ಫ್ರೆಂಡ್ ಮದುವೇಲಿ ಧೋನಿ ಹಾಗೂ ಸಾಕ್ಷಿ - ಎಥ್ನಿಕ್ ವೇರ್ ಲುಕ್ ವೈರಲ್!
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಎಮ್.ಎಸ್.ಧೋನಿ ಹಾಗೂ ಪತ್ನಿ ಸಾಕ್ಷಿ ಧೋನಿ ಈ ದಿನಗಳಲ್ಲಿ ಅವರ ಫ್ರೆಂಡ್ ಪ್ರಿಯಾಂಶು ಚೋಪ್ರಾ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಫೆಬ್ರವರಿ 15ರಂದು ನಡದ ಈ ಮದುವೆಯ ಸಂದರ್ಭದಲ್ಲಿನ ಧೋನಿ ಹಾಗೂ ಸಾಕ್ಷಿ ಫೋಟೋಗಳು ವೈರಲ್ ಆಗಿವೆ. ಪಿಂಕ್ ಕಲರ್ ಲೆಹಂಗಾ ಧರಿಸಿದ್ದ ಸಾಕ್ಷಿ ಧೋನಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ಅದೇ ಸಮಯದಲ್ಲಿ ಧೋನಿ ಡಿಸೈನರ್ ಕುರ್ತಾ ಹಾಗೂ ಪೈಜಾಮದಲ್ಲಿ ಮಿಂಚಿದರು. ಸಾಕ್ಷಿ ತಮ್ಮ ಸೋಶಿಯಲ್ ಮೀಡಿಯಾ ಆಕೌಂಟ್‌ನಲ್ಲಿ ಮದುವೆಯ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಧೋನಿ ಪತ್ನಿ ಸಾಕ್ಷಿಯ ಫ್ರೆಂಡ್ಸ್ ಲಿಸ್ಟ್ ಸಾಕಷ್ಟು ದೊಡ್ಡದಿದೆ. ಅವರು ಸದಾ ತಮ್ಮ ಗರ್ಲ್ ಗ್ಯಾಂಗ್ ಜೊತೆ ಎಂಜಾಯ್ ಮಾಡುತ್ತಾರೆ.
ಇತ್ತೀಚೆಗೆ ಅವರು ತಮ್ಮ ಫ್ರೆಂಡ್ ಹಾಗೂ ಧೋನಿ ಎಂಟರ್ಟೈನ್ ಕಂಪನಿ ನಿರ್ವಹಿಸುತ್ತಿರುವ ಪ್ರಿಯಾಂಶು ಚೋಪ್ರಾರ ಮದುವೆಯ ಫೊಟೋಗಳನ್ನು ಶೇರ್ ಮಾಡಿದ್ದರು.
ತಮ್ಮ ಫ್ರೆಂಡ್ ಮದುವೆ ಫಂಕ್ಷನ್‌ನಲ್ಲಿ ಫೋಸ್ ನೀಡುತ್ತಿರುವ ಎಮ್.ಎಸ್. ಧೋನಿ ಹಾಗೂ ಸಾಕ್ಷಿ ಧೋನಿ.
ಧೋನಿಯ ಈ ಸ್ಟೈಲ್ ಅನ್ನು ಫ್ಯಾನ್ಸ್ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಸಾಕ್ಷಿ ಪಿಂಕ್ ಲೆಹಂಗಾ ಲುಕ್ ಕೂಡ ಸಖತ್ ಸದ್ದು ಮಾಡುತ್ತಿದೆ.
ಕೇವಲ 10 ಘಂಟೆಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನ ಅವರ ಫೋಟೋಗೆ ರಿಯಾಕ್ಟ್ ಮಾಡಿದ್ದಾರೆ.
ಇದರ ಜೊತೆ ಸಾಕ್ಷಿ ಡಿಸೈನರ್ ಡ್ರೆಸ್ಸಲ್ಲಿ ಗ್ಲಾಸ್ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಶು ಚೋಪ್ರಾ ಸಾಕ್ಷಿಯ ಕಾಲೇಜ್ ಸ್ನೇಹಿತೆ. ತಮ್ಮ ಕಾಲೇಜು ದಿನಗಳ ಹಳೆ ಫೋಟೋವನ್ನು ಸಹ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ ಸಾಕ್ಷಿ.
ದೊಡ್ಡ ಕಿವಿಯೊಲೆಯ ಜೊತೆ ಆಫ್ ಶೌಲ್ಡರ್ ಡ್ರೆಸ್‌ನ ಸಾಕ್ಷಿ ಧೋನಿಯ ಈ ಲುಕ್ ಎಲ್ಲರ ಗಮನ ಸೆಳೆದಿದೆ.
ಎಮ್ ಎಸ್ ಧೋನಿ 2019ರಲ್ಲಿ ಎಂಟರ್ಟೈನ್ ಕಂಪನಿಯನ್ನು ಶುರು ಮಾಡಿದರು. 2020ರ ಸೆಪ್ಟೆಂಬರ್‌ನಲ್ಲಿ ಇದು ಅಘೋರಿಯ ಜೀವನದ ಬಗ್ಗೆ ವೆಬ್ ಸಿರೀಸ್ ಮಾಡಲಿದೆ ಎಂದು ವರದಿಯಾಗಿತ್ತು.