- Home
- Sports
- Cricket
- ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಈ 8 ದಾಖಲೆಗಳನ್ನು ಮುರಿಯಲು ವಿರಾಟ್ ಕೊಹ್ಲಿಗೆ ಸಾಧ್ಯವೇ ಇಲ್ಲ!
ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಈ 8 ದಾಖಲೆಗಳನ್ನು ಮುರಿಯಲು ವಿರಾಟ್ ಕೊಹ್ಲಿಗೆ ಸಾಧ್ಯವೇ ಇಲ್ಲ!
ಬೆಂಗಳೂರು: ಹಲವಾರು ಸಂದರ್ಭಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜತೆ ರನ್ ಮಷೀನ್ ವಿರಾಟ್ ಕೊಹ್ಲಿಯನ್ನು ಹೋಲಿಸಲಾಗುತ್ತಿತ್ತು. ಆದರೆ ಸಚಿನ್ ಹೆಸರಿನಲ್ಲಿರುವ ಈ 8 ದಾಖಲೆಗಳನ್ನು ಬ್ರೇಕ್ ಮಾಡುವುದು ಕೊಹ್ಲಿ ಪಾಲಿಗೆ ಸಾಧ್ಯವೇ ಇಲ್ಲ.

1. ಅತಿಹೆಚ್ಚು ಅಂತಾರಾಷ್ಟ್ರೀಯ ಶತಕ
ಅತಿಹೆಚ್ಚು ಅಂತರಾಷ್ಟ್ರೀಯ ಶತಕ ಸಿಡಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 100 ಶತಕ ಸಿಡಿಸಿದ್ದಾರೆ. ಇದೀಗ ಸಚಿನ್ ದಾಖಲೆ ಮುರಿಯಲು ಕೊಹ್ಲಿಗೆ 17 ಶತಕಗಳ ಅಗತ್ಯವಿದೆ. ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯವಾಗಿರುವ ಕೊಹ್ಲಿಗೆ 100 ಶತಕಗಳ ದಾಖಲೆ ಮುರಿಯುವುದು ಕಷ್ಟಸಾಧ್ಯ.
2. ಅತಿಹೆಚ್ಚು ಏಕದಿನ ಅರ್ಧಶತಕ:
ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 96 ಅರ್ಧಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಕೊಹ್ಲಿ 76 ಅರ್ಧಶತಕ ಸಿಡಿಸಿದ್ದಾರೆ. ಸಚಿನ್ ಅವರ ಈ ಅತಿಹೆಚ್ಚು ಏಕದಿನ ಅರ್ಧಶತಕ ದಾಖಲೆ ಮುರಿಯಲು ಕೊಹ್ಲಿ ಇನ್ನೂ 21 ಅರ್ಧಶತಕ ಬಾರಿಸಬೇಕು. ಅಂದರೆ ಕೊಹ್ಲಿ ಇನ್ನು ಮುಂದೆ ಆಡುವ ಎಲ್ಲಾ ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಬೇಕು. ಇದು ಸಾಧ್ಯನಾ?
3. ಅತಿಹೆಚ್ಚು ಅಂತಾರಾಷ್ಟ್ರೀಯ ಅರ್ಧಶತಕ:
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಅರ್ಧಶತಕ ಬಾರಿಸಿದ ದಾಖಲೆಯೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಈ ದಾಖಲೆ ಬ್ರೇಕ್ ಮಾಡಲು ಕೊಹ್ಲಿ ಇನ್ನೂ 20 ಅರ್ಧಶತಕ ಸಿಡಿಸಬೇಕಿದೆ. ಈ ದಾಖಲೆ ಕೂಡಾ ಬ್ರೇಕ್ ಆಗೋದು ಅನುಮಾನ.
4. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು 50+ ಸ್ಕೋರ್:
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 264 ಬಾರಿ 50+ ಸ್ಕೋರ್ ದಾಖಲಿಸಿದ್ದಾರೆ. ಇನ್ನು ಕೊಹ್ಲಿ 229 ಬಾರಿ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಕೊಹ್ಲಿ, ಸಚಿನ್ ದಾಖಲೆ ಮುರಿಯಲು ಇನ್ನೂ 35 ಬಾರಿ 50+ ರನ್ ಬಾರಿಸಬೇಕಿದೆ. ಅದು ಅಸಾಧ್ಯವೇ ಸರಿ.
5. ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬೌಂಡರಿ:
ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ಬಾರಿಸಿರುವ ಬೌಂಡರಿಗಳ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಇನ್ನೂ 661 ಬೌಂಡರಿ ಬಾರಿಸಬೇಕು. ಇದಂತೂ ಕೊಹ್ಲಿ ಪಾಲಿಗೆ ಕನಸಿನ ಮಾತೇ ಸರಿ.
6. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬೌಂಡರಿ:
ಏಕದಿನ ಕ್ರಿಕೆಟ್ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಅತಿಹೆಚ್ಚು ಬೌಂಡರಿ ಬಾರಿಸಿದ ದಾಖಲೆ ಸಚಿನ್ ಹೆಸರಿನಲ್ಲಿದ್ದು, ಈ ದಾಖಲೆ ಬ್ರೇಕ್ ಮಾಡಲು ಕೊಹ್ಲಿ 1300 ಬೌಂಡರಿ ಬಾರಿಸಬೇಕು. ಈ ದಾಖಲೆ ಬ್ರೇಕ್ ಆಗೋದು ಅಸಾಧ್ಯ.
7. ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್:
ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಇನ್ನೂ 3869 ರನ್ ಬಾರಿಸಬೇಕಿದೆ. ಇನ್ನು ಎರಡು ವರ್ಷ ಕೊಹ್ಲಿ ಅದ್ಭುತವಾಗಿ ಆಡಿದ್ರೂ ದಾಖಲೆ ಬ್ರೇಕ್ ಆಗೋದು ಅನುಮಾನ.
8. ಅತಿಹೆಚ್ಚು ಅಂತಾರಾಷ್ಟ್ರೀಯ ರನ್
ಇನ್ನು ಅತಿಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿ ನಂ.1 ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಕೊಹ್ಲಿ 6383 ರನ್ ಗಳಿಸಬೇಕಿದೆ. ಇದಂತೂ ಕೊಹ್ಲಿಗೆ ಸಾಧ್ಯವೇ ಇಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

