ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಟಾಪ್ 5 ಏಕದಿನ ಬ್ಯಾಟರ್ ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್!
ಎಬಿ ಡಿವಿಲಿಯರ್ಸ್ ಅವರು ಸಾರ್ವಕಾಲಿಕ ಶ್ರೇಷ್ಠ 5 ODI ಬ್ಯಾಟ್ಸ್‌ಮನ್‌ಗಳನ್ನು ಬಹಿರಂಗಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ ಬನ್ನಿ

ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಸ್ಫೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರು ODI ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಟಾಪ್ ಐದು ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಡಿವಿಲಿಯರ್ಸ್‌ಗೆ ಅವರು ಆಯ್ಕೆಯು ಫಿನಿಶಿಂಗ್ ಸಾಮರ್ಥ್ಯ, ಸ್ಥಿರತೆ, ನಾಯಕತ್ವ ಮತ್ತು ಆಲ್ ರೌಂಡರ್ ಸಾಮರ್ಥ್ಯಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ಎಬಿ ಡಿವಿಲಿಯರ್ಸ್ ಅವರ ಟಾಪ್ 5 ಬ್ಯಾಟರ್‌ಗಳು ಇಲ್ಲಿವೆ
1. ಎಂ.ಎಸ್. ಧೋನಿ
ಎಬಿ ಡಿವಿಲಿಯರ್ಸ್ ಅವರ ಅತ್ಯುತ್ತಮ ODI ಬ್ಯಾಟರ್‌ಗಳಲ್ಲಿ ಮೊದಲ ಆಯ್ಕೆ ಎಂ.ಎಸ್. ಧೋನಿ. ಧೋನಿ ಅವರು ಸೀಮಿತ ಓವರ್‌ಗಳ ಸ್ವರೂಪದಲ್ಲಿ ಆಕ್ರಮಣಕಾರಿ ವಿಧಾನ, ಅಸಾಧಾರಣ ಫಿನಿಶಿಂಗ್ ಸಾಮರ್ಥ್ಯ ಮತ್ತು ಒತ್ತಡದಲ್ಲಿ ಪರಿಸ್ಥಿತಿ ನಿಭಾಯಿಸುವುದಕ್ಕೆ ಹೆಸರುವಾಸಿಯಾಗಿದ್ದರು. ಭಾರತದ ಮಾಜಿ ನಾಯಕ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಎಂ.ಎಸ್. ಧೋನಿ ODIಗಳಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರು, 200 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿ 110 ಗೆಲುವು ತಂದುಕೊಟ್ಟಿದ್ದಾರೆ. ಅವರು 2011ರ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದರು. ಎಂ.ಎಸ್. ಧೋನಿ 350 ಪಂದ್ಯಗಳನ್ನು ಆಡಿದ್ದು, 10 ಶತಕ ಮತ್ತು 73 ಅರ್ಧ ಶತಕಗಳನ್ನು ಒಳಗೊಂಡಂತೆ 50.57 ಸರಾಸರಿಯಲ್ಲಿ 10773 ರನ್ ಗಳಿಸಿದ್ದಾರೆ.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
2. ವಿರಾಟ್ ಕೊಹ್ಲಿ
ಎಬಿ ಡಿವಿಲಿಯರ್ಸ್ ಅವರ ಅತ್ಯುತ್ತಮ ಬ್ಯಾಟರ್‌ನಲ್ಲಿ ಎರಡನೇ ಆಯ್ಕೆ ಅವರ ಆಪ್ತ ಸ್ನೇಹಿತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ. ಕೊಹ್ಲಿ ಒಂದೂವರೆ ದಶಕದಿಂದ ಭಾರತಕ್ಕೆ ಬ್ಯಾಟಿಂಗ್ ಆಧಾರ ಸ್ತಂಭವಾಗಿದ್ದಾರೆ. ಕೊಹ್ಲಿ 2008ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ODIಗೆ ಪಾದಾರ್ಪಣೆ ಮಾಡಿದರು ಮತ್ತು ಶ್ರೇಷ್ಠ ODI ಬ್ಯಾಟರ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ, 36 ವರ್ಷದ ಅವರು 14,000 ODI ರನ್‌ಗಳನ್ನು ಪೂರೈಸಿದರು ಮತ್ತು ಈ ಮೈಲಿಗಲ್ಲನ್ನು (287 ಇನ್ನಿಂಗ್ಸ್‌ಗಳು) ಸಾಧಿಸಿದ ವೇಗದ ಬ್ಯಾಟರ್ ಎನಿಸಿಕೊಂಡರು. ಅವರು ODIಗಳಲ್ಲಿ ಅತಿ ಹೆಚ್ಚು ಶತಕಗಳನ್ನು (51) ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ 301 ಪಂದ್ಯಗಳಲ್ಲಿ 51 ಶತಕ ಮತ್ತು 74 ಅರ್ಧ ಶತಕಗಳನ್ನು ಒಳಗೊಂಡಂತೆ 58.11 ಸರಾಸರಿಯಲ್ಲಿ 14180 ರನ್ ಗಳಿಸಿದ್ದಾರೆ.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
3. ಸಚಿನ್ ತೆಂಡೂಲ್ಕರ್
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರು ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇರಿಸಿದ್ದಾರೆ. ತೆಂಡೂಲ್ಕರ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು, 463 ಪಂದ್ಯಗಳಲ್ಲಿ 44.83 ಸರಾಸರಿಯಲ್ಲಿ 49 ಶತಕ ಮತ್ತು 96 ಅರ್ಧ ಶತಕಗಳನ್ನು ಒಳಗೊಂಡಂತೆ ದಾಖಲೆಯ 18,426 ರನ್ ಗಳಿಸಿದ್ದಾರೆ. ತೆಂಡೂಲ್ಕರ್ ODI ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಆಟಗಾರ, 2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದರು. ಅವರು ಭಾರತಕ್ಕೆ ಅತ್ಯಂತ ಆಕ್ರಮಣಕಾರಿ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದರು. 2011 ರಲ್ಲಿ 28 ವರ್ಷಗಳ ನಂತರ ODI ವಿಶ್ವಕಪ್ ಗೆಲುವನ್ನು ಸಾಧಿಸಲು ತೆಂಡೂಲ್ಕರ್ ಪ್ರಮುಖ ಪಾತ್ರ ವಹಿಸಿದರು.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
4. ರಿಕಿ ಪಾಂಟಿಂಗ್
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಎಬಿ ಡಿವಿಲಿಯರ್ಸ್ ಅವರ ಅತ್ಯುತ್ತಮ ಐದು ODI ಬ್ಯಾಟರ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಾಂಟಿಂಗ್ ಆಕ್ರಮಣಕಾರಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು, ಪಾಂಟಿಂಗ್ ಪುಲ್-ಶಾಟ್ ಅನ್ನು ಪರಿಪೂರ್ಣವಾಗಿ ಆಡಲು ಹೆಸರುವಾಸಿಯಾಗಿದ್ದರು, ಇದು ಅವರ ಕಾಲದ ಅತ್ಯಂತ ಭಯಾನಕ ಬ್ಯಾಟರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿತು. ಅಸಾಧಾರಣ ಬ್ಯಾಟರ್ ಆಗಿರುವುದರ ಹೊರತಾಗಿ, ಪಾಂಟಿಂಗ್ ಅದ್ಭುತ ನಾಯಕರಾಗಿದ್ದರು, ಅವರು 2003 ಮತ್ತು 2007 ರಲ್ಲಿ ಆಸ್ಟ್ರೇಲಿಯಾವನ್ನು ODI ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ಪರ 375 ಪಂದ್ಯಗಳನ್ನು ಆಡಿದ್ದು, 30 ಶತಕ ಮತ್ತು 82 ಅರ್ಧ ಶತಕಗಳನ್ನು ಒಳಗೊಂಡಂತೆ 42.03 ಸರಾಸರಿಯಲ್ಲಿ 13,704 ರನ್ ಗಳಿಸಿದ್ದಾರೆ.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
5. ಜಾಕ್ವೆಸ್ ಕಾಲಿಸ್
ಎಬಿ ಡಿವಿಲಿಯರ್ಸ್ ಅವರ ಟಾಪ್ 5 ಬ್ಯಾಟರ್‌ಗಳಲ್ಲಿ ಕೊನೆಯ ಆಟಗಾರ ಅವರ ದಕ್ಷಿಣ ಆಫ್ರಿಕಾದ ಸಹ ಆಟಗಾರ ಜಾಕ್ವೆಸ್ ಕಾಲಿಸ್. ಕಾಲಿಸ್ ಕೇವಲ ಬ್ಯಾಟರ್ ಆಗಿರಲಿಲ್ಲ, ಆದರೆ ಅತ್ಯುತ್ತಮ ಆಲ್ರೌಂಡರ್ ಆಗಿದ್ದರು, ಅವರು ತಮ್ಮ ಬಲವಾದ ಬ್ಯಾಟಿಂಗ್‌ನಿಂದ ODIಗಳಲ್ಲಿ ಹರಿಣಗಳ ಪಡೆಯ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದರು. ಕಾಲಿಸ್ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದರು. ದಕ್ಷಿಣ ಆಫ್ರಿಕಾ ಪರ 328 ODIಗಳಲ್ಲಿ, ಜಾಕ್ವೆಸ್ ಕಾಲಿಸ್ 17 ಶತಕ ಮತ್ತು 86 ಅರ್ಧ ಶತಕಗಳನ್ನು ಒಳಗೊಂಡಂತೆ 44.36 ಸರಾಸರಿಯಲ್ಲಿ 11,579 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಕಾಲಿಸ್ 31.79 ಸರಾಸರಿ ಮತ್ತು 4.84 ಎಕಾನಮಿ ದರದಲ್ಲಿ 2 ಬಾರಿ 5+ ಮತ್ತು 2 ಸಲ 4+ ವಿಕೆಟ್ ಗೊಂಚಲುಗಳನ್ನು ಒಳಗೊಂಡಂತೆ 273 ವಿಕೆಟ್‌ಗಳನ್ನು ಪಡೆದರು. ಟೆಸ್ಟ್ ಮತ್ತು ODI ಸ್ವರೂಪದಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ ಮತ್ತು 250 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ಆಲ್ರೌಂಡರ್ ಅವರಾಗಿದ್ದಾರೆ.