2021ರ IPL ಟೂರ್ನಿಯಲ್ಲಿ ಅಬ್ಬರಿಸಿದ ಈ ನಾಲ್ವರು ಆಟಗಾರರು ಈ ಬಾರಿ ಫುಲ್ ಸೈಲೆಂಟ್..!
ಮುಂಬೈ: ಹೇಳಿ ಕೇಳಿ ಐಪಿಎಲ್ನ (Indian Premier League 2022) ಬ್ಯಾಟರ್ಗಳ ನೆಚ್ಚಿನ ಕ್ರೀಡೆ. ಪ್ರತಿ ಸೀಸನ್ನಲ್ಲಿ ಬೌಲರ್ಸ್ಗಿಂತ ಬ್ಯಾಟರ್ಸ್ ಅಬ್ಬರವೇ ಹೆಚ್ಚು. ಅಂತೆಯೇ ಈ ಐವರು ಕಳೆದ ಸೀಸನ್ನ ಐಪಿಎಲ್ (IPL Tournament) ಟೂರ್ನಿಯಲ್ಲಿ ಧೂಳೆಬ್ಬಿಸಿದ್ರು. ಟೂರ್ನಿ ಆರಂಭದಿಂದ ಕೊನೆಯವರೆಗೆ ಸಿಕ್ಸರ್-ಬೌಂಡ್ರಿಗಳ ಮಳೆಗರೆದ್ರು. ಅಭಿಮಾನಿಗಳಂತೂ ಈ ಜಬರ್ದಸ್ತ್ ಆಟವನ್ನ ಸಖತ್ ಎಂಜಾಯ್ ಮಾಡಿದ್ರು. ಆದ್ರೆ ಕಳೆದ ಸೀಸನ್ನಲ್ಲಿ ಅಬ್ಬರಿಸಿದ ಈ ನಾಲ್ವರು ಈ ಸಲ ಫ್ಲಾಫ್ ಶೋ ನೀಡಿ ಫ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

1. ಪಂಜಾಬ್ ಕ್ಯಾಪ್ಟನ್ ಆಗ್ತಿದ್ದಂತೆ ಮಂಕಾದ ಮಯಾಂಕ್ ಅಗರ್‌ವಾಲ್:
ಕಳೆದ ಸೀಸನ್ನಲ್ಲಿ ಕನ್ನಡಿಗ ಮಯಾಂಕ್ ಅಗರ್‌ವಾಲ್ 441 ರನ್ ಬಾರಿಸಿ ಶೈನ್ ಆಗಿದ್ರು. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಅನ್ನಿಸಿಕೊಂಡ್ರು. ಈ ಸಲನೂ ಮಯಾಂಕ್ರಿಂದ ಅಂತಹದೇ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದ್ರೆ ಈ ಸಲ 12 ಇನ್ನಿಂಗ್ಸ್ಗಳಿಂದ ಮಯಾಂಕ್ ಜಸ್ಟ್ 196 ರನ್ ಗಳಿಸಿ ಭಾರಿ ನಿರಾಸೆ ಮೂಡಿಸಿದ್ರು.
2. ಬರೀ ಒಂದು ಸೀಸನ್ ಹೀರೋ ಆದ ವೆಂಕಟೇಶ್ ಅಯ್ಯರ್:
ಮಧ್ಯಪ್ರದೇಶದ ವೆಂಕಟೇಶ್ ಅಯ್ಯರ್ ಕಳೆದ ಬಾರಿ ಕೆಕೆಆರ್ ಪರ ರನ್ ಹೊಳೆ ಹರಿಸಿದ್ರು. 370 ರನ್ ಬಾರಿಸಿ ತಂಡ ಫೈನಲ್ ತಲುಪಲು ಕಾರಣರಾಗಿದ್ರು. ಆದ್ರೆ ಇದೇ ವೆಂಕಿ ಈ ಸಲ ಪ್ಲಾಫ್ ಶೋ ನೀಡಿದ್ರು. ಬರೀ ಒಂದು ಅರ್ಧಶತಕ ಗಳಿಸಿದ್ದು, ತೀರಾ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.
3. ಡೇಂಜರಸ್ ಪೊಲ್ಲಾರ್ಡ್ ಗಳಿಸಿದ್ದು ಬರೀ 144 ರನ್:
ಇನ್ನು ಕಳೆದ 11 ಸೀಸನ್ಗಳಿಂದ ಮುಂಬೈ ಇಂಡಿಯನ್ಸ್ ಪರ ಕಿರನ್ ಪೊಲ್ಲಾರ್ಡ್ ಫಿನಿಶಿಂಗ್ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದ್ರು. ಆದ್ರೆ ಈ ಬಾರಿ ಟೂರ್ನಿಯುದ್ದಕ್ಕೂ ದೈತ್ಯ ಪೊಲ್ಲಾರ್ಡ್ ಕಳಪೆ ಆಟವಾಡಿದ್ರು. ಬರೀ 144 ರನ್ ಗಳಿಸಿ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ರು.
4. ಸೈಲೆಂಟಾದ ಪರ್ಪಲ್ ಕ್ಯಾಪ್ ವಿನ್ನರ್ ಹರ್ಷಲ್ :
ಹರ್ಷಲ್ ಪಟೇಲ್ 2021ರಲ್ಲಿ ಅತ್ಯಾದ್ಭುತ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ಗೆದ್ದಿದ್ರು. ಇಂತಹ ಬೌಲರ್ ಈ ಸಲ ಹಿಂದಿನ ಖದರ್ ತೋರಿಸಿಲ್ಲ. ಈವರೆಗೆ ಒಟ್ಟು 18 ವಿಕೆಟ್ ಕಬಳಿಸಿದ್ದಾರೆ. ಸ್ಲಾಗ್ನಲ್ಲಿ ಹೇರಳವಾಗಿ ರನ್ ಕೂಡ ಬಿಟ್ಟುಕೊಟ್ಟಿದ್ದಾರೆ. ಫೈನಲಿ ಮೇಲಿನ ಪ್ಲೇಯರ್ಸ್ ಒಂದು ಸೀಸನ್ನಲ್ಲಿ ಹೀರೋ ಅನ್ನಿಸಿಕೊಂಡ್ರೆ ಇನ್ನೊಂದು ಸೀಸನ್ನಲ್ಲಿ ವಿಲನ್ ಆಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.