ಭಾರತ-ಇಂಗ್ಲೆಂಡ್‌ 3ನೇ ಟಿ20 ಪಂದ್ಯಕ್ಕೂ ಮುನ್ನ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್‌ ಶಾಕ್‌..!

First Published Mar 16, 2021, 11:36 AM IST

ಅಹಮದಾಬಾದ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟಿ20 ಸರಣಿ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು, ಈಗಾಗಲೇ ಎರಡು ಪಂದ್ಯಗಳು ರೋಚಕ ಅಂತ್ಯವನ್ನು ಕಂಡಿವೆ. ಮೊದಲ ಪಂದ್ಯವನ್ನು ಇಂಗ್ಲೆಂಡ್‌ 8 ವಿಕೆಟ್‌ಗಳಿಂದ ಜಯಿಸಿದ್ದರೆ, ಎರಡನೇ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಜಯಿಸುವ ಮೂಲಕ ಇಂಗ್ಲೆಂಡ್‌ಗೆ ವಿರಾಟ್ ಪಡೆ ತಿರುಗೇಟು ನೀಡಿದೆ.
ಕೊರೋನಾ ಹಾಗೂ ಲಾಕ್‌ಡೌನ್‌ ತೆರವಿನ ಬಳಿಕ ಭಾರತದಲ್ಲಿ ನಡೆಯುತ್ತಿರುವ ಮೊದಲ ಸೀಮಿತ ಓವರ್‌ಗಳ ಸರಣಿ ಇದಾಗಿದ್ದು, ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುತ್ತಿದೆ. ಹೀಗಿರುವಾಗಲೇ 3ನೇ ಟಿ20 ಪಂದ್ಯ ಆರಂಭಕ್ಕೂ ಮುನ್ನವೇ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್‌ ಶಾಕ್ ಎದುರಾಗಿದೆ.