- Home
- Sports
- Cricket
- ಭಾರತ-ಇಂಗ್ಲೆಂಡ್ ಇಂದಿನ ಮ್ಯಾಚ್ ಮಳೆಯಿಂದ ರದ್ದಾಗುತ್ತಾ? ಶುರುವಾಯ್ತು ಹೊಸ ಟೆನ್ಷನ್, ಹವಾಮಾನ ವರದಿ ಏನು?
ಭಾರತ-ಇಂಗ್ಲೆಂಡ್ ಇಂದಿನ ಮ್ಯಾಚ್ ಮಳೆಯಿಂದ ರದ್ದಾಗುತ್ತಾ? ಶುರುವಾಯ್ತು ಹೊಸ ಟೆನ್ಷನ್, ಹವಾಮಾನ ವರದಿ ಏನು?
ಡುರ್ಹಾಮ್: India vs England 1st T20 Weather Report ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಮೊದಲ ಪಂದ್ಯ ನಡೆಯೋದೇ ಅನುಮಾನ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

ಇಂದು ಭಾರತ-ಇಂಗ್ಲೆಂಡ್ ಮೊದಲ ಟಿ20 ಮ್ಯಾಚ್
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಇಂದು ಇಲ್ಲಿನ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಗ್ರೌಂಡ್ ಆತಿಥ್ಯ ವಹಿಸಿದೆ. ಇಂದು ರಾತ್ರಿ ಭಾರತೀಯ ಕಾಲಮಾನ 10 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ.
ಮೊದಲ ಸಲ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಗ್ರೌಂಡ್‌ನಲ್ಲಿ ಆಡಲಿರುವ ಭಾರತ
ಅಂದಹಾಗೆ ಭಾರತ ತಂಡವು ಇದುವರೆಗೂ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಗ್ರೌಂಡ್ ಮೈದಾನದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಹೀಗಾಗಿ ಭಾರತೀಯ ಆಟಗಾರರಿಗೆ ಈ ಮ್ಯಾಚ್ ಒಂದು ರೀತಿಯ ಹೊಸ ಅನುಭವ ನೀಡಲಿದೆ. ಆದರೆ ಹವಾಮಾನ ವರದಿಯ ಪ್ರಕಾರ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎನ್ನಲಾಗಿದೆ.
ಭಾರತ-ಇಂಗ್ಲೆಂಡ್ ಮ್ಯಾಚ್‌ಗೆ ಮಳೆ ಅಡ್ಡಿ?
AccWeather ರಿಪೋರ್ಟ್ ಪ್ರಕಾರ, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮ್ಯಾಚ್ ನಡೆಯುವ ವೇಳೆ ಮೈದಾನದ ಸುತ್ತಮುತ್ತ ಮೋಡ ಕವಿದ ವಾತಾವರಣವಿರಲಿದೆ. ಹವಾಮಾನ ವರದಿಯ ಪ್ರಕಾರ ಇಂದಿನ ಪಂದ್ಯಕ್ಕೆ 61% ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಇದಷ್ಟೇ ಅಲ್ಲದೇ 1.5 ಮಿಲಿಮೀಟರ್ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ತಾಪಮಾನ ಹೇಗಿರಲಿದೆ?
AccWeather ವರದಿಯ ಪ್ರಕಾರ ಚೆಸ್ಟರ್ ಲೆ ಸ್ಟ್ರೀಟ್‌ನಲ್ಲಿ 16 ಡಿಗ್ರಿ ಸೆಲ್ಸಿಯಸ್ ತಾಪಮಾನವಿರಲಿದೆ. ಇದಷ್ಟೇ ಅಲ್ಲದೇ ತಣ್ಣನೆಯ ಗಾಳಿ ಬೀಸುವ ಸಾಧ್ಯತೆಯಿದ್ದು, ಒಂದು ಹಂತದಲ್ಲಿ ತಾಪಮಾನ 11 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ವೇಗದ ಬೌಲರ್‌ಗಳಿಗೆ ಹೆಚ್ಚು ನೆರವಾಗುವ ಸಾಧ್ಯತೆ
ಇಂಗ್ಲೆಂಡ್‌ನ ಈ ಪಿಚ್ ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆಯಿದೆ. ವೇಗವಾಗಿ ಗಾಳಿ ಬೀಸುವುದರಿಂದ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ವೇಗಿಗಳಿಗೆ ಪಿಚ್ ನೆರವಾಗುವ ನಿರೀಕ್ಷೆಯಿದೆ. ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಚುರುಕಾಗಿ ರನ್ ಗಳಿಸುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯವು ಭಾರತೀಯ ಕಾಲಮಾನ 10 ಗಂಟೆಯಿಂದ ಆರಂಭವಾಗಲಿದ್ದು, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ಸೋನಿ ಲಿವ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

