- Home
- Sports
- Cricket
- ಹಿಂದು-ಮುಸ್ಲಿಂ ಧರ್ಮದ ಗೋಡೆ ದಾಟಿ ಒಂದಾದ ಮೊಹಮ್ಮದ್ ಕೈಫ್-ಪೂಜಾ ಯಾದವ್ ಜೋಡಿ; ಇದು ಬಾಲಿವುಡ್‌ಗಿಂತ ರೋಚಕ ಲವ್‌ಸ್ಟೋರಿ!
ಹಿಂದು-ಮುಸ್ಲಿಂ ಧರ್ಮದ ಗೋಡೆ ದಾಟಿ ಒಂದಾದ ಮೊಹಮ್ಮದ್ ಕೈಫ್-ಪೂಜಾ ಯಾದವ್ ಜೋಡಿ; ಇದು ಬಾಲಿವುಡ್‌ಗಿಂತ ರೋಚಕ ಲವ್‌ಸ್ಟೋರಿ!
ಮೊಹಮ್ಮದ್ ಕೈಫ್ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಫೀಲ್ಡರ್‌ಗಳಲ್ಲಿಒಬ್ಬರು. 2002ರಲ್ಲಿ ಇಂಗ್ಲೆಂಡ್ ಎದುರು ನಾಟ್‌ವೆಸ್ಟ್ ಸೀರಿಸ್ ಫೈನಲ್‌ನಲ್ಲಿ ಕೈಫ್-ಯುವಿ ಜೋಡಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಬನ್ನಿ ಕೈಫ್ ಲವ್‌ಸ್ಟೋರಿ ತಿಳಿಯೋಣ

ಜಾತಿ-ಧರ್ಮ ಮೀರಿ ಜತೆಯಾದ ಕೈಫ್-ಪೂಜಾ
ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮತ್ತು ಪತ್ರಕರ್ತೆ ಪೂಜಾ ಯಾದವ್ ಅವರ ಪ್ರೇಮಕಥೆ ಯಾವುದೇ ಸಿನಿಮಾಗೆ ಕಡಿಮೆ ಇಲ್ಲ. ಧರ್ಮದ ಎಲ್ಲೆ ಮೀರಿ ಈ ಜೋಡಿ ಒಂದಾಗಿದ್ದರು. ಅಲಹಾಬಾದ್‌ನಲ್ಲಿ ಜನಿಸಿದ ಕೈಫ್, ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು.
ಕೈಫ್-ಪೂಜಾ ಲವ್ ಸ್ಟೋರಿ ಯಾವ ಸಿನಿಮಾ ಸ್ಟೋರಿಗೆ ಕಮ್ಮಿಯಿಲ್ಲ
ಮೊಹಮ್ಮದ್ ಕೈಫ್ ಅವರ ಪ್ರೇಮಕಥೆ ಯಾವುದೇ ಬಾಲಿವುಡ್ ಸಿನಿಮಾಗಿಂತ ಕಡಿಮೆ ಇಲ್ಲ. ಅವರು ಹಿಂದೂ ಧರ್ಮದ ಪೂಜಾ ಯಾದವ್ ಅವರನ್ನು ಮದುವೆಯಾಗುವ ಮೂಲಕ ಧರ್ಮ, ಜಾತಿಯನ್ನು ಮೀರಿ ತಮ್ಮ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಪೂಜಾ ಯಾದವ್ ವೃತ್ತಿಯಲ್ಲಿ ಜರ್ನಲಿಸ್ಟ್ ಆಗಿದ್ದರು
ಪೂಜಾ ಯಾದವ್ ನೋಯ್ಡಾ ಮೂಲದ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಮೊಹಮ್ಮದ್ ಕೈಫ್, ಪೂಜಾ ಅವರ ಪ್ರೀತಿಗೆ ಮನಸೋತಿದ್ದರು. ಬನ್ನಿ, ಇವರ ಮುದ್ದಾದ ಲವ್ ಸ್ಟೋರಿ ಬಗ್ಗೆ ತಿಳಿಯೋಣ.
ಕಾಮನ್ ಫ್ರೆಂಡ್ ಮೂಲಕ ಭೇಟಿಯಾದ ಕೈಫ್-ಪೂಜಾ
ಮೊಹಮ್ಮದ್ ಕೈಫ್ ಮತ್ತು ಪೂಜಾ ಯಾದವ್ 2007ರಲ್ಲಿ ಒಂದು ಪಾರ್ಟಿಯಲ್ಲಿ ತಮ್ಮ ಕಾಮನ್ ಫ್ರೆಂಡ್ ಮೂಲಕ ಭೇಟಿಯಾದರು. ಆ ಸಮಯದಲ್ಲಿ ಪೂಜಾ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಪೂಜಾ ಅವರ ಸೌಂದರ್ಯ ಮತ್ತು ಸ್ವಭಾವವನ್ನು ನೋಡಿ ಮೊಹಮ್ಮದ್ ಕೈಫ್ ಮೊದಲ ಭೇಟಿಯಲ್ಲೇ ಮನಸೋತಿದ್ದರು. ಪೂಜಾ ಅವರಿಗೂ ಮೊದಲ ನೋಟದಲ್ಲೇ ಕೈಫ್ ತುಂಬಾ ಇಷ್ಟವಾಗಿದ್ದರು.
4 ವರ್ಷಗಳ ಡೇಟಿಂಗ್ ಬಳಿಕ 2011ರಲ್ಲಿ ಮದುವೆಯಾದ ಈ ಜೋಡಿ
ಕೈಫ್ ಮತ್ತು ಪೂಜಾ 4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು. ನಂತರ, ಮಾರ್ಚ್ 26, 2011 ರಂದು ನೋಯ್ಡಾದಲ್ಲಿ ಇಬ್ಬರೂ ವಿವಾಹವಾದರು. ಬೇರೆ ಬೇರೆ ಧರ್ಮದವರಾಗಿದ್ದರೂ, ಏಳು ಜನ್ಮ ಜೊತೆಯಾಗಿರಲು ನಿರ್ಧರಿಸಿದರು. ಮೊಹಮ್ಮದ್ ಕೈಫ್ ಮತ್ತು ಪೂಜಾ ಯಾದವ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಹಿರಿಯ ಮಗ ಕಬೀರ್ ಫೆಬ್ರವರಿ 28, 2012 ರಂದು ಜನಿಸಿದರೆ, ಮಗಳು ಇವಾ 2017 ರಲ್ಲಿ ಜನಿಸಿದರು.
ಕ್ರಿಕೆಟ್ ನಿವೃತ್ತಿ ಬಳಿಕ ಕ್ರಿಕೆಟ್ ಕಾಮೆಂಟ್ರಿ ಮಾಡುತ್ತಿರುವ ಕೈಫ್
ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಮೊಹಮ್ಮದ್ ಕೈಫ್ ಕ್ರಿಕೆಟ್ ಕಾಮೆಂಟರಿ ಮಾಡುತ್ತಾ ಬಂದಿದ್ದಾರೆ. ಅವರು 2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಆದರೆ ಗೆಲುವು ಸಿಕ್ಕಿರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

