ಫೀಲ್ಡ್‌ಗಿಳಿದರೆ Virat Kohli ರನ್‌ಗಳ ಮಳೆ ಸುರಿಸೋದು ಹೇಗೆ? ರಹಸ್ಯ ಬಿಚ್ಚಿಟ್ಟ ಕ್ರಿಕೆಟರ್!
ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನು ಅನೇಕರು ವಿಧ ವಿಧವಾದ ಕಾರಣಗಳಿಗೆ ಇಷ್ಟಪಡ್ತಾರೆ, ಫಾಲೋ ಮಾಡ್ತಾರೆ. ಅವರು ಫೀಲ್ಡ್‌ಗಿಳಿದರೆ ರನ್‌ಗಳ ಮಳೆ ಸುರಿಸುತ್ತಾರೆ. ಇದೆಲ್ಲ ಹೇಗೆ ಸಾಧ್ಯ ಎನ್ನೋದನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Visualisation ಒಂದು ಶಕ್ತಿಶಾಲಿ ಮಾನಸಿಕ ತಂತ್ರವಾಗಿದ್ದು, ಇದು ಸಾಕಷ್ಟು ಸನ್ನಿವೇಶಗಳಲ್ಲಿ ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. Visualisation ಮಾಡಿದ್ದರಿಂದಲೇ ಉತ್ತಮ ಆಟ ಆಡಿದ್ದೇನೆ ಎಂದು ವಿರಾಟ್ ಕೊಹ್ಲಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
“Visualization ನನಗೆ ಎಲ್ಲವೂ ಆಗಿದೆ. ಉದಾಹರಣೆಗೆ, ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ಗೆ ಕ್ರಿಕೆಟ್ ಪ್ರವಾಸಕ್ಕೆ ತಯಾರಾಗುವಾಗ, ನಾನು ಎರಡು ಮೂರು ತಿಂಗಳು ಮುಂಚಿತವಾಗಿ ಮಾನಸಿಕ ತಯಾರಿ ಶುರು ಮಾಡ್ತೀನಿ. ಬೆಸ್ಟ್ ಬೌಲರ್‌ನ್ನು ಮಣಿಸ್ತೀನಿ ಎಂದು ನಾನು ಗಟ್ಟಿಯಾಗಿ ನಂಬಿಕೆ ಇಟ್ಟುಕೊಳ್ತೀನಿ” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
“ಸಂಗೀತ ಕೇಳುವಾಗ, ಜಿಮ್‌ನಲ್ಲಿರುವಾಗ ಅಥವಾ ಕ್ರಿಕೆಟ್ ಪ್ರಾಕ್ಟೀಸ್ ಮಾಡುವಾಗಲೂ ಕೂಡ ನಾನು ಅದೇ visualization ಮಾಡ್ತೀನಿ. ನನಗೆ ಯಾವ ರೀತಿ ಸಂದರ್ಭ ಬರುತ್ತದೆ? ಅದನ್ನು ಹೇಗೆ ಎದುರಿಸಬೇಕು ಎಂದು ನಾನು visualization ಮಾಡ್ತೀನಿ” ಎಂದಿದ್ದಾರೆ.
“ಪಂದ್ಯ ಶುರುವಾದಾಗ, ನಾನು ನನ್ನ ಮನಸ್ಸಿನಲ್ಲಿ ಏನು ಅಂದುಕೊಂಡಿದ್ನೋ ಅದೇ ಆಗುವುದು, ಆಗ ನಾನು ಊಹಿಸಿದ್ದೇ ಆಗುವುದು. ಬೌಲರ್‌ನ್ನು ಹೇಗೆ ಮಣಿಸ್ತೀನಿ ಅಂತ ನಾನು ಕನಸು ಕಾಣ್ತೀನಿ. ಭಾವನಾತ್ಮಕವಾಗಿ ನನಗೆ ಆಗ ಹೇಗಿರುತ್ತದೆ ಎನ್ನೋದನ್ನು ಮೊದಲೇ ಮನಸ್ಸಿನಲ್ಲಿ ತಂದುಕೊಳ್ಳುವೆ. ಆಮೇಲೆ ಅದೇ ರೀತಿ ಸಂದರ್ಭ ಬರುತ್ತದೆ” ಎಂದಿದ್ದಾರೆ.
“visualization ಕಠಿಣವಾದ ಸವಾಲುಗಳನ್ನು ವಾಸ್ತವವಾಗಿ ಪರಿವರ್ತಿಸುತ್ತದೆ, ಕಷ್ಟದ ಸಂದರಭದಲ್ಲಿ ವಿಶ್ವಾಸ, ಮನಸ್ಸಿನ ಕಂಟ್ರೋಲ್ ಮಾಡುವುದು. ಏನಾಗತ್ತೋ ನೋಡೋಣ ಅಂತ ಫೀಲ್ಡ್‌ಗೆ ಇಳಿದರೆ ಆ ಸಂದರ್ಣ ಎದುರಿಸೋದು ತುಂಬ ಇಷ್ಟ” ಎಂದಿದ್ದಾರೆ.