ಓವಲ್ ಟೆಸ್ಟ್‌ಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ, ಯುವ ವೇಗಿ ಪದಾರ್ಪಣೆ?
ಭಾರತ ಗುರುವಾರ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿದೆ. ನಿರ್ಣಾಯಕ ಅಂತಿಮ ಟೆಸ್ಟ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಂಭಾವ್ಯ XI ಇಲ್ಲಿದೆ.

ಯಶಸ್ವಿ ಜೈಸ್ವಾಲ್
ಸೆಂಚುರಿ ಹೊಡೆದು ಫಾರ್ಮ್ನಲ್ಲಿರೋ ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಮುಂದುವರಿಯೋದು ಪಕ್ಕಾ.
ಕೆ ಎಲ್ ರಾಹುಲ್
ಮ್ಯಾಂಚೆಸ್ಟರ್ನಲ್ಲಿ ಸೆಂಚುರಿ ಹೊಡೆದ ಕೆ.ಎಲ್. ರಾಹುಲ್ ಸ್ಥಾನದಲ್ಲೂ ಯಾವ ಬದಲಾವಣೆಯೂ ಸಾಧ್ಯವಿಲ್ಲ
ಸಾಯಿ ಸುದರ್ಶನ್
ಕರುಣ್ ನಾಯರ್ ಬದಲು ಬಂದು ಮೂರನೇ ಕ್ರಮಾಂಕದಲ್ಲಿ ಅರ್ಧಶತಕ ಸಿಡಿಸಿದ ಸಾಯ್ ಸುದರ್ಶನ್ ಟೀಮ್ನಲ್ಲಿ ಉಳಿಯೋದು ನಿಶ್ಚಿತ.
ಶುಭ್‌ಮನ್ ಗಿಲ್
ಈ ಸರಣಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ಸ್ ಗಳಿಸಿರೋ ಕ್ಯಾಪ್ಟನ್ ಗಿಲ್ ಮೇಲೆ ಟೀಮ್ ಭರವಸೆ ಇದೆ.
ಧ್ರುವ್ ಜುರೆಲ್
ಗಾಯಗೊಂಡಿರೋ ರಿಷಭ್ ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡ್ತಾರೆ.
ರವೀಂದ್ರ ಜಡೇಜಾ
ಕೊನೆಯ ಟೆಸ್ಟ್ನಲ್ಲಿ ಸೆಂಚುರಿ ಹೊಡೆದ ಜಡೇಜಾ ಬೌಲಿಂಗ್ನಲ್ಲೂ ಇಂಡಿಯಾದ ಬಲ.
ವಾಷಿಂಗ್ಟನ್ ಸುಂದರ್
ಕೊನೆಯ ಟೆಸ್ಟ್ನ ಸೆಂಚುರಿ ಬಾರಿಸಿರುವ ವಾಷಿಂಗ್ಟನ್ ಸುಂದರ್ ಸ್ಪಿನ್ ಆಲ್ರೌಂಡರ್ ಸ್ಥಾನ ಉಳಿಸಿಕೊಳ್ಳೋದು ಖಚಿತ.
ಶಾರ್ದೂಲ್ ಠಾಕೂರ್
ಫಾರ್ಮ್ನಲ್ಲಿ ಇಲ್ಲದಿದ್ರೂ ಶಾರ್ದೂಲ್ ಠಾಕೂರ್ ಪ್ಲೇಯಿಂಗ್ ಇಲೆವೆನ್ನಲ್ಲಿರಬಹುದು. ಬ್ಯಾಟಿಂಗ್ನಲ್ಲಿ ಮಿಂಚಬಹುದು.
ಜಸ್ಪ್ರೀತ್ ಬುಮ್ರಾ
ಬುಮ್ರಾ ಆಡ್ತಾರೆ ಅಂತ ಕೋಚ್ ಗಂಭೀರ್ ಹೇಳಿದ್ದಾರೆ. ಅವ್ರು ಟೀಮ್ನಲ್ಲಿ ಉಳಿಯೋದು ಪಕ್ಕಾ.
ಮೊಹಮ್ಮದ್ ಸಿರಾಜ್
ಸತತ ಐದನೇ ಟೆಸ್ಟ್ನಲ್ಲೂ ಸಿರಾಜ್ ಆಡ್ತಾರೆ. ಈ ಸರಣಿಯಲ್ಲಿ 14 ವಿಕೆಟ್ ಪಡೆದಿದ್ದಾರೆ.
ಅರ್ಷದೀಪ್ ಸಿಂಗ್
ಎಡಗೈ ವೇಗಿ ಅರ್ಷದೀಪ್ ಸಿಂಗ್ಗೆ ಆಡುವ ಸಮಯ ಬಂದಿದೆ. ಅಂಶುಲ್ ಕಾಂಬೋಜ್ ಔಟ್ ಆಗಬಹುದು.