ಕೊರೋನಾ ಸಂಕಷ್ಟ: PM CARES Fund ಗೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ ಯುವರಾಜ್ ಸಿಂಗ್..!
ನವದೆಹಲಿ: ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ 50 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಈ ವಿಷಯವನ್ನು ಯುವಿ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 05ರ ರಾತ್ರಿ 9 ಗಂಟೆಗೆ ಲೈಟ್ ಆಫ್ ಮಾಡಿ 9 ನಿಮಿಷಗಳ ಕಾಲ ಮನೆಯ ಬಾಗಿಲು/ ಬಾಲ್ಕನಿಯಲ್ಲಿ ನಿಂತು ದೀಪ, ಮೊಂಬತ್ತಿ ಬೆಳಗಲು ದೇಶದ ಜನರನ್ನು ಕೇಳಿಕೊಂಡಿದ್ದರು. ಮೋದಿ ಮಾತಿಗೆ ಇಡೀ ದೇಶವೇ ಬೆಂಬಲ ಸೂಚಿಸಿದೆ. ಇಂತಹ ಸಂದರ್ಭದಲ್ಲೇ ಯುವಿ ಪಿಎಂ ಕೇರ್ಸ್‌ಗೆ 50 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಕೊರೋನಾ ಸಂಕಷ್ಟಕ್ಕೆ ನೆರವಾಗಿದ್ದಾರೆ
ಈಗಾಗಲೇ YouWeCan ಎನ್ನುವ NGO ಮೂಲಕ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ನೆರವಾಗುತ್ತಿರುವ ಯುವಿ
ಕೊರೋನಾ ಸಂಕಷ್ಟಕ್ಕೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ ಕ್ಯಾನ್ಸರ್ ಗೆದ್ದ ವೀರ
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಬಡವರಿಗೆ ನೆರವಾಗುತ್ತಿದ್ದ ಶಾಹಿದ್ ಅಫ್ರಿದಿ ಫೌಂಡೇಶನ್‌ಗೆ ದೇಣಿಗೆ ನೀಡಿ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದ ಯುವರಾಜ್ ಸಿಂಗ್
ಆ ಬಳಿಕ ಸ್ಪಷ್ಟನೆ ನೀಡಿದ್ದ ಯುವಿ, ತಾವು ಮಾನವೀಯತೆಯ ಪರ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದರು
ಈಗಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ, ಸುರೇಶ್ ರೈನಾ, ಗೌತಮ್ ಗಂಭೀರ್, ಅಜಿಂಕ್ಯ ರಹಾನೆ ಸೇರಿದಂತೆ ಹಲವು ಕ್ರಿಕೆಟಿಗರು ಲಕ್ಷಾಂತರ ರುಪಾಯಿಗಳನ್ನು ಪಿಎಂ ಕೇರ್ಸ್‌ಗೆ ದೇಣಿಗೆ ಅರ್ಪಿಸಿದ್ದಾರೆ.
ಬಿಸಿಸಿಐ ಬರೋಬ್ಬರಿ 51 ಕೋಟಿ ರುಪಾಯಿಗಳನ್ನು ಪಿಎಂ ಕೇರ್ಸ್‌ಗೆ ಅರ್ಪಿಸಿದೆ, ಇನ್ನು ಹಾಕಿ ಇಂಡಿಯಾ ಸಂಸ್ಥೆ ಒಂದು ಕೋಟಿ ರುಪಾಯಿಗಳನ್ನು ನೀಡಿದೆ
ಯುವಿ ಕೆಲದಿನಗಳ ಹಿಂದಷ್ಟೇ ಗಂಗೂಲಿ ತಮಗೆ ಬೆಂಬಲಿಸಿದಷ್ಟು ಧೋನಿ ಹಾಗೂ ಕೊಹ್ಲಿ ನಾಯಕನಾಗಿ ಸಪೋರ್ಟ್ ಮಾಡಿರಲಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು
2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಹೀರೋ ಯುವಿ 2019ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು