MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈ ಐವರು ಟೀಂ ಇಂಡಿಯಾ ಸ್ಟಾರ್ ಆಟಗಾರರು ಆಡೋದೇ ಡೌಟ್! ಲಿಸ್ಟ್‌ನಲ್ಲಿದೆ 2 ಅಚ್ಚರಿ ಹೆಸರು

2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈ ಐವರು ಟೀಂ ಇಂಡಿಯಾ ಸ್ಟಾರ್ ಆಟಗಾರರು ಆಡೋದೇ ಡೌಟ್! ಲಿಸ್ಟ್‌ನಲ್ಲಿದೆ 2 ಅಚ್ಚರಿ ಹೆಸರು

ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಈಗಿನಿಂದಲೇ ಭರದ ಸಿದ್ದತೆಗಳು ಆರಂಭಿಸಿವೆ. ಹೀಗಿರುವಾಗಲೇ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿ ಆಡಲು ಕನಸು ಕಾಣುತ್ತಿರುವ ಐವರು ಆಟಗಾರರಿಗೆ ಬಿಸಿಸಿಐ ಶಾಕ್ ನೀಡಲು ರೆಡಿಯಾಗಿದೆ. ಯಾರು ಆ ಆಟಗಾರರು ನೋಡೋಣ ಬನ್ನಿ.

2 Min read
Author : Naveen Kodase
Published : Jul 17 2026, 10:50 AM IST
Share this Photo Gallery
  • FB
  • TW
  • Linkdin
  • Whatsapp
16
2027ರ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭ
Image Credit : stockPhoto

2027ರ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭ

2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ, ಪ್ರಶಸ್ತಿ ಸುತ್ತಿನಲ್ಲಿ ಆಸೀಸ್ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಈ ಬಾರಿ ಶತಾಯಗತಾಯ ಮುಂಬರುವ ಏಕದಿನ ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾ ಪಣ ತೊಟ್ಟಿದೆ. ಆದರೆ ಮುಂಬರುವ ಏಕದಿನ ವಿಶ್ವಕಪ್ ಆಡಲು ಕನಸು ಕಾಣುತ್ತಿರುವ ಈ ಐದು ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಶಾಕ್ ನೀಡಲು ರೆಡಿಯಾಗಿದೆ. ಈ ಲಿಸ್ಟ್‌ನಲ್ಲಿ ಇಬ್ಬರು ಮ್ಯಾಚ್‌ ವಿನ್ನರ್‌ಗಳ ಹೆಸರೂ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ರೋಹಿತ್ ಶರ್ಮಾ:
Image Credit : X@BCCI

1. ರೋಹಿತ್ ಶರ್ಮಾ:

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ. ಆದರೆ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆ ಮಾಡದಿರಲು ಬಿಸಿಸಿಐ ಟೀಮ್ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಇಂಗ್ಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯವೇ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆಯಿದೆ. ರೋಹಿತ್ ಶರ್ಮಾ ಬದಲಿಗೆ ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌ಗೆ ಮಣೆ ಹಾಕಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.

Related Articles

Related image1
ಲಾರ್ಡ್ಸ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಮಹಿಳಾ ಟೀಂ ಇಂಡಿಯಾ! ಮೂರೂವರೆ ದಿನದಲ್ಲಿ ಭಾರತಕ್ಕೆ ಶರಣಾದ ಆಂಗ್ಲರು
Related image2
561ನೇ ಪಂದ್ಯದಲ್ಲೇ ಹೊಸ ಇತಿಹಾಸ; ವಿರಾಟ್ ಕೊಹ್ಲಿ ಖಾತೆಗೆ ಮತ್ತೊಂದು ವಿಶ್ವದಾಖಲೆ
36
2. ಮೊಹಮ್ಮದ್ ಶಮಿ:
Image Credit : Getty

2. ಮೊಹಮ್ಮದ್ ಶಮಿ:

ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಪದೇ ಪದೇ ಕಡೆಗಣಿಸಲಾಗುತ್ತಿದೆ. ಐಸಿಸಿ ಟೂರ್ನಿಯಲ್ಲಿ ಭಾರತ ಪರ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿ ಶಮಿ ಹೊರಹೊಮ್ಮಿದ್ದಾರೆ. ಇದರ ಜತೆ ದೇಶಿ ಕ್ರಿಕೆಟ್‌ನಲ್ಲೂ ಶಮಿ ಅದ್ಭುತ ಲಯದಲ್ಲಿದ್ದಾರೆ. ಹೀಗಿದ್ದೂ ಫಿಟ್ನೆಸ್ ಸಮಸ್ಯೆಯನ್ನು ಆಗಾಗ ಎದುರಿಸುವ ಶಮಿಯನ್ನು ಕೈಬಿಟ್ಟು ಹರ್ಷಿತ್ ರಾಣಾಗೆ ಮಣೆ ಹಾಕಲು ಬಿಸಿಸಿಐ ಸೆಲೆಕ್ಷನ್ ಕಮಿಟಿ ಚಿಂತನೆಯಲ್ಲಿದೆ. ಶಮಿ ಎಷ್ಟು ದೊಡ್ಡ ಐಸಿಸಿ ಟೂರ್ನಿಯ ಮ್ಯಾಚ್ ವಿನ್ನರ್ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

46
3. ಮೊಹಮ್ಮದ್ ಸಿರಾಜ್
Image Credit : BCCI\Twitter

3. ಮೊಹಮ್ಮದ್ ಸಿರಾಜ್

ಒಂದು ಕಾಲದಲ್ಲಿ ಟೀಂ ಇಂಡಿಯಾ ಏಕದಿನ ಮಾದರಿಯ ಅತ್ಯಂತ ನಂಬಿಗಸ್ಥ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್, ಇದೀಗ ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಆಯ್ಕೆ ಸಮಿತಿ ಇದೀಗ ಸಿರಾಜ್ ಅವರನ್ನು ಟೆಸ್ಟ್‌ಗೆ ಸೀಮಿತಗೊಳಿಸುವ ಚಿಂತನೆಯಲ್ಲಿದೆ. ಇನ್ನು ಸಿರಾಜ್ ಬದಲಿಗೆ ಆಯ್ಕೆ ಸಮಿತಿ ಕನ್ನಡಿಗ ವೇಗಿ ಪ್ರಸಿದ್ದ್ ಕೃಷ್ಣ ಮೇಲೆ ಹೆಚ್ಚು ನಂಬಿಕೆಯಿಟ್ಟಂತೆ ಕಂಡು ಬರುತ್ತಿದೆ.

56
4. ರವೀಂದ್ರ ಜಡೇಜಾ:
Image Credit : AFP

4. ರವೀಂದ್ರ ಜಡೇಜಾ:

ಭಾರತದ ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕವೇ ಹಲವಾರು ಬಾರಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ರವೀಂದ್ರ ಜಡೇಜಾ ಅವರನ್ನು ಕೈಬಿಟ್ಟು ಅಕ್ಷರ್ ಪಟೇಲ್‌ಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ನೀಡಲು ಒಲವು ತೋರಿದೆ ಎಂದು ವರದಿಯಾಗಿದೆ. ಇದು ಖಂಡಿತ ಅಚ್ಚರಿ ತೀರ್ಮಾನ ಎನಿಸುವ ಸಾಧ್ಯತೆಯಿದೆ.

66
5. ಯುಜುವೇಂದ್ರ ಚಹಲ್:
Image Credit : X

5. ಯುಜುವೇಂದ್ರ ಚಹಲ್:

ಭಾರತ ಏಕದಿನ ತಂಡದಲ್ಲಿ ತಜ್ಞ ಸ್ಪಿನ್ನರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಿದ್ದೂ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಹಲ್‌ಗೆ ಭಾರತ ಏಕದಿನ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಹಲ್ ಬದಲಿಗೆ ಆಯ್ಕೆ ಸಮಿತಿ ಹರ್ಷ್ ದುಬೆಗೆ ಮಣೆ ಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ)
ಟೀಮ್ ಇಂಡಿಯಾ
ರೋಹಿತ್ ಶರ್ಮಾ

Latest Videos
Recommended Stories
Recommended image1
561ನೇ ಪಂದ್ಯದಲ್ಲೇ ಹೊಸ ಇತಿಹಾಸ; ವಿರಾಟ್ ಕೊಹ್ಲಿ ಖಾತೆಗೆ ಮತ್ತೊಂದು ವಿಶ್ವದಾಖಲೆ
Recommended image2
ರೋಹಿತ್ ಶರ್ಮಾ ನಿವೃತ್ತಿಗೆ ಬಿಸಿಸಿಐನಿಂದ ಸೂಚನೆ ವದಂತಿ ಸಂಚಲನ -ಟೀಂ ಇಂಡಿಯಾ ಸ್ಪಷ್ಟನೆ
Recommended image3
IND vs ENG: ಕೊಹ್ಲಿ, ರೋಹಿತ್ ಇದ್ದರೂ ಗೆಲ್ಲಲು ಆಗಲಿಲ್ಲ.. ಏಕಾಂಗಿಯಾಗಿ ತಂಡ ಗೆಲ್ಲಿಸಿದ ಜೋ ರೂಟ್‌..!
Related Stories
Recommended image1
ಲಾರ್ಡ್ಸ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಮಹಿಳಾ ಟೀಂ ಇಂಡಿಯಾ! ಮೂರೂವರೆ ದಿನದಲ್ಲಿ ಭಾರತಕ್ಕೆ ಶರಣಾದ ಆಂಗ್ಲರು
Recommended image2
561ನೇ ಪಂದ್ಯದಲ್ಲೇ ಹೊಸ ಇತಿಹಾಸ; ವಿರಾಟ್ ಕೊಹ್ಲಿ ಖಾತೆಗೆ ಮತ್ತೊಂದು ವಿಶ್ವದಾಖಲೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved