MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಶಾಕ್‌ ಕೊಟ್ಟ BCCI; ಕ್ರಿಕೆಟ್ ದಿಗ್ಗಜರಿಗೆ ಇಂಥ ಗತಿ ಬಂತಾ?

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಶಾಕ್‌ ಕೊಟ್ಟ BCCI; ಕ್ರಿಕೆಟ್ ದಿಗ್ಗಜರಿಗೆ ಇಂಥ ಗತಿ ಬಂತಾ?

BCCI Contracts: 2025-26ನೇ ಸಾಲಿನ ಬಿಸಿಸಿಐ ಕೇಂದ್ರ ಗುತ್ತಿಗೆಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಮತ್ತು ಕೊಹ್ಲಿ ಸ್ಥಾನ ಅಚ್ಚರಿ ಮೂಡಿಸಿದೆ. ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ ಮಾತ್ರ ಅದೃಷ್ಟ ಕೈಹಿಡಿದಿಲ್ಲ . ಬೋರ್ಡ್ 'ಎ ಪ್ಲಸ್' ಗ್ರೇಡ್ ಅನ್ನು ರದ್ದುಗೊಳಿಸಿದೆ. 

2 Min read
Author : Padmashree Bhat
Published : Feb 10 2026, 10:01 AM IST
Share this Photo Gallery
  • FB
  • TW
  • Linkdin
  • Whatsapp
16
ರಿ 'ಗ್ರೇಡ್ ಎ+' ವಿಭಾಗ ಇಲ್ಲ
Image Credit : Getty

ರಿ 'ಗ್ರೇಡ್ ಎ+' ವಿಭಾಗ ಇಲ್ಲ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2025-26ನೇ ಸಾಲಿನ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 1, 2025 ರಿಂದ ಸೆಪ್ಟೆಂಬರ್ 30, 2026 ರವರೆಗೆ ಜಾರಿಯಲ್ಲಿರುವ ಈ ಕಾಂಟ್ರ್ಯಾಕ್ಟ್‌ನಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಬಿಸಿಸಿಐ ಅನಿರೀಕ್ಷಿತ ಶಾಕ್ ನೀಡಿದೆ. ಇಬ್ಬರೂ ತಮ್ಮ ಟಾಪ್ ಗ್ರೇಡ್‌ನಿಂದ ಕೆಳಗೆ ಇಳಿದಿದ್ದಾರೆ. 2026ರ ಟಿ20 ವಿಶ್ವಕಪ್ ನಡುವೆಯೇ ಬಿಸಿಸಿಐ ಈ ವಾರ್ಷಿಕ ಒಪ್ಪಂದಗಳನ್ನು ಪ್ರಕಟಿಸಿದೆ. ಈ ಬಾರಿ 'ಗ್ರೇಡ್ ಎ+' ವಿಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

26
ಟಾಪ್‌ ಎ ಕೆಟಗರಿಯೇ ಇಲ್ಲ!
Image Credit : Asianet News

ಟಾಪ್‌ ಎ ಕೆಟಗರಿಯೇ ಇಲ್ಲ!

ಬಿಸಿಸಿಐ ತನ್ನ ಹೊಸ ಕೇಂದ್ರ ಗುತ್ತಿಗೆಯಲ್ಲಿ 'ಎ ಪ್ಲಸ್' ಗ್ರೇಡ್ ಅನ್ನು ರದ್ದುಗೊಳಿಸಿದೆ. ಹಿಂದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಈ ಟಾಪ್ ಗ್ರೇಡ್‌ನಲ್ಲಿದ್ದರು. ಆದರೆ 2025-26ರ ಪಟ್ಟಿಯಲ್ಲಿ ಈ ಕೆಟಗರಿಯೇ ಇಲ್ಲ. ಸದ್ಯ ಟಾಪ್ 'ಗ್ರೇಡ್ ಎ' ನಲ್ಲಿ ಕೇವಲ ಮೂವರು ಆಟಗಾರರಿಗೆ ಮಾತ್ರ ಸ್ಥಾನ ಸಿಕ್ಕಿದೆ. ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಮಾತ್ರ ಈ ಗ್ರೇಡ್‌ನಲ್ಲಿದ್ದಾರೆ.

Related Articles

Related image1
148 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಯಾರೂ ಮಾಡಲಾಗದ ದಾಖಲೆಯ ಸನಿಹ ವಿರಾಟ್‌ ಕೊಹ್ಲಿ!
Related image2
ರ್‍ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮಾಗಿಲ್ಲ ಸರಿಸಾಟಿ! 18 ವರ್ಷಗಳ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ಹಿಟ್‌ಮ್ಯಾನ್
36
ಗ್ರೇಡ್‌ ಬಿಗೆ ಇಳಿದ ದಿಗ್ಗಜ ಆಟಗಾರರು
Image Credit : Getty

ಗ್ರೇಡ್‌ ಬಿಗೆ ಇಳಿದ ದಿಗ್ಗಜ ಆಟಗಾರರು

ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 'ಗ್ರೇಡ್-ಬಿ'ಗೆ ಇಳಿದಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇದಕ್ಕೆ ಮುಖ್ಯ ಕಾರಣ ಅವರ ನಿವೃತ್ತಿ ನಿರ್ಧಾರಗಳು. ಈ ಇಬ್ಬರೂ ಆಟಗಾರರು ಟೆಸ್ಟ್ ಮತ್ತು ಟಿ20 ಅಂತರಾಷ್ಟ್ರೀಯ ಮಾದರಿಗಳಿಂದ ನಿವೃತ್ತರಾಗಿದ್ದಾರೆ. ಸದ್ಯ ಅವರು ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಕೇವಲ ಒಂದು ಮಾದರಿಯಲ್ಲಿ ಮಾತ್ರ ಆಡುತ್ತಿರುವ ಕಾರಣ, ಬಿಸಿಸಿಐ ಅವರನ್ನು 'ಗ್ರೇಡ್-ಬಿ' ಪಟ್ಟಿಗೆ ಸೇರಿಸಿದೆ. ಇದರಿಂದ ಅವರ ವಾರ್ಷಿಕ ಆದಾಯದಲ್ಲೂ ಇಳಿಕೆಯಾಗಲಿದೆ.

46
ಶಮಿ ಇಲ್ಲ
Image Credit : Gemini

ಶಮಿ ಇಲ್ಲ

ಈ ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ಮತ್ತೊಂದು ಅಚ್ಚರಿಯೆಂದರೆ ಸ್ಟಾರ್ ಬೌಲರ್ ಮೊಹಮ್ಮದ್ ಶಮಿಯನ್ನು ಕೈಬಿಟ್ಟಿರುವುದು. 2025-26ರ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಶಮಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರೂ, ಅವರಿಗೆ ಕಾಂಟ್ರ್ಯಾಕ್ಟ್ ಸಿಕ್ಕಿಲ್ಲ. ಆಯ್ಕೆ ಸಮಿತಿಯ ಭವಿಷ್ಯದ ಯೋಜನೆಗಳಲ್ಲಿ ಶಮಿ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಈ ಮೂಲಕ ನೀಡಿದೆ.

56
ಬಿಸಿಸಿಐ ಅಧಿಕೃತ ಪಟ್ಟಿಯ ಪ್ರಕಾರ ಆಟಗಾರರ ವಿಂಗಡಣೆ
Image Credit : Instagram/virat.kohli/rohitsharma45

ಬಿಸಿಸಿಐ ಅಧಿಕೃತ ಪಟ್ಟಿಯ ಪ್ರಕಾರ ಆಟಗಾರರ ವಿಂಗಡಣೆ

ಗ್ರೇಡ್ A: ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ.

ಗ್ರೇಡ್ B: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.

ಗ್ರೇಡ್ C: ಅಕ್ಷರ್ ಪಟೇಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ್ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರವಿ ಬಿಷ್ಣೋಯ್, ರುತುರಾಜ್ ಗಾಯಕ್ವಾಡ್.

66
ವಾರ್ಷಿಕ ವೇತನ ಬದಲಾವಣೆ
Image Credit : Getty

ವಾರ್ಷಿಕ ವೇತನ ಬದಲಾವಣೆ

ಗ್ರೇಡ್‌ಗಳ ಬದಲಾವಣೆಯಿಂದ ಆಟಗಾರರ ವಾರ್ಷಿಕ ವೇತನದಲ್ಲೂ ಬದಲಾವಣೆಯಾಗಿದೆ. ಹೊಸ ಪಟ್ಟಿಯ ಪ್ರಕಾರ ವೇತನದ ವಿವರಗಳು ಹೀಗಿವೆ:

ಗ್ರೇಡ್ A: ₹ 7 ಕೋಟಿ (ಶುಭಮನ್ ಗಿಲ್, ಬುಮ್ರಾ, ಜಡೇಜಾ).

ಗ್ರೇಡ್ B: ₹ 5 ಕೋಟಿ (ರೋಹಿತ್, ಕೊಹ್ಲಿ, ಪಾಂಡ್ಯ ಸೇರಿದಂತೆ ಇತರ ಆಟಗಾರರು).

ಗ್ರೇಡ್ C: ₹ 3 ಕೋಟಿ (ರಿಂಕು ಸಿಂಗ್, ಅಕ್ಷರ್ ಪಟೇಲ್ ಮತ್ತು ಇತರರು). ಹಿಂದೆ 'ಎ ಪ್ಲಸ್' ಗ್ರೇಡ್‌ನಲ್ಲಿದ್ದಾಗ ರೋಹಿತ್ ಮತ್ತು ಕೊಹ್ಲಿಗೆ ₹ 7 ಕೋಟಿ ಸಿಗುತ್ತಿತ್ತು. ಈಗ 'ಗ್ರೇಡ್-ಬಿ'ಗೆ ಬಂದಿದ್ದರಿಂದ ಅವರಿಗೆ ₹ 5 ಕೋಟಿ ಮಾತ್ರ ಸಿಗಲಿದೆ. ಅಂದರೆ, ಅವರ ವಾರ್ಷಿಕ ಆದಾಯದಲ್ಲಿ ₹ 2 ಕೋಟಿಯಷ್ಟು ಕಡಿತವಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಕ್ರಿಕೆಟ್
ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ಬಿಸಿಸಿಐ

Latest Videos
Recommended Stories
Recommended image1
ಬಹಿಷ್ಕಾರದಿಂದ ಯೂಟರ್ನ್‌: ಇಲ್ಲಿ ದುಡ್ಡೇ ದೊಡ್ಡಪ್ಪ! ICC ಮುಂದೆ ಅಂಗಲಾಚಿದ ಪಾಕ್
Recommended image2
ಬಹಿಷ್ಕಾರದಿಂದ ಪಾಕ್‌ ಯೂಟರ್ನ್‌ ?ಭಾರತ ಜತೆ ಟಿ 20 ಪಂದ್ಯದ ಕುರಿತು ಇಂದು ಘೋಷಣೆ ?
Recommended image3
ಏನಿದು ಬಜಾಜ್ ಚೇತಕ್ C25 ವಿಶೇಷತೆ? WPL ಗೆದ್ದ ಆರ್‌ಸಿಬಿ ಗರ್ಲ್ಸ್‌ಗೆ ಸೇರಿದ ಲೇಟೆಸ್ಟ್ ಎಲೆಕ್ಟ್ರಿಕ್ ರೈಡ್ ಸೆನ್ಸೇಷನ್‌!
Related Stories
Recommended image1
148 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಯಾರೂ ಮಾಡಲಾಗದ ದಾಖಲೆಯ ಸನಿಹ ವಿರಾಟ್‌ ಕೊಹ್ಲಿ!
Recommended image2
ರ್‍ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮಾಗಿಲ್ಲ ಸರಿಸಾಟಿ! 18 ವರ್ಷಗಳ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ಹಿಟ್‌ಮ್ಯಾನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved