- Home
- Sports
- Cricket
- IPL 2026: ಅಂಬಾನಿ ಮುಂಬೈ ಇಂಡಿಯನ್ಸ್ ಟೀಂಗೆ ಚಂಬು ಕೊಡಲು ಸಕಲ ಸಿದ್ಧತೆ ಮಾಡ್ಕೊಂಡಿರೋ ಹಾರ್ದಿಕ್ ಪಾಂಡ್ಯ
IPL 2026: ಅಂಬಾನಿ ಮುಂಬೈ ಇಂಡಿಯನ್ಸ್ ಟೀಂಗೆ ಚಂಬು ಕೊಡಲು ಸಕಲ ಸಿದ್ಧತೆ ಮಾಡ್ಕೊಂಡಿರೋ ಹಾರ್ದಿಕ್ ಪಾಂಡ್ಯ
Hardik Pandya: ಈಗ ದೇಶದಲ್ಲಿ ಐಪಿಎಲ್ ಕಾವು ಜೋರಾಗಿದೆ. ಮುಂಬೈ ಇಂಡಿಯನ್ಸ್ ಟೀಂ ಎಲ್ಲ ಮ್ಯಾಚ್‌ಗಳು ಸೋತಿವೆ. ಹೀಗಿರುವಾಗ ಟೀಂ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರು ಅನಿಲ್ ಅಂಬಾನಿ ಒಡೆತನದ ಟೀಂಗೆ ಚಂಬು ಕೊಡಲು ರೆಡಿಯಾದಂತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಜಸ್ಪ್ರೀತ್ ಬೂಮ್ರಾಗೆ ಬೈದ ಪಾಂಡ್ಯ
ಹೌದು, ಜಸ್ಪ್ರೀತ್ ಬೂಮ್ರಾ ಅವರ ಆಟದ ವೈಖರಿ ಏನು? ಈಗಾಗಲೇ ಎಷ್ಟು ವಿಕೆಟ್ ತೆಗೆದಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿದೆ. ವಿಶ್ವದ ಟಾಪ್ ಬೌಲರ್ ಆಗಿರೋ ಬೂಮ್ರಾಗೆ ಹಾರ್ದಿಕ್ ಅವರು ಮೈದಾನದಲ್ಲಿಯೇ ಬೈದರು. ವಿಕೆಟ್ ತೆಗೆದಿಲ್ಲ ಎಂದು ಬೈದರೂ ಕೂಡ, ದುಃಖದಲ್ಲಿದ್ದರೂ ಕೂಡ ಅವರು ಮಾತ್ರ ನಗುತ್ತಲೇ ಇದ್ದರು.
ಬೂಮ್ರಾಗೆ ಹೀಗೆ ಮಾತಾಡೋದು ಸರಿ ಅಲ್ಲ
ಇದು ಬೂಮ್ರಾರಿಗೆ ಇನ್ನಷ್ಟು ಬೇಸರ ತರಿಸುವುದು, ಆಟ ಆಡದೆ ಇರಲು ಕುಂದಿಸಬಹುದು. ಒಟ್ಟಿನಲ್ಲಿ ಈ ನಡೆ ಒಳ್ಳೆಯದಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ತಡವಾಗಿ ಬಂದ ಮಹಿಕಾ ಶರ್ಮಾ
ಅತ್ತ ಹಾರ್ದಿಕ್ ಪಾಂಡ್ಯ ಅವರು ತನ್ನ ಗರ್ಲ್‌ಫ್ರೆಂಡ್, ಮಹಿಕಾ ಶರ್ಮಾ ಜೊತೆಗಿನ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಈಗ ಎಲ್ಲ ಕಡೆ ತಮ್ಮ ಗರ್ಲ್‌ಫ್ರೆಂಡ್ ಜೊತೆ ಓಡಾಡುತ್ತಿದ್ದಾರೆ. ಮುಂಬೈ ಟೀಂ ಮ್ಯಾಚ್ ಮುಗಿದ ಬಳಿಕ ಮಹಿಕಾ ಅವರು 20 ನಿಮಿಷ ತಡವಾಗಿ ಬಂದು ಬಸ್ ಹತ್ತಿರುವ ವಿಡಿಯೋ ವೈರಲ್ ಆಗ್ತಿದೆ.
ಗರ್ಲ್‌ಫ್ರೆಂಡ್‌ಗೋಸ್ಕರ ಹೀಗೆಲ್ಲ ಮಾಡ್ತಾರಾ?
ಬಸ್‌ನಲ್ಲಿ ಎಲ್ಲರೂ ಕುಳಿತಿದ್ದರು, ಮಹಿಕಾಗೋಸ್ಕರ ಬಸ್ ಹೊರಟಿರಲಿಲ್ಲ. ಇನ್ನು ಟೀಂ ಮೆಂಬರ್ ಬಂದರೂ ಕೂಡ ಅವರಿಗೆ ಕೂರಲು ಜಾಗವೇ ಇರಲಿಲ್ಲ. ಇನ್ನು ಹಾರ್ದಿಕ್ ಪಾಂಡ್ಯ ಕೂಡ ಲೇಟ್ ಆಗಿ ಬಸ್‌ಗೆ ಬಂದರು. ಗರ್ಲ್‌ಫ್ರೆಂಡ್‌ಗೋಸ್ಕರ ಬಸ್‌ನ್ನು 20 ನಿಮಿಷ ಕಾಯಿಸಿದರು ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
