MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವೈಡ್, ಕನ್ಕಶನ್‌ ಸಬ್‌ಸ್ಟಿಟ್ಯೂಟ್‌ ಕುರಿತಂತೆ ಹೊಸದಾಗಿ ರೂಲ್ಸ್ ಪ್ರಕಟಿಸಿದ ಐಸಿಸಿ! ಈ ನಿಯಮ ನಿಮಗೆ ಗೊತ್ತಿರಲಿ

ವೈಡ್, ಕನ್ಕಶನ್‌ ಸಬ್‌ಸ್ಟಿಟ್ಯೂಟ್‌ ಕುರಿತಂತೆ ಹೊಸದಾಗಿ ರೂಲ್ಸ್ ಪ್ರಕಟಿಸಿದ ಐಸಿಸಿ! ಈ ನಿಯಮ ನಿಮಗೆ ಗೊತ್ತಿರಲಿ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ದೇಶಿ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಕುರಿತಂತೆ ರೂಲ್ಸ್‌ನಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರಬೇಕಾದ ಇಂಟ್ರೆಸ್ಟಿಂಗ್ ಸಂಗತಿಗಳೆನಿಸಿವೆ. 

1 Min read
Author : Naveen Kodase
| Updated : Jun 28 2025, 11:01 AM IST
Share this Photo Gallery
  • FB
  • TW
  • Linkdin
  • Whatsapp
18
Image Credit : X/Richard Kettleborough

ಕಳೆದ ತಿಂಗಳಷ್ಟೇ ಐಸಿಸಿ ಬೌಂಡರ್ ಲೈನ್ ಕ್ಯಾಚ್‌ಗೆ ಸಂಬಂಧಿಸಿದಂತೆ ಪರಿಷ್ಕೃತ ರೂಲ್ಸ್ ಘೋಷಿಸಿತ್ತು. ಇದೀಗ ಮತ್ತಷ್ಟು ಪರಿಷ್ಕೃತ ಕ್ರಿಕೆಟ್ ರೂಲ್ಸ್ ಪರಿಚಯಿಸಿದೆ.

28
Image Credit : our own

ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದು ಹೊರಗುಳಿಯುವ(ಕನ್ಕಶನ್‌ ಸಬ್‌ಸ್ಟಿಟ್ಯೂಟ್‌) ಆಟಗಾರ 7 ದಿನಗಳ ನಂತರವವೇ ಕ್ರಿಕೆಟ್‌ಗೆ ಮರಳಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ತಿಳಿಸಿದೆ.

Related Articles

Related image1
ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಈ ಇಬ್ಬರ ಕಿತ್ತಾಟವೇ ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ?
Related image2
ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಬೋರ್ಡ್ ಪಟ್ಟಿ ಪ್ರಕಟ; ಬಿಸಿಸಿಐ ನಂ.1, ಲಂಕಾ, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?
38
Image Credit : X

ಬೌಂಡರಿ ಲೈನ್‌ ಕ್ಯಾಚ್‌, ಚೆಂಡು ಬಳಕೆ ಸೇರಿದಂತೆ ಹಲವು ನಿಮಯಗಳಲ್ಲಿ ಬದಲಾವಣೆ ತಂದಿರುವ ಐಸಿಸಿ ಶುಕ್ರವಾರ ಮತ್ತಷ್ಟು ನಿಯಮಗಳನ್ನು ಪರಿಷ್ಕರಣೆ ಮಾಡಿದೆ. ಈ ನಿಮಯಗಳು ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ.

48
Image Credit : Getty

ಎಲ್ಲಾ ತಂಡಗಳು ಕನ್ಕಶನ್‌ ಸಬ್‌ಸ್ಟಿಟ್ಯೂಟ್‌ ಆಟಗಾರರನ್ನು ಪಂದ್ಯ ಆರಂಭಕ್ಕೂ ಮುನ್ನವೇ ಸಲ್ಲಿಸಬೇಕು. ಪಂದ್ಯದ ವೇಳೆ ಯಾವುದಾದರೂ ಆಟಗಾರ ಕನ್ಕಶನ್‌ಗೆ ಒಳಗಾದರೆ ಅವರು ಮುಂದಿನ 7 ದಿನಗಳ ಕಾಲ ಆಡುವಂತಿಲ್ಲ ಎಂದು ತಿಳಿಸಿದೆ.

58
Image Credit : Social Media

ಇನ್ನು, ವೈಡ್‌ ಬಾಲ್‌ನಲ್ಲೂ ಹೊಸ ನಿಯಮ ಜಾರಿಯಾಗಲಿದೆ. ಬೌಲರ್‌ ಚೆಂಡು ಎಸೆಯುವ ಸಂದರ್ಭ ಬ್ಯಾಟರ್‌ ಎಲ್ಲಿರುತ್ತಾನೊ, ಆ ಸ್ಥಳವನ್ನೇ ಗುರುತಿಸಿ ವೈಡ್‌ ಕರೆ ನೀಡಲಾಗುತ್ತದೆ.

68
Image Credit : our own

ಚೆಂಡು ಎಸೆದ ಮೇಲೆ ಬ್ಯಾಟರ್‌ ಅತ್ತಿತ್ತ ಹೋದರೂ, ಚೆಂಡು ಎಸೆಯುವಾಗ ಬ್ಯಾಟರ್‌ ಇರುವ ಸ್ಥಳದ ಆಧಾರದಲ್ಲಿ ವೈಡ್‌ ಘೋಷಿಸಲಾಗುತ್ತದೆ.

78
Image Credit : our own

ಅಲ್ಲದೆ, ದೇಸಿ ಕ್ರಿಕೆಟ್‌ಗಳಲ್ಲಿ ಬದಲಿ ಆಟಗಾರರಿಗೂ ಬೌಲಿಂಗ್‌, ಬ್ಯಾಟಿಂಗ್‌ ಅವಕಾಶ ನೀಡಲು ಐಸಿಸಿ ನಿರ್ಧರಿಸಿದೆ.

88
Image Credit : BCCI Domestic/X

ಈ ಮೊದಲು ಕನ್ಕಶನ್‌ ಬದಲಿ ಆಟಗಾರನಿಗೆ ಮಾತ್ರ ಬ್ಯಾಟಿಂಗ್, ಬೌಲಿಂಗ್‌ ಅವಕಾಶವಿತ್ತು. ಇನ್ನು ಮುಂದೆ ಯಾವುದೇ ರೀತಿಯ ಗಾಯಕ್ಕೂ ಬದಲಿ ಆಟಗಾರನಿಗೆ ಈ ನಿಯಮ ಅನ್ವಯವಾಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಕ್ರಿಕೆಟ್ ಕ್ರೀಡಾಂಗಣ

Latest Videos
Recommended Stories
Recommended image1
Probable 11 ರಿಂಕು ಬೆನ್ನಲ್ಲೇ ಮತ್ತೊಬ್ಬ ಫಿನೀಶರ್ ಔಟ್, ಭಾರತ ವಿಂಡೀಸ್ ಪಂದ್ಯಕ್ಕೆ ಕುಲ್ದೀಪ್ ವಾಪಸ್
Recommended image2
ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಮಾಜಿ ಪತಿ ಮಲ್ಲಿಕ್? ಯಾರೀಕೆ?
Recommended image3
ಭ್ರಮನಿರಸನಗೊಂಡ ಕರ್ನಾಟಕ, ರಣಜಿ ಕಿರೀಟ ಗೆದ್ದು ಭಾರತದ ಹೊಸ ಕ್ರಿಕೆಟ್ ರಾಜನಾದ ಜಮ್ಮು-ಕಾಶ್ಮೀರ!
Related Stories
Recommended image1
ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಈ ಇಬ್ಬರ ಕಿತ್ತಾಟವೇ ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ?
Recommended image2
ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಬೋರ್ಡ್ ಪಟ್ಟಿ ಪ್ರಕಟ; ಬಿಸಿಸಿಐ ನಂ.1, ಲಂಕಾ, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved