265 ರನ್ ಟಾರ್ಗೆಟ್ ಚೇಸ್, ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್
265 ರನ್ ಟಾರ್ಗೆಟ್ ಚೇಸ್, ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್, ಡೆಲ್ಲಿ ಬೃಹತ್ ಮೊತ್ತ ಸಿಡಿಸಿ ನಿರಾಳರಾಗಿದ್ದರೆ, ಪಂಜಾಬ್ ಕಿಂಗ್ಸ್ ಗುರಿ ಚೇಸ್ ಮಾಡಿ ಹೊಸ ಇತಿಹಾಸ ರಚಿಸಿದೆ.

ಗರಿಷ್ಠ ರನ್ ಚೇಸಿಂಗ್
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 264 ರನ್ ಸಿಡಿಸಿತ್ತು. ಆದರೆ ಪಂಜಾಬ್ ಕೇವಲ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿದೆ. ಈ ಮೂಲಕ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಬರೆದಿದೆ.
ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ
ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ತನ್ನದೇ ದಾಖಲೆ ಮುರಿದು ಹೊಸ ದಾಖಳೆ ಸೃಷ್ಟಿಸಿದೆ. ಚೇಸಿಂಗ್‌ನಲ್ಲಿ 2024ರಲ್ಲಿ ಕೆಕೆಆರ್ ನೀಡಿದ 262 ರನ್ ಚೇಸ್ ಮಾಡಿ ಪಂಜಾಬ್ ಕಿಂಗ್ಸ್ ದಾಖಲೆ ಬರೆದಿತ್ತು. ಇದೀಗ ಪಂಜಾಬ್ ಕಿಂಗ್ಸ್ ಡೆಲ್ಲಿ ನೀಡಿದ 265 ರನ್ ಟಾರ್ಗೆಟ್ ಚೇಸ್ ಮಾಡಿ ಹೊಸ ಇತಿಹಾಸ ರಚಿಸಿದೆ.
ಐಪಿಎಲ್‌ನಲ್ಲಿ ಯಶಸ್ವಿ ಚೇಸಿಂಗ್
- ಪಂಜಾಬ್ ಕಿಂಗ್ಸ್ 256 ರನ್ vs ಡೆಲ್ಲಿ, 2026
- ಪಂಜಾಬ್ ಕಿಂಗ್ಸ್ 262 ರನ್ vs ಕೆಕೆಆರ್, 2024
- ಸನ್‌ರೈಸರ್ಸ್ ಹೈದರಾಬಾದ್ 247 ರನ್ vs ಪಂಜಾಬ್, 2025
- ರಾಜಸ್ಥಾನ ರಾಯಲ್ಸ್ 226 ರನ್ vs ಪಂಜಾಬ್, 2020
- ರಾಜಸ್ಥಾನ ರಾಯಲ್ಸ್ 224 ರನ್ vs ಕೆಕೆಆರ್ 2024
ಕೆಎಲ್ ರಾಹುಲ್ ಹೋರಾಟ ವ್ಯರ್ಥ
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 67 ಎಸೆತದಲ್ಲಿ 152 ರನ್ ಸಿಡಿಸಿದ್ದರು. ಈ ಮೂಲಕ ಕೆಎಲ್ ರಾಹುಲ್ ಗರಿಷ್ಠ ಸ್ಕೋರ್ ದಾಖಲೆ ಮಾಡಿದ್ದರು. ಆದರೆ ರಾಹುಲ್ ಹೋರಾಟ ವ್ಯರ್ಥವಾಗಿದೆ.
ಪಂಜಾಬ್ ಬ್ಯಾಟಿಂಗ್ ಅಬ್ಬರ
ಪಂಜಾಬ್ ಬ್ಯಾಟಿಂಗ್ ಅಬ್ಬರ ನೋಡಿ ಕ್ರಿಕೆಟ್ ದಿಗ್ಗಜರೇ ಬೆಚ್ಚಿ ಬಿದ್ದಿದ್ದಾರೆ. ಇತ್ತ ನಾಯಕ ಶ್ರೇಯಸ್ ಅಯ್ಯರ್ ಬಗ್ಗೆ ಭಾರಿ ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ. ಟೀಂ ಇಂಡಿಯಾ ಟಿ20 ತಂಡಕ್ಕೆ ಅಯ್ಯರ್ ಕರೆಯಿಸಿಕೊಳ್ಳಿ ಅನ್ನೋ ಕೂಗು ಕೇಳುತ್ತಿದೆ. ಜೊತೆಗೆ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ಅಯ್ಯರ್‌ಗೆ ನೀಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಪಂಜಾಬ್ ಬ್ಯಾಟಿಂಗ್ ಅಬ್ಬರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

