ಕ್ರಿಕೆಟರ್ ಸುರೇಶ್ ರೈನಾರ ಮುದ್ದಾದ ಮಗ ರಿಯೊನ ಫೋಟೋಗಳು!
ಕಳೆದ ವರ್ಷ ಎರಡನೇ ಮಗುವಿಗೆ ತಂದೆಯಾದ ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾರ ಮಗನಿಗೆ ಈಗ 10 ತಿಂಗಳು. ರೈನಾ ಪತ್ನಿ ಪ್ರಿಯಾಂಕಾ 23 ಮಾರ್ಚ್ 2020ರಂದು ಎರಡನೆ ಮಗು ರಿಯೊಗೆ ಜನ್ಮ ನೀಡಿದರು. ರಿಯೊ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ, ರೈನಾ ಮಗನೊಂದಿಗೆ ತನ್ನ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರಿಯೊ ಕೆಲವೊಮ್ಮೆ ತನ್ನ ಅಕ್ಕ ಮತ್ತು ಕೆಲವೊಮ್ಮೆ ಅಜ್ಜಿಯೊಂದಿಗೆ ಮೋಜು ಮಾಡುತ್ತಿರುವುದು ಕಂಡು ಬರುತ್ತದೆ. ಜೂನಿಯರ್ ರೈನಾನ 10 ಕ್ಯೂಟ್ ಫೋಟೋಗಳು ನಿಮಗಾಗಿ.
ಭಾರತೀಯ ಕ್ರಿಕೆಟಿಗರ ವೈಯಕ್ತಿಕ ಜೀವನ ಸಹ ಸಖತ್ ಫೇಮಸ್. ಕಳೆದ ವರ್ಷ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಸುರೇಶ್ ರೈನಾ, ಈಗ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸುರೇಶ್ ರೈನಾ ಮತ್ತು ಪ್ರಿಯಾಂಕಾ ರೈನಾರಿಗೆ 2 ಮಕ್ಕಳಿವೆ. 4 ವರ್ಷದ ಮಗಳು ಗಾರ್ಸಿಯಾ ಮತ್ತು ಮಗ ರಿಯೊ.
ಸುರೇಶ್ ರೈನಾ ಮತ್ತು ಪ್ರಿಯಾಂಕಾ ಅವರು ಮಾರ್ಚ್ 23, 2020 ರಂದು ಎರಡನೇ ಮಗುವಿಗೆ ಪೋಷಕರಾದರು. ರೈನಾರ 10 ತಿಂಗಳ ಮಗ ತುಂಬಾ ಮುದ್ದಾಗಿದೆ.
ರಿಯೊ ರೈನಾನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ, ರೈನಾ ತಮ್ಮ ಮಗನೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ರಿಯೊ ಕ್ಯಾಮೆರಾಕ್ಕೆ ಪೋಸ್ ನೀಡಿದರೆ, ರೈನಾ ಮಗನನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. 'ಪ್ರೀತಿಯಿಂದ ತುಂಬಿದ ಜೀವನ ತುಂಬಿದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಮಕರ ಸಂಕ್ರಾಂತಿಯಂದು ಶೇರ್ ಮಾಡಿದ ಅಕ್ಕ ತಮ್ಮನ ಈ ಫೋಟೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಗಾರ್ಸಿಯಾ ತನ್ನ ಕಿರಿಯ ಸಹೋದರ ರಿಯೊವನ್ನು ಹಿಡಿದಿಟ್ಟು ಕೊಂಡಿದ್ದಾಳೆ.
ರಿಯೊ ತನ್ನ ಅಜ್ಜಿಯ ತೊಡೆ ಮೇಲೆ.
ಜ್ಯೂನಿಯರ್ ರೈನಾ ಪ್ಯಾಂಟ್ ಶರ್ಟ್ ತಲೆಗೆ ಟೋಪಿ ಧರಿಸಿರುವ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು.
ಕ್ರಿಸ್‌ಮಸ್ ಸಮಯದ ಈ ಫೋಟೋವನ್ನು ಸುಮಾರು 4 ಲಕ್ಷ ಜನರು ಇಷ್ಟ ಪಟ್ಟಿದ್ದಾರೆ.
ರಿಯೊ 6 ತಿಂಗಳ ಮಗುವಾಗಿದ್ದಾಗ, ಕುಳಿತು ಕೊಳ್ಳಲು ಪ್ರಾರಂಭಿಸಿದಾಗಿನ ಫೋಟೋ.
ರೈನಾ ಜೊತೆಗೆ, ಅವರ ಪತ್ನಿ ಪ್ರಿಯಾಂಕಾ ಮಗನ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ತನ್ನ ಇಬ್ಬರು ಮಕ್ಕಳೊಂದಿಗೆ.