ಗ್ಲೆನ್‌ ಮ್ಯಾಕ್ಸ್‌ವೆಲ್‌ ಖರೀದಿಗೆ RCB ಸೇರಿದಂತೆ ಈ 3 ತಂಡಗಳಿಂದ ಪೈಪೋಟಿ..?

First Published Jan 22, 2021, 5:28 PM IST

ಬೆಂಗಳೂರು: ತಮ್ಮ ವಿಸ್ಪೋಟಕ ಬ್ಯಾಟಿಂಗ್‌ ಹಾಗೂ ಉಪಯುಕ್ತ ಸ್ಪಿನ್‌ ಬೌಲಿಂಗ್‌ ಮೂಲಕ ಸ್ಟಾರ್ ಆಲ್ರೌಂಡರ್‌ ಆಗಿ ಹೊರಹೊಮ್ಮಿರುವ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಕಳೆದ  ವರ್ಷ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ 10.75 ಕೋಟಿ ರುಪಾಯಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಮ್ಯಾಕ್ಸ್‌ವೆಲ್‌ 13 ಪಂದ್ಯಗಳನ್ನಾಡಿ ಒಂದೇ ಒಂದು ಸಿಕ್ಸರ್ ಸಹ ಸಿಡಿಸದೇ 108 ರನ್‌ ಬಾರಿಸಿದ್ದರು. ಇದರ ಬೆನ್ನಲ್ಲೇ ಮ್ಯಾಕ್ಸ್‌ವೆಲ್‌ ಅವರನ್ನು KXIP ಫ್ರಾಂಚೈಸಿ ರಿಲೀಸ್‌ ಮಾಡಿದೆ. ಮುಂಬರುವ ಮಿನಿ ಹರಾಜಿನಲ್ಲಿ ಈ 3 ತಂಡಗಳು ಮ್ಯಾಕ್ಸ್‌ವೆಲ್ ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದೆ.