MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • SRHಗೆ ಕಾಡ್ತಿದೆ ಒಂದು ಸಮಸ್ಯೆ ? ಇತ್ತ DC ತಂಡದ ಇಬ್ಬರಲ್ಲಿ ಕಾಣಸ್ತಿಲ್ಲ ವಿನ್ನಿಂಗ್‌ ಪ್ರದರ್ಶನ

SRHಗೆ ಕಾಡ್ತಿದೆ ಒಂದು ಸಮಸ್ಯೆ ? ಇತ್ತ DC ತಂಡದ ಇಬ್ಬರಲ್ಲಿ ಕಾಣಸ್ತಿಲ್ಲ ವಿನ್ನಿಂಗ್‌ ಪ್ರದರ್ಶನ

IPL 2026: ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಸನ್‌ರೈಸರ್ಸ್ ಹೈದರಾಬಾದ್, ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಮಂಗಳವಾರ ಸಂಜೆ ಹೈದರಾಬಾದ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿ ಹೊಂದಿದೆ.

2 Min read
Author : Mahmad Rafik
Published : Apr 21 2026, 01:15 PM IST
Share this Photo Gallery
  • FB
  • TW
  • Linkdin
  • Whatsapp
16
ಹೈದರಾಬಾದ್‌ ಚಾಲೆಂಜ್‌ ಗೆಲ್ಲುತ್ತಾ ಡೆಲ್ಲಿ ಕ್ಯಾಪಿಟಲ್ಸ್?
Image Credit : X@IPL

ಹೈದರಾಬಾದ್‌ ಚಾಲೆಂಜ್‌ ಗೆಲ್ಲುತ್ತಾ ಡೆಲ್ಲಿ ಕ್ಯಾಪಿಟಲ್ಸ್?

ಐಪಿಎಲ್ 2026ರಲ್ಲಿ ಸತತ ಎರಡು ಗೆಲುವುಗಳೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಫಾರ್ಮ್‌ನಲ್ಲಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಹ್ಯಾಟ್ರಿಕ್ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿದೆ ಆರೆಂಜ್ ಆರ್ಮಿ.

26
ಹೆಚ್ಚಾಗಿದೆ ತಂಡದ ಆತ್ಮವಿಶ್ವಾಸ
Image Credit : SRH\Instagram

ಹೆಚ್ಚಾಗಿದೆ ತಂಡದ ಆತ್ಮವಿಶ್ವಾಸ

ಸೀಸನ್ ಆರಂಭದಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯತೆಯಿಂದ ಹೈದರಾಬಾದ್ ಬೌಲಿಂಗ್ ದುರ್ಬಲವಾಗಿತ್ತು. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಪ್ರಫುಲ್ ಹಿಂಗೆ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದರೆ, ಚೆನ್ನೈ ವಿರುದ್ಧದ ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಬೌಲರ್‌ಗಳು ಸಂಘಟಿತ ದಾಳಿ ನಡೆಸಿ ಗೆಲುವು ತಂದುಕೊಟ್ಟರು. ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Related Articles

Related image1
Bengaluru: ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್
Related image2
ಎರಡು ಶೇಡ್‌ನಲ್ಲಿ ಕಂಡ ತಿಲಕ್‌ ಆಟ ಸೇರಿತು ದಾಖಲೆ; ಕೊನೆಗೂ ಬೂಮ್ರಾಗೆ ಬಿಡ್ತು ಗ್ರಹಣ
36
ಬ್ಯಾಟಿಂಗ್ ಆಂಡ್ ಬೌಲಿಂಗ್, ಆದ್ರೆ ಸ್ಥಿರತೆಯ ಕೊರತೆ
Image Credit : X/SunRisers

ಬ್ಯಾಟಿಂಗ್ ಆಂಡ್ ಬೌಲಿಂಗ್, ಆದ್ರೆ ಸ್ಥಿರತೆಯ ಕೊರತೆ

ಹೈದರಾಬಾದ್ ಬ್ಯಾಟಿಂಗ್ ವಿಭಾಗದಲ್ಲಿ ಆಕ್ರಮಣಕಾರಿ ಆಟವಿದ್ದರೂ, ಸ್ಥಿರತೆಯ ಕೊರತೆ ಕಾಡುತ್ತಿದೆ. ಅಗ್ರ ಕ್ರಮಾಂಕದಲ್ಲಿ ಯಾರಾದರೂ ಒಬ್ಬರು ಮಿಂಚಿದರೂ, ಕೊನೆಯಲ್ಲಿ ಸರಿಯಾದ ಫಿನಿಶಿಂಗ್ ಇಲ್ಲದಿರುವುದು ತಂಡಕ್ಕೆ ಸಮಸ್ಯೆಯಾಗಿದೆ.

 ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಅದ್ಭುತ ಫಾರ್ಮ್‌ನಲ್ಲಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಆರಂಭಿಕರು ಕನಿಷ್ಠ ಆರೇಳು ಓವರ್‌ಗಳ ಕಾಲ ವಿಕೆಟ್ ಕಳೆದುಕೊಳ್ಳದೆ ಆಡಿದರೆ, ಬೃಹತ್ ಮೊತ್ತ ಗಳಿಸುವುದು ಖಚಿತ.

46
ಡೆಲ್ಲಿ ಕ್ಯಾಪ್ಟಿಲಸ್
Image Credit : DC\Twitter

ಡೆಲ್ಲಿ ಕ್ಯಾಪ್ಟಿಲಸ್

ಈ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರದರ್ಶನ ಮಿಶ್ರವಾಗಿದೆ. ಕೆಎಲ್ ರಾಹುಲ್, ಪಾತುಮ್ ನಿಸ್ಸಾಂಕ, ಟ್ರಿಸ್ಟನ್ ಸ್ಟಬ್ಸ್ ಅವರಂತಹ ಹಿರಿಯ ಆಟಗಾರರಿಂದ ತಂಡವು ದೊಡ್ಡ ಮೊತ್ತವನ್ನು ನಿರೀಕ್ಷಿಸುತ್ತಿದೆ. ಆದರೆ, ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. 

ಅಕ್ಷರ್ ಪಟೇಲ್ ಮಿತವ್ಯಯಕಾರಿ ಬೌಲಿಂಗ್ ಮಾಡುತ್ತಿದ್ದರೂ, ಕುಲದೀಪ್ ಯಾದವ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದಿರುವುದು ಡೆಲ್ಲಿಗೆ ಚಿಂತೆಯಾಗಿದೆ.

56
ಆರು ಪಾಯಿಂಟ್
Image Credit : SRH Insta

ಆರು ಪಾಯಿಂಟ್

ಅಂಕಪಟ್ಟಿಯಲ್ಲಿ ಎರಡೂ ತಂಡಗಳು ತಲಾ ಆರು ಅಂಕಗಳನ್ನು ಹೊಂದಿದ್ದರೂ, ನೆಟ್ ರನ್ ರೇಟ್‌ನಲ್ಲಿ ಹೈದರಾಬಾದ್ ಉತ್ತಮ ಸ್ಥಾನದಲ್ಲಿದೆ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಸನ್‌ರೈಸರ್ಸ್ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕ್ಲಾಸೆನ್‌ ಮಾತ್ರ ಸ್ಥಿರ ಆಟವಾಡುತ್ತಿದ್ದು, ಅಭಿಷೇಕ್‌, ಟ್ರ್ಯಾವಿಸ್‌ ಹೆಡ್‌, ಇಶಾನ್‌ ಕಿಶನ್‌ ಕೆಲ ಪಂದ್ಯಗಳ ಹೊರತಾಗಿ ನಿರ್ಣಾಯಕ ಘಟ್ಟಗಳಲ್ಲಿ ಕೈಕೊಟ್ಟಿದ್ದೇ ಹೆಚ್ಚು. ಕೊನೆ 2 ಪಂದ್ಯಗಳಲ್ಲಿ ಬೌಲಿಂಗ್‌ ಪಡೆಯ ಬಿಗು ದಾಳಿಯಿಂದಾಗಿ ತಂಡಕ್ಕೆ ಗೆಲುವು ಲಭಿಸಿದೆ.

66
ದೆಹಲಿ
Image Credit : ANI

ದೆಹಲಿ

ಮತ್ತೊಂದೆಡೆ ಡೆಲ್ಲಿ ತಂಡ ಕೊನೆ ಪಂದ್ಯದಲ್ಲಿ ಆರ್‌ಸಿಬಿಯನ್ನು ಅದರದೇ ತವರಿನಲ್ಲಿ ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಕೆ.ಎಲ್‌.ರಾಹುಲ್‌, ನಿಸ್ಸಾಂಕ, ಟ್ರಿಸ್ಟನ್‌ ಸ್ಟಬ್ಸ್‌, ಡೇವಿಲ್‌ ಮಿಲ್ಲರ್‌ ಸೇರಿ ಅನುಭವಿ ಬ್ಯಾಟರ್‌ಗಳು ತಂಡದಲ್ಲಿದ್ದು, ತಂಡದ ಗೆಲುವಿಗೆ ಕೊಡುಗೆ ನೀಡುತ್ತಿದ್ದಾರೆ. ಆದರೆ ಕುಲ್ದೀಪ್‌ ಯಾದವ್‌, ಅಕ್ಷರ್‌ರಿಂದ ಈ ಬಾರಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ಕಂಡುಬಂದಿಲ್ಲ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್
ಕ್ರಿಕೆಟ್

Latest Videos
Recommended Stories
Recommended image1
Bengaluru: ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್
Recommended image2
ವಿಡಿಯೋ: ಕ್ರಿಕೆಟ್‌ ಫೈನಲ್‌ಗೆ ಆಹ್ವಾನಿಸದ್ದಕ್ಕೆ ಪಿಚ್ ಧ್ವಂಸಗೊಳಿಸಿದ ಪುರಸಭೆ ಅಧ್ಯಕ್ಷ!
Recommended image3
ಎರಡು ಶೇಡ್‌ನಲ್ಲಿ ಕಂಡ ತಿಲಕ್‌ ಆಟ ಸೇರಿತು ದಾಖಲೆ; ಕೊನೆಗೂ ಬೂಮ್ರಾಗೆ ಬಿಡ್ತು ಗ್ರಹಣ
Related Stories
Recommended image1
Bengaluru: ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್
Recommended image2
ಎರಡು ಶೇಡ್‌ನಲ್ಲಿ ಕಂಡ ತಿಲಕ್‌ ಆಟ ಸೇರಿತು ದಾಖಲೆ; ಕೊನೆಗೂ ಬೂಮ್ರಾಗೆ ಬಿಡ್ತು ಗ್ರಹಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved