- Home
- Sports
- Cricket
- ಸರ್ಕಾರದ ನಿಯಂತ್ರಣಕ್ಕೆ ಬಿಸಿಸಿಐ, ರಾಷ್ಟ್ರೀಯ ಕ್ರೀಡಾ ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಸಿದ್ಧತೆ
ಸರ್ಕಾರದ ನಿಯಂತ್ರಣಕ್ಕೆ ಬಿಸಿಸಿಐ, ರಾಷ್ಟ್ರೀಯ ಕ್ರೀಡಾ ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಸಿದ್ಧತೆ
ವಿಶ್ವದ ಶ್ರೀಮಂತ ಸಂಸ್ಥೆ ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಮಸೂದೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಸೂದೆ ಪ್ರಕಾರ ಇತರ ಕ್ರೀಡಾ ಫೆಡರೇಷನ್ ಮಾದರಿಯಲ್ಲಿ ಬಿಸಿಸಿಐಗೂ ಕೂಡ ಈ ನೆಲಸದ ಕಾನೂನು ಅನ್ವಯವಾಗಲಿದೆ.
13

Image Credit : ANI
ಕ್ರೀಡಾ ಮಸೂದೆಯಡಿ ಬಿಸಿಸಿಐ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ರಾಷ್ಟ್ರೀಯ ಕ್ರೀಡಾ ಮಸೂದೆಯಡಿ ಬರಲಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಮೂಲಗಳು ಖಚಿತಪಡಿಸಿವೆ. ಲೋಕಸಭೆಯಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಲು ಸಿದ್ದತೆ ನಡೆಸಿದೆ. ಬಿಸಿಸಿಐ ಕೇಂದ್ರದ ಯಾವುದೇ ಅನುದಾನ ಪಡೆಯುವುದಿಲ್ಲ, ಆದರೂ ಕ್ರೀಡಾ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಇದರಿಂದ ಉಳಿದ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಮಾದರಿಯಲ್ಲಿ ಬಿಸಿಸಿಐ ಕೂಡ ಈ ನೆಲಸದ ಕಾನೂನು ಅನ್ವಯವಾಗಲಿದೆ. ಬಿಸಿಸಿಐ ಕೂಡ ಸ್ವಾಯತ್ತ ಸಂಸ್ಥೆ ಯಾಗಿದ್ದು, ತಕರಾರು ಬಂದಾಗ ಉದ್ದೇಶಿತ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ ಪರಿಹಾರದ ವೇದಿಕೆ ಆಗಲಿದೆ
ಮಸೂದೆಯಲ್ಲಿ, ಆಡಳಿತಗಾರರ ವಯಸ್ಸಿನ ಮಿತಿಯನ್ನು 70 ರಿಂದ 75 ಕ್ಕೆ ಹೆಚ್ಚಿಸುವ ನಿಬಂಧನೆಯಿದೆ. ರೋಜರ್ ಬಿನ್ನಿ ಅವರು 70 ವರ್ಷ ತುಂಬಿದ್ದು, ಈ ಹೊಸ ನಿಯಮ ಅವರಿಗೆ ಅನುಕೂಲವಾಗಲಿದೆ.
23
Image Credit : X
ಬಿಸಿಸಿಐ ಹುದ್ದೆಗೆ ವಯಸ್ಸಿನ ಮಿತಿ
ಮಸೂದೆ ಜಾರಿಯಾದಾಗ 69 ವರ್ಷ 364 ದಿನಗಳ ವಯಸ್ಸಿನವರು ಯಾವುದೇ ಹುದ್ದೆಗೆ ಆಯ್ಕೆಯಾದರೆ, 70 ವರ್ಷ ದಾಟಿದರೂ ಪೂರ್ಣ ಅವಧಿಗೆ ಮುಂದುವರಿಯಬಹುದು. ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಉಪ-ನಿಯಮಗಳನ್ನು ಪೂರೈಸದಿದ್ದರೆ, ಆಡಳಿತ ಮಂಡಳಿಗೆ ಸ್ಪರ್ಧಿಸಲು ಅಥವಾ ನಾಮನಿರ್ದೇಶನ ಪಡೆಯಲು ಅನರ್ಹರಾಗುತ್ತಾರೆ. ನಾಮಪತ್ರ ಸಲ್ಲಿಸುವಾಗ 70 ವರ್ಷ ಮೀರಿರಬಾರದು.
33
Image Credit : ANI
ಬಿನ್ನಿ ಬಿಸಿಸಿಐ ಮುಖ್ಯಸ್ಥರಾಗಿ ಮುಂದುವರಿಯುವ ಸಾಧ್ಯತೆ
70 ರಿಂದ 75 ವರ್ಷದೊಳಗಿನ ಯಾರಾದರೂ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಉಪ-ನಿಯಮಗಳಿಂದ ಅನುಮತಿಸಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಆಗ ಆಯ್ಕೆಯಾದ ವ್ಯಕ್ತಿ ಪೂರ್ಣ ಅವಧಿಗೆ ಸೇವೆ ಸಲ್ಲಿಸುತ್ತಾರೆ. ಆಗಸ್ಟ್‌ನಲ್ಲಿ ಮಸೂದೆ ಜಾರಿಗೆ ಬಂದರೆ, ಬಿನ್ನಿ ಮತ್ತೆ ಬಿಸಿಸಿಐ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಬಹುದು ಮತ್ತು ಕನಿಷ್ಠ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಬಹುದು.
Latest Videos