ಭಾರತ ಮಹಿಳಾ ಕ್ರಿಕೆಟ್ ತಂಡವು ನಾಕೌಟ್‌ನಲ್ಲಿ ಮುಗ್ಗರಿಸಲು ಕಾರಣವೇನು..? ಇಲ್ಲಿವೆ ನೋಡಿ ಇಂಟ್ರೆಸ್ಟಿಂಗ್ ಸಂಗತಿ
ಬೆಂಗಳೂರು(ಫೆ.25): ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಸೆಮಿಫೈನಲ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದೆ. ಈ ಮೂಲಕ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಮತ್ತೊಮ್ಮೆ ಕೈಚೆಲ್ಲಿದೆ. ಭಾರತ ತಂಡವು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತದಲ್ಲಿ ಮುಗ್ಗರಿಸಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..
Image credit: Getty
1. ಟೂರ್ನಿಯುದ್ದಕ್ಕೂ ಕಳಪೆ ಫೀಲ್ಡಿಂಗ್. ಸೆಮೀಸ್‌ನಲ್ಲೂ ಆಸೀಸ್‌ನ ಬೆಥ್ ಮೂನಿ ಹಾಗೂ ಮೆಗ್ ಲ್ಯಾನಿಂಗ್‌ರ ಕ್ಯಾಚ್ ಕೈಚೆಲ್ಲಿದ ಭಾರತೀಯರು.
2. ಬ್ಯಾಟರ್‌ಗಳ ಸಾಧಾರಣ ಸ್ಟ್ರೈಕ್‌ರೇಟ್. ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಸ್ತಿಕಾ ಭಾಟಿಯಾ ಟೂರ್ನಿಯಲ್ಲಿ 110ಕ್ಕೂ ಕಡಿಮೆ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಅತಿಯಾದ ಡಾಟ್‌ಬಾಲ್‌ಗಳಿಂದಾಗಿ ತಂಡದ ಮೇಲೆ ಒತ್ತಡ ಹೆಚ್ಚಾಯ್ತು.
3. ಸ್ಪಿನ್ನರ್‌ಗಳ ದಯನೀಯ ವೈಫಲ್ಯ. ಒಂದೂ ವಿಕೆಟ್ ಇಲ್ಲದೆ ಟೂರ್ನಿ ಮುಗಿಸಿದ ರಾಜೇಶ್ವರಿ ಗಾಯಕ್ವಾಡ್. ದೀಪ್ತಿ ಶರ್ಮಾ, ರಾಧಾ ಯಾದವ್‌ರಿಂದಲೂ ಸಾಧಾರಣ ಪ್ರದರ್ಶನ. ಬಹುತೇಕ ಸರಣಿಗಳಲ್ಲಿ ಸ್ಪಿನ್ನರ್‌ಗಳೇ ತಂಡದ ಅಸ್ತ್ರವಾಗಿದ್ದರು
4. ಫಿಟ್ನೆಸ್ ಕೊರತೆ. ಭಾರತದ ಹಲವು ಆಟಗಾರ್ತಿಯರು ಮೈದಾನದಲ್ಲಿ ಚುರುಕಾಗಿ ಕಾಣಲಿಲ್ಲ. ಎದುರಾಗಳಿಗೆ ಹಲವು ಸನ್ನಿವೇಶಗಳಲ್ಲಿ ಸುಲಭವಾಗಿ ರನ್ ಬಿಟ್ಟುಕೊಟ್ಟ ತಂಡ. ಇದು ಸೆಮೀಸ್‌ನಲ್ಲಿಯೂ ಮರುಕಳಿಸಿತು.
5. ಖಾಯಂ ಕೋಚ್‌ಗಳ ಕೊರತೆ. ವಿಶ್ವಕಪ್‌ಗೆ 2 ತಿಂಗಳಿದ್ದಾಗ ಕೋಚ್ ಬದಲಾಯಿಸಿದ ಬಿಸಿಸಿಐ. ಇದು ತಂಡದ ಮೇಲೆ ಪರಿಣಾಮ ಬೀರಿತು. ಲೀಗ್ ಹಂತದಲ್ಲಿ ಅದ್ಭುತ ಲಯ ಹೊಂದಿದ್ದ ಭಾರತ, ನಾಕೌಟ್‌ನಲ್ಲಿ ದಿಟ್ಟ ಮನೋಭಾವ ತೋರಿತಾದರೂ, ಕೊನೆಯಲ್ಲಿ ಒತ್ತಡದ ಪರಿಸ್ಥಿತಿ ನಿಭಾಯಿಸಲು ವಿಫಲವಾಯಿತು.