ಪರ-ವಿರೋಧದ ನಡುವೆ ಕೋಟ್ಲಾ ಮೈದಾನದಲ್ಲಿ ಜೇಟ್ಲಿ ಪುತ್ಥಳಿ ಅನಾವರಣ ಮಾಡಿದ ಶಾ!
First Published Dec 28, 2020, 6:03 PM IST
ಪರ ವಿರೋಧದ ನಡುವೆ ಬಿಜೆಪಿ ನಾಯಕ, ದೆಹಲಿ ಕ್ರಿಕೆಟ್ ಸಂಸ್ಥೆ ಮಾಜಿ ಅಧ್ಯಕ್ಷ, ದಿವಂಗತ ಅರುಣ್ ಜೇಟ್ಲಿ ಪ್ರತಿಮೆ ಅನಾವರಣಗೊಂಡಿದೆ. ಅರುಣ್ ಜೇಟ್ಲಿ ಜಯಂತಿಯಂದೆ ಪ್ರತಿಮೆ ಅನಾವರಣ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರತಿಮೆ ಅನಾವರಣ ಮಾಡಿದ್ದಾರೆ. ಜೇಟ್ಲಿ ಪ್ರತಿಮೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು ಯಾಕೆ? ಇಲ್ಲಿದೆ ವಿವರ.

ದೆಹಲಿಯ ಅಂತಾರಾಷ್ಟ್ರೀಯ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ದಿವಗಂತ ನಾಯಕ, ದೆಹಲಿ ಕ್ರಿಕಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ.

ಇಂದು(ಡಿ.28) ಅರುಣ್ ಜೇಟ್ಲಿ ಜಯಂತಿ. ಇದೇ ದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೇಟ್ಲಿ ಪ್ರತಿಮೆ ಅನಾವರಣ ಮಾಡಿದ್ದಾರೆ. ಈ ಮೂಲಕ ಬಿಜೆಪಿ ದೆಹಲಿ ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿಗೆ ದುಡಿದ ಜೇಟ್ಲಿಗೆ ಗೌರವ ಸರ್ಪಿಸಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?