ಕೈಲ್ ಜಾಮಿಸನ್: 15 ಕೋಟಿ ರುಪಾಯಿ

ಇದೇ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡಿದ್ದ ನ್ಯೂಜಿಲೆಂಡ್‌ನ ನೀಳಕಾಯದ ವೇಗಿ ಕೈಲ್ ಜಾಮಿಸನ್‌ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 15 ಕೋಟಿ ರುಪಾಯಿ ನೀಡಿ ಖರೀದಿಸಿದೆ.

3. ಗ್ಲೆನ್ ಮ್ಯಾಕ್ಸ್‌ವೆಲ್: 14.25 ಕೋಟಿ ರುಪಾಯಿ

ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್‌ವೆಲ್‌ರನ್ನು ಭಾರೀ ಪೈಪೋಟಿಯ ನಡುವೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 14.25 ಕೋಟಿ ರುಪಾಯಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

4. ಜೇ ರಿಚರ್ಡ್‌ಸನ್: 14 ಕೋಟಿ ರುಪಾಯಿ

4. ಜೇ ರಿಚರ್ಡ್‌ಸನ್: 14 ಕೋಟಿ ರುಪಾಯಿ

ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್‌ಸನ್‌ರನ್ನು ಪ್ರೀತಿ ಝಿಂಟಾ ಸಹ ಒಡೆತನದ ಪಂಜಾಬ್ ಕಿಂಗ್ಸ್ ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ.

5. ಕೃಷ್ಣಪ್ಪ ಗೌತಮ್: 9.25 ಕೋಟಿ ರುಪಾಯಿ

5. ಕೃಷ್ಣಪ್ಪ ಗೌತಮ್: 9.25 ಕೋಟಿ ರುಪಾಯಿ

ಕರ್ನಾಟಕದ ಅನುಭವಿ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್‌ರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 9.25 ಕೋಟಿ ನೀಡಿ ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.