ಐಪಿಎಲ್ ಇತಿಹಾಸದಲ್ಲಿ ಮೂವರು ಸ್ಟಾರ್ ಪ್ಲೇಯರ್ ಇಲ್ಲದೆ ಕಣಕ್ಕಿಳಿದ ಸಿಎಸ್‌ಕೆ
ಐಪಿಎಲ್ ಇತಿಹಾಸದಲ್ಲಿ ಮೂವರು ಸ್ಟಾರ್ ಪ್ಲೇಯರ್ ಇಲ್ಲದೆ ಕಣಕ್ಕಿಳಿದ ಸಿಎಸ್‌ಕೆ, 2008ರಿಂದ 2025ರ ವರೆಗೆ ಈ ಮೂವರು ಸ್ಟಾರ್ ಪ್ಲೇಯರ್ ಪೈಕಿ ಒಬ್ಬರಾದರೂ ಪ್ಲೇಯಿಂಗ್ 11ನಲ್ಲಿ ಇದ್ದೇ ಇರುತ್ತಿದ್ದರು. ಇದೀಗ ಮೂವರೂ ಇಲ್ಲ.

ಸಿಎಸ್‌ಕೆ ತಂಡಕ್ಕೆ ಮೂವರು ಸ್ಟಾರ್ ಪ್ಲೇಯರ್ ಅನುಪಸ್ಥಿತಿ
ಐಪಿಎಲ್ 2026 ಟೂರ್ನಿಯಲ್ಲಿ ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಿ ಕೆಲ ಅಂಕಿ ಅಂಶಗಳು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. 2008ರಲ್ಲಿ ಐಪಿಎಲ್ ಅದ್ಧೂರಿಯಾಗಿ ಆರಂಭಗೊಂಡು ಪ್ರತಿ ವರ್ಷ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುತ್ತಾ ಹೋಗಿದೆ. ಇದರ ನಡುವೆ ಹಲವು ಬದಲಾವಣೆಗಳು ಆಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯಿಂಗ್ 11ನಲ್ಲಿ ಮೂವರು ಸ್ಟಾರ್ ಪ್ಲೇಯರ್ಸ್ ಖಾಯಂ ಆಗಿದ್ದರು. ಆದರೆ ಮೊದಲ ಬಾರಿಗೆ ಈ ಮೂವರು ಪ್ಲೇಯರ್ಸ್ ಇಲ್ಲದೆ ಸಿಎಸ್‌ಕೆ ಮೊದಲ ಬಾರಿಗೆ ಕಣಕ್ಕಿಳಿದಿದೆ.
ಮೂವರಲ್ಲಿ ಒಬ್ಬರಾದರು ಪ್ಲೇಯಿಂಗ್ 11ನಲ್ಲಿ ಖಾಯಂ
ಸಿಎಸ್‌ಕೆ ತಂಡದ ಈ ಮೂವರು ಸ್ಟಾರ್ ಪ್ಲೇಯರ್ ಎಂಎಸ್ ಧೋನಿ, ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ. ಈ ಮೂವರ ಪೈಕಿ ಪ್ಲೇಯಿಂಗ್ 11ನಲ್ಲಿ ಒಬ್ಬರಲ್ಲಾ ಮತ್ತೊಬ್ಬರು ಇದ್ದೇ ಇರುತ್ತಿದ್ದರು. ಆದರೆ 2026ರ ಮೊದಲ ಪಂದ್ಯದಲ್ಲಿ ಮೂವರು ಇಲ್ಲ.
2022ರಲ್ಲಿ ರೈನಾ ವಿದಾಯ
ಎಂಎಸ್ ಧೋನಿ ಹಾಗೂ ಸುರೇಶ್ ರೈನಾ ಇಬ್ಬರು ಸಿಎಸ್‍ಕೆ ತಂಡದಲ್ಲಿ ಆರಂಭದಿಂದಲೂ ಭಾಗವಾಗಿದ್ದರು. ರವೀಂದ್ರ ಜಡೇಜಾ ಬಳಿಕ ಆಕ್ಷನ್ ಮೂಲಕ ತಂಡ ಸೇರಿಕೊಂಡಿದ್ದರು. 2022ರಲ್ಲಿ ಸುರೇಶ್ ರೈನಾ ವಿದಾಯ ಹೇಳಿದರೂ ಎಂಎಸ್ ಧೋನಿ ಅಥವಾ ರವೀಂದ್ರ ಜಡೇಜಾ ಸಿಎಸ್‌ಕೆ ಪ್ಲೇಯಿಂಗ್ ಇಲೆವೆನ್ ಭಾಗವಾಗಿದ್ದರು.
ಧೋನಿ ಇಂಜುರಿ, ಜಡೇಜಾ ತಂಡ ಬದಲಾವಣೆ
2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಕಣಕ್ಕಿಳಿದಿದೆ. ಆದರೆ ಎಂಎಸ್ ಧೋನಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಇತ್ತ ರವೀಂದ್ರ ಜಡೇಜಾ ಈ ಬಾರಿಯ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಧೋನಿ ಲಭ್ಯವಿಲ್ಲ, ಜಡೇಜಾ ತಂಡದಲ್ಲಿಲ್ಲ.
ಧೋನಿ ನಾಯಕತ್ವ ಸಾಧನೆ
ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಒಟ್ಟು 10 ಬಾರಿ ಫೈನಲ್ ಪ್ರವೇಶಿಸಿದೆ. ಈ ಪೈಕಿ 5 ಬಾರಿ ಟ್ರೋಫಿ ಗೆದ್ದುಕೊಂಡಿದೆ. ಒಟ್ಟು 12 ಬಾರಿ ಪ್ಲೇಆಫ್ ಸುತ್ತು ಪ್ರವೇಶಿಸಿದೆ. ವಿಕೆಟ್ ಕೀಪಿಂಗ್‌ನಲ್ಲಿ 200 ಸ್ಟಂಪ್ಸ್ ದಾಖಲೆ ಬರೆದಿದ್ದರೆ, 5000 ರನ್ ಗಡಿ ದಾಟಿದ್ದಾರೆ. ಧೋನಿ ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಬಳಿಕ ರುತುರಾಜ್ ಗಾಯಕ್ವಾಡ್ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಧೋನಿ ನಾಯಕತ್ವ ಸಾಧನೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

