ಸಿಂಪಲ್ ಬರ್ತ್ ಡೇ ಆಚರಿಸಿಕೊಂಡ ಸೌರವ್ ಗಂಗೂಲಿ
ಕೋಲ್ಕತ: ಟೀಂ ಇಂಡಿಯಾ ಕಂಡ ಕೆಚ್ಚೆದೆಯ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು(ಜು.08-2021) 49ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇಡೀ ದೇಶವೇ ಕೋವಿಡ್ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಅತ್ಯಂತ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಕ್ರಿಕೆಟ್, ಫುಟ್ಬಾಲ್, ಒಲಿಂಪಿಕ್ಸ್ ಕುರಿತಂತೆ ಸೌರವ್ ಗಂಗೂಲಿ ಮನ ಬಿಚ್ಚಿ ಮಾತನಾಡಿದ್ದಾರೆ.
49ನೇ ಹುಟ್ಟುಹಬ್ಬ ಆಚರಿಸಿಕೊಂಡ ಸೌರವ್ ಗಂಗೂಲಿ. ಕೇಕ್ ಕಟ್ ಮಾಡಿ ಸರಳವಾಗಿ ದಾದಾ ಜನ್ಮದಿನ ಆಚರಣೆ
ಕೋವಿಡ್ ಸಂಕಷ್ಟದಲ್ಲಿ ಸಂಭ್ರಮಾಚರಣೆ ಮಾಡದಿರಲು ಗಂಗೂಲಿ ನಿರ್ಧಾರ ಮಾಡಿ, ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ
ಆರೋಗ್ಯದ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ತಾವು ಸದೃಢ & ಆರೋಗ್ಯವಾಗಿದ್ದೇನೆಂದ ಬಿಸಿಸಿಐ ಅಧ್ಯಕ್ಷ
ಕೋವಿಡ್ ಸೋಂಕಿನಿಂದ ಬಚಾವಾಗಲು ಎಲ್ಲರೂ ಮನೆಯಲ್ಲಿಯೇ ಇರಿ ಎಂದು ಸೌರವ್ ಕಿವಿಮಾತು
ಸುರಕ್ಷಿತವಾಗಿ ಕ್ರಿಕೆಟ್ ನಡೆಯುತ್ತೆ, ನಿಲ್ಲುವುದಿಲ್ಲ. ಒಂದು ವೇಳೆ ಟಿ20 ವಿಶ್ವಕಪ್ ಮತ್ತೊಮ್ಮೆ ರದ್ದಾದರೆ ಸಾಕಷ್ಟು ಆರ್ಥಿಕ ನಷ್ಟವಾಗಲಿದೆ ಎಂದ ಸೌರವ್
ಯುರೋ ಕಪ್‌ನಲ್ಲಿ ಇಟಲಿ ಹಾಗೂ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದ್ದು, ಎರಡೂ ತಂಡಗಳು ಬಲಿಷ್ಠವಾಗಿದ್ದು, ಉತ್ತಮವಾಗಿ ಆಡುತ್ತಿವೆ ಎಂದಿದ್ದಾರೆ.
ನಾನು ಬ್ರೆಜಿಲ್ ಫುಟ್ಬಾಲ್ ತಂಡದ ಬೆಂಬಲಿಗ ಆದರೆ ಅರ್ಜಿಂಟೀನಾದ ಡಿಯಾನೊ ಮರಡೋನಾ ಫ್ಯಾನ್ ಎಂದ ದಾದಾ
ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಹೆಚ್ಚು ಪದಕ ಗೆಲ್ಲುವ ನಿರೀಕ್ಷೆಯಿದೆ ಎಂದ ಸೌರವ್ ಗಂಗೂಲಿ.