IPL 2024: ಈ ಬಾರಿಯ ಟಾಪ್ 5 ಡೇಂಜರಸ್ ಓಪನ್ನಿಂಗ್ ಜೋಡಿಗಳಿವು..!
ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ 17ನೇ ಆವೃತ್ತಿಯ ಹೊಸ್ತಿಲಲ್ಲಿದೆ. ಈ ಸಂದರ್ಭದಲ್ಲಿ 2024ರ ಐಪಿಎಲ್ ಟೂರ್ನಿಯಲ್ಲಿರುವ ಟಾಪ್ 5 ಅಪಾಯಕಾರಿ ಆರಂಭಿಕ ಜೋಡಿಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ಉದ್ಘಾಟನಾ ಪಂದ್ಯದ ನಡೆಯಲಿದ್ದು, ಬದ್ದ ವೈರಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಶುಭಾರಂಭಕ್ಕಾಗಿ ಕಾದಾಡಲಿವೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ ಆರಂಭಿಕ ಬ್ಯಾಟರ್‌ಗಳು ಹೆಚ್ಚು ಗಮನ ಸೆಳೆಯುವ ಸಾಧ್ಯತೆಯಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೋಸ್ಟ್ ಡೇಂಜರಸ್ ಓಪನ್ನಿಂಗ್ ಜೋಡಿ ಯಾವುದು ಎನ್ನುವುದನ್ನು ನೋಡೋಣ ಬನ್ನಿ
5. ಕೆ ಎಲ್ ರಾಹುಲ್ ರಾಹುಲ್ & ಕ್ವಿಂಟನ್ ಡಿ ಕಾಕ್
ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ನಾಯಕ ಕೆ ಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಇಬ್ಬರು ಸ್ಪೋಟಕ ಆರಂಭ ಒದಗಿಸಿಕೊಡುವುದರಲ್ಲಿ ಎತ್ತಿದ ಕೈ. ಇನ್ನು ಕೈಲ್ ಮೇಯರ್ಸ್ ಕೂಡಾ ಆರಂಭಿಕನಾಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ.
4. ರಚಿನ್ ರವೀಂದ್ರ-ಋತುರಾಜ್ ಗಾಯಕ್ವಾಡ್
ಡೆವೊನ್ ಕಾನ್‌ವೇ ಗಾಯಗೊಂಡು ಆರಂಭಿಕ ಐಪಿಎಲ್ ಪಂದ್ಯಗಳಿಗೆ ಹೊರಗುಳಿಯುವುದು ಖಚಿತವಾಗಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ರಚಿನ್ ರವೀಂದ್ರ ಹಾಗೂ ಋತುರಾಜ್ ಗಾಯಕ್ವಾಡ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇದು ಕೂಡಾ ಅಪಾಯಕಾರಿ ಆರಂಭಿಕ ಜೋಡಿಗಳಲ್ಲಿ ಒಂದು ಎನಿಸಲಿದೆ.
3. ರೋಹಿತ್ ಶರ್ಮಾ-ಇಶಾನ್ ಕಿಶನ್
ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಎಡಗೈ ಹಾಗೂ ಬಲಗೈ ಓಪನ್ನಿಂಗ್ ಕಾಂಬಿನೇಷನ್‌ನಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಎಡಗೈ ಬ್ಯಾಟರ್ ಇಶಾನ್ ಕಿಶನ್ ಮುಂಬೈಗೆ ಸ್ಪೋಟಕ ಆರಂಭ ಒದಗಿಸಿಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
2. ಯಶಸ್ವಿ ಜೈಸ್ವಾಲ್- ಜೋಸ್ ಬಟ್ಲರ್
ಸದ್ಯ ಯಶಸ್ವಿ ಜೈಸ್ವಾಲ್ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಜೋಸ್ ಬಟ್ಲರ್ ಜತೆಗೂಡಿ ರಾಜಸ್ಥಾನ ರಾಯಲ್ಸ್‌ಗೆ ವಿಸ್ಪೋಟಕ ಆರಂಭ ಒದಗಿಸಿಕೊಡಲು ಸಜ್ಜಾಗಿದ್ದಾರೆ. ಕಳೆದ ಬಾರಿಯ ಐಪಿಎಲ್‌ನಲ್ಲೂ ಈ ಜೋಡಿ ಅಪಾಯಕಾರಿ ಎನಿಸಿಕೊಂಡಿತ್ತು.
1. ವಿರಾಟ್ ಕೊಹ್ಲಿ-ಫಾಫ್ ಡು ಪ್ಲೆಸಿಸ್
ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಬೇಕಿದ್ದರೆ ಮತ್ತೊಮ್ಮೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಅಸಾಧಾರಣ ಆರಂಭಿಕ ಜತೆಯಾಟ ಆಡಬೇಕಿದೆ. ಕೊಹ್ಲಿ-ಫಾಫ್ ಅಬ್ಬರಿಸಿದರೆ ಎದುರಾಳಿ ಪಡೆ ಕಂಗಾಲಾಗುವುದಂತೂ ಗ್ಯಾರಂಟಿ.