- Home
- Sports
- Cricket
- ಭಾರತದ ವಿರುದ್ಧ ಬಾಬರ್ ಅಜಂ ರನ್ ಮಷೀನಾ? ಅಥವಾ ಠುಸ್ ಪಟಾಕಿನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಭಾರತದ ವಿರುದ್ಧ ಬಾಬರ್ ಅಜಂ ರನ್ ಮಷೀನಾ? ಅಥವಾ ಠುಸ್ ಪಟಾಕಿನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಪಾಕಿಸ್ತಾನದ ಸೂಪರ್ ಸ್ಟಾರ್ ಬ್ಯಾಟರ್ ಹಾಗೂ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ಬಾಬರ್ ಅಜಂ ಅವರ ಪ್ರದರ್ಶನ ಭಾರತದ ಮೇಲೆ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.

ಬಾಬರ್ ಅಂಕಿ-ಅಂಶಗಳು
ಇಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಪಾಕ್ ಬ್ಯಾಟಿಂಗ್‌ನ ಬೆನ್ನೆಲುಬು ಎನಿಸಿರುವ ಬಾಬರ್ ಅಜಂ ಆಟದ ಮೇಲೆ ಎಲ್ಲರ ಕಣ್ಣಿದೆ. ಆದರೆ, ಭಾರತದ ವಿರುದ್ಧ ಬಾಬರ್ ದಾಖಲೆ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ
ಭಾರತ ಎದುರು ಬಾಬರ್ ಪದೇ ಪದೇ ಫೇಲ್
ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರೂ, ಭಾರತದ ವಿರುದ್ಧದ ಟಿ20 ಪಂದ್ಯಗಳಲ್ಲಿ ಬಾಬರ್ ಪದೇ ಪದೇ ವಿಫಲರಾಗಿದ್ದಾರೆ. ಭಾರತದ ವಿರುದ್ಧ ಆಡಿದ ಐದು ಟಿ20 ಪಂದ್ಯಗಳಲ್ಲಿ ಬಾಬರ್ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ.
ಬಾಬರ್ ಅಂಕಿಅಂಶಗಳಲ್ಲಿ..
ಭಾರತದ ವಿರುದ್ಧದ ಕೊನೆಯ ಐದು ಟಿ20 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಗಳಿಸಿದ್ದು ಕೇವಲ 105 ರನ್. 2021ರ ವಿಶ್ವಕಪ್‌ನಲ್ಲಿ ಗಳಿಸಿದ ಅಜೇಯ 68 ರನ್‌ಗಳನ್ನು ಹೊರತುಪಡಿಸಿದರೆ, ಅವರ ಬ್ಯಾಟಿಂಗ್ ಸರಾಸರಿ ಕೇವಲ 9.25ಕ್ಕೆ ಇಳಿಯುತ್ತದೆ.
ಒಮ್ಮೆ ಮಾತ್ರ ಭಾರತ ಎದುರು ಬಾಬರ್ ಫಿಫ್ಟಿ
2021ರ ಟಿ20 ವಿಶ್ವಕಪ್‌ನಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಮಾತ್ರ ಬಾಬರ್ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಆ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತ್ತು. ಬಾಬರ್ 68 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ಏಷ್ಯಾಕಪ್‌ನಲ್ಲಿ ವೈಫಲ್ಯ
2022ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧದ ಎರಡೂ ಪಂದ್ಯಗಳಲ್ಲಿ ಬಾಬರ್ ವಿಫಲರಾದರು. ಗ್ರೂಪ್ ಹಂತದಲ್ಲಿ 10 ರನ್‌ಗಳಿಗೆ ಮತ್ತು ಸೂಪರ್ ಫೋರ್ ಹಂತದಲ್ಲಿ 14 ರನ್‌ಗಳಿಗೆ ಔಟಾದರು. ನಂತರ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ, ಭಾರತದ ವಿರುದ್ಧ ಆಡಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್‌ಗೆ ಔಟಾಗಿ ಬಾಬರ್ ಮುಖಭಂಗ ಅನುಭವಿಸಿದರು.
ಭಾರೀ ರೆಕಾರ್ಡ್ ಹೊಂದಿರುವ ಕೊಹ್ಲಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

