11 ವರ್ಷ ಹಿರಿಯ ಆಯೇಷಾರ ಪ್ರೀತಿಯಲ್ಲಿ ಶಿಖರ್ ಧವನ್ ಬಿದ್ದಿದ್ದು ಹೇಗೆ?
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 2012ರಲ್ಲಿ ಭಾರತೀಯ ಮೂಲದ ಮೆಲ್ಬೋರ್ನ್ ಬಾಕ್ಸರ್ ಆಯೇಷಾ ಮುಖರ್ಜಿಯನ್ನು ಮದುವೆಯಾಗಿದ್ದಾರೆ. ಗಬ್ಬರ್ ಎಂದೇ ಫೇಮಸ್ ಆಗಿರುವ ಶಿಖರ್ ಧವನ್ ಲವ್ ಸ್ಟೋರಿ ಹೆಚ್ಚಿನವರಿಗೆ ತಿಳಿದಿಲ್ಲ. ತನ್ನಗಿಂತ 11 ವರ್ಷ ಹಿರಿಯ ವಯಸ್ಸಿನ ಆಯೇಷಾರ ಪ್ರೀತಿಯಲ್ಲಿ ಧವನ್ ಬಿದ್ದಿದ್ದು ಹೇಗೆ ಇಲ್ಲಿದೆ ನೋಡಿ.
ಶಿಖರ್ ಧವನ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ.
ಭಾರತೀಯ ಕ್ರಿಕೆಟ್‌ನ 'ಗಬ್ಬರ್' ಎಂದು ಫೇಮಸ್ ಆಗಿರುವ ಇವರು ವೈಯಕ್ತಿಕ ಮತ್ತು ಪ್ರೀತಿಯ ಜೀವನದ ವಿಷಯಕ್ಕೆ ಬಂದಾಗ, ಮೋಸ್ಟ್ ಲವ್ಲಿ ಮನುಷ್ಯ.
ಶಿಖರ್ ಮದುವೆಯಾಗಿರುವ ಮೆಲ್ಬೋರ್ನ್ ಮೂಲದ ಹವ್ಯಾಸಿ ಬಾಕ್ಸರ್ ಆಯೆಷಾ ಮುಖರ್ಜಿ ವಯಸ್ಸಿನಲ್ಲಿ 11 ವರ್ಷ ದೊಡ್ಡವರು ಹಾಗೂ ಎರಡು ಮಕ್ಕಳ ತಾಯಿ ಮತ್ತು ಡಿವೋರ್ಸಿ.
ಶಿಖರ್ ಮತ್ತು ಆಯೇಷಾರ ಪ್ರೀತಿಗೆ ವೇದಿಕೆ ಫೇಸ್‌ಬುಕ್. ಎಲ್ಲವೂ ಪ್ರಾರಂಭವಾಗಿದ್ದು ಫ್ರೆಂಡ್ ರಿಕ್ವೆಸ್ಟ್ ಮೂಲಕ. ಆಯೆಷಾ ಹರ್ಭಜನ್ ಸಿಂಗ್‌ಗೆ ಕಾಮನ್ ಫ್ರೆಂಡ್ ಎಂಬುದು ನಂತರ ತಿಳಿದ ಧವನ್.
ಚಾಟ್ ಮಾಡಲು ಶುರು ಮಾಡಿದ ನಂತರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ, 2009 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಈ ರಿಲೆಷನ್‌ಶಿಪ್‌ಗೆ ಧವನ್ ತಮ್ಮ ತಾಯಿಯ ಬೆಂಬಲವನ್ನು ಹೊಂದಿದ್ದರು.
ಭಾರತದ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಬಾಂಗ್ ಆಗಿದ್ದರೆ, ತಾಯಿ ಇಂಗ್ಲಿಷ್ ಮೂಲದವರಾಗಿರುವ ಕಾರಣ ಇಂಗ್ಲಿಷ್ ಮತ್ತು ಬಂಗಾಳಿ ನಿರರ್ಗಳವಾಗಿ ಮಾತನಾಡಬಲ್ಲರು.
ಭಾರತದ ಆಹಾರವನ್ನು ಇಷ್ಟಪಡುವ ಇವರು ಅಡುಗೆ ಮಾಡಲು ಸಹ ಇಷ್ಟಪಡುತ್ತಾರೆ. ಅಯೇಷಾ ಕಿಕ್-ಬಾಕ್ಸಿಂಗ್ ಕಲಿತಿದ್ದಾರೆ.
ದೆಹಲಿ ಮೂಲದ ಪಂಜಾಬಿ ಕುಟುಂಬದ ಧವನ್ ಆಯೇಷಾರನ್ನು 2012 ರಲ್ಲಿ ಸಾಂಪ್ರದಾಯಿಕ ಸಿಖ್ ವಿವಾಹ ಸಮಾರಂಭದಲ್ಲಿ ಮದುವೆಯಾದರು.
2014 ರಲ್ಲಿ ಆಯೇಷಾ ಹಾಗೂ ಧವನ್ ಜೋರವರ್ ಧವನ್ ಎಂಬ ಗಂಡು ಮಗುವನ್ನು ಹೊಂದಿದರು.
ಬಹುತೇಕ ಪಂದ್ಯಗಳಲ್ಲಿ ಧವನ್‌ಗೆ ಆಯೇಷ ಸಪೋರ್ಟ್ ಮಾಡುವುದು ನೋಡಿದ್ದೇವೆ.
ಆಯೇಷಾರ ಮೊದಲ ಮದುವೆಯ ಹೆಣ್ಣುಮಕ್ಕಳನ್ನುಸಹ ದತ್ತು ತೆಗೆದುಕೊಂಡು ಮೂವರು ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತಿದ್ದಾರೆ ಧವನ್.