- Home
- Sports
- Cricket
- ಐಪಿಎಲ್‌ನಲ್ಲಿ ಟಿಕೆಟ್ ಕಳ್ಳಾಟ, ಡಿಸಿ-ಆರ್‌ಸಿಬಿ ಟಿಕೆಟ್ 80,000 ರೂಗೆ ಮಾರಾಟ, DDCAಗೆ ಪೊಲೀಸ್ ನೋಟಿಸ್
ಐಪಿಎಲ್‌ನಲ್ಲಿ ಟಿಕೆಟ್ ಕಳ್ಳಾಟ, ಡಿಸಿ-ಆರ್‌ಸಿಬಿ ಟಿಕೆಟ್ 80,000 ರೂಗೆ ಮಾರಾಟ, DDCAಗೆ ಪೊಲೀಸ್ ನೋಟಿಸ್
ಐಪಿಎಲ್ ಟೂರ್ನಿಯಲ್ಲಿ ವ್ಯವಸ್ಥಿತವಾಗಿ ಟಿಕೆಟ್ ಕಳ್ಳಾಟ ನಡೆಯುತ್ತಿರುವುದು ಇದೀಗ ಬಯಲಾಗಿದೆ. ಡಿಸಿ ಹಾಗೂ ಆರ್‌ಸಿಬಿ ಪಂದ್ಯದ ಟಿಕೆಟ್‌ನ್ನು ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರೇ 80 ಸಾವಿರ ರೂಗೆ ಮಾರಾಟ ಮಾಡುತ್ತಿರುವುದು ಬಯಲಾಗಿದೆ.

8 ರಿಂದ 20 ಸಾವಿರ ರೂ ಟೆಕೆಟ್ 80 ಸಾವಿರ ರೂಗೆ ಮಾರಾಟ
ಐಪಿಎಲ್ 2026 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಂತಿಮ ಘಟ್ಟದಲ್ಲಿದೆ. ಪ್ಲೇ ಆಫ್ ಲೆಕ್ಕಾಚಾರ ತೀವ್ರಗೊಂಡಿದೆ. ಇದರ ನಡುವೆ ದೆಹಲಿಯ ಕ್ರೈಮ್ ಬ್ರಾಂಚ್ ಪೊಲೀಸರ ಕಾರ್ಯಾಚರಣೆಯಲ್ಲಿ ಟಿಕೆಟ್ ಕಳ್ಳಾಟ ಪತ್ತೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದ ಟಿಕೆಟ್‌ನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ ಬರೋಬ್ಬರಿ 80,000 ರೂಪಾಯಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ.

ದೆಹಲಿ ಕ್ರೈಂ ಬ್ರಾಂಚ್ ಪೊಲೀಸರಿಂದ ನೋಟಿಸ್
ದೆಹಲಿ ಕ್ರಿಕೆಟ್ ಸಂಸ್ಥೆ ಸಿಇಒ, ಅಕೌಂಟ್ ವಿಭಾಗದ ಪಿಎಗೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ನೋಟಿಸ್ ನೀಡಿದ್ದಾರೆ. ಬ್ಲಾಕ್ ಟಿಕೆಟ್ ಕುರಿತು ದೆಹಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಕಾಂಪ್ಲಿಮೆಂಟರ್ ಪಾಸ್‌ಗಳನ್ನು (ಫ್ರೀ ಟಿಕೆಟ್) ದೆಹಲಿ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರು 80 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ನೋಟಿಸ್ ನೀಡಿದ್ದಾರೆ.
ಡೆಸಿ-ಆರ್‌ಸಿಬಿ ಪಂದ್ಯದ ಟಿಕೆಟ್ ಗರಿಷ್ಠ ಮಾರಾಟ
ದೆಹಲಿಯ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದ ಉಚಿತ ಟಿಕೆಟ್‌ಗಳನ್ನು ಡಿಡಿಸಿಎ ಮುಖ್ಯಸ್ಥರು 80,000 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸಾಮಾನ್ಯವಾಗಿ ಜೇಟ್ಲಿ ಕ್ರೀಡಾಂಗಣದಲ್ಲಿ ಟಿಕೆಟ್ ಬೆಲೆ 8,000 ರೂಪಾಯಿಯಂದ ಗರಿಷ್ಠ 20,000 ರೂಪಾಯಿ ಮಾತ್ರ. ಆದರೆ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನೇ ಮಾರಾಟ ಮಾಡಿರುವುದು ಪತ್ತೆಯಾಗಿದೆ.
ಪೊಲೀಸರಿಂದ ಮೂವರು ಅರೆಸ್ಟ್
ಜೇಟ್ಲಿ ಕ್ರೀಡಾಂಗಣದ ಹೊರಗಡೆ ಈ ರೀತಿ ಬ್ಲಾಕ್ ಮಾರ್ಕೆಟ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಮೂವರ ಅರೆಸ್ಟ್ ಮಾಡಲಾಗಿದೆ. ಜೇಟ್ಲಿ ಕ್ರೀಡಾಂಗಣದ ಹತ್ತಿರದಲ್ಲಿರುವ ಪೆಟ್ರೋಲ್ ಬಂಕ್ ಬ್ಲಾಕ್ ಟಿಕೆಟ್ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿತ್ತು.
ಮೆಂಬರ್ ಟಿಕೆಟ್‌ಗಳನ್ನೇ ಮಾರಾಟ
ಡೆಲ್ಲಿ ಕ್ರಿಕೆಟ್ ಸಂಸ್ಥೆ 4000 ಟಿಕೆಟ್‌ಗಳನ್ನು ಕ್ರಿಕೆಟ್ ಸಂಸ್ಥೆಯ ಸದಸ್ಯರಿಗೆ ನೀಡುತ್ತದೆ. ಇದು ಉಚಿತ ಕಾಂಪ್ಲಿಮೆಂಟರ್ ಪಾಸ್ ಟಿಕೆಟ್. ಆದರೆ ಕೆಲ ಸದಸ್ಯರು ವಿದೇಶದಲ್ಲಿ ನಲೆಸಿದ್ದಾರೆ, ಮತ್ತೆ ಕೆಲವರು ನಿಧನರಾಗಿದ್ದಾರೆ. ಇಂತ ಸದಸ್ಯರ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ ನೀಡಲಾಗುತ್ತದೆ. ಡೆಲ್ಲಿ ಕ್ರಿಕೆಟ್ ಸಂಸ್ಥೆ ಸಿಇಒ ಸೇರಿದಂತೆ ಪ್ರಮುಖರೇ ಇದರಲ್ಲಿ ಶಾಮೀರಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವೈದ್ಯರ ಸೋಗಿನಲ್ಲಿ ಪತ್ತೆ ಹಚ್ಚಿದ ಪೊಲೀಸರು
ಬ್ಲಾಕ್ ಟಿಕೆಟ್ ಕುರಿತು ಮಾಹಿತಿ ಪಡೆದ ಪೊಲೀಸರು 25 ವೈದ್ಯರಿಗೆ ಪಂದ್ಯ ವೀಕ್ಷಿಸಲು ಟಿಕೆಟ್ ಬೇಕಿದೆ. ಒಂದೆರೆಡು ಟಿಕೆಟ್ ಆಗಿದ್ದರೆ ಸಿಗುತ್ತಿತ್ತು. ಆದರೆ 25 ಬೇಕು ಎಂದು ಮಧ್ಯವರ್ತಿಗಳ ಸಂಪರ್ಕಿಸಿದ್ದಾರೆ. ಈ ಮೂಲಕ ಕಾಂಪ್ಲಿಮೆಂಟರಿ ಪಾಸ್‌ಗಳನ್ನು ಹಣಕ್ಕಾಗಿ ಮಾರಾಟ ಮಾಡುತ್ತಿರುವ ದಂಧೆಯನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
