ಪುಟ್ಟ ರಾಷ್ಟ್ರದಲ್ಲಿ 7 ದಿನದಲ್ಲಿ 5 ಸಾವಿರ ಮಂದಿ ಬಲಿ, ಚರ್ಚ್‌ನಲ್ಲಿ ಹೆಣಗಳ ರಾಶಿ!

First Published 29, Mar 2020, 4:57 PM

ಇಟಲಿಯಲ್ಲಿ ಕೊರೋನಾ ತಾಂಡವ ಕಡಿಮೆಯಾಗುತ್ತಿಲ್ಲ. ಇಲ್ಲಿ ಪ್ರತಿ ದಿನ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 889 ಮಂದಿ ಬಲಿಯಾಗಿದ್ದಾರೆ. ಅಲ್ಲದೇ ಈವರೆಗೆ ಒಟ್ಟು ಹತ್ತು ಸಾವಿರ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಬಲಿಯಾದವರ ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಇದು ಚೀಣಾವನ್ನೇ ಹಿಂದಿಕ್ಕಿದೆ. ಇಲ್ಲಿ ಇಒಟ್ಟು 92 ಸಾವಿರ ಮಂದಿ ಕೊರೋನಾ ಸೋಂಕಿತರಿದ್ದಾರೆ.

ಚೀನಾದಿಂದ ಹಬ್ಬಿದ ಈ ಮಾರಕ ವೈರಸ್‌ನಿಂದ ಈವರೆಗೆ ವಿಶ್ವದೆಲ್ಲೆಡೆ ಒಟ್ಟು 30 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹೀಗಿರುವಾಗ ಚೀನಾದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಹೀಗಿದ್ದರೂ ಅಲ್ಲಿ 3300 ಮಂದಿ ಬಲಿಯಾಗಿದ್ದು, 81 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಿದ್ದಾರೆಂಬುವುದು ಉಲ್ಲೇಖನೀಯ.

ವಿಶ್ವದ 199 ರಾಷ್ಟ್ರಗಳಲ್ಲಿ ಕೊರೋನಾ ತಾಂಡವವಾಡುತ್ತಿದೆ. ಒಟ್ಟು ಆರು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಇಟಲಿ, ಸ್ಪೇನ್, ಚೀನಾ, ಫ್ರಾನ್ಸ್ ಹಾಗೂ ಅಮೆರಿಕಾ ಅತ್ಯಂತ ಹೆಚ್ಚು ಕೊರೋನಾದಿಂದ ನಲುಗಿವೆ.

ಕೊರೋನಾದಿಂದ ಮೃತಪಟ್ಟವರಲ್ಲಿ ಇಟಲಿಯ ಜನಸಂಖ್ಯೆ ಅತಿ ಹೆಚ್ಚು. ಇಟಲಿಯ ಲೋಂಬಾರ್ಡಿಯಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬರೋಬ್ಬರಿ ಮೂವತ್ತೊಂಭತ್ತು ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಐದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಲೋಂಬಾರ್ಡಿಯ ಚರ್ಚ್‌ಗಳಲ್ಲಿ ಶವಗಳದ್ದೇ ರಾಶಿ. ಇಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲು ಕ್ಯೂ ನಿರ್ಮಾಣವಾಗಿದೆ. ಸೋಂಕು ಹರಡುತ್ತದೆ ಎಂಬ ನಿಟ್ಟಿನಲ್ಲಿ ಕುಟುಂಬ ಸದಸ್ಯರಿಗೆ ಮೃತದೇಹ ನೋಡಲೂ ಅವಕಾಶವಿಲ್ಲ.

ಅಲ್ಲದೇ ಈ ಶವಗಳನ್ನು ಸೇನಾ ವಾಹನಗಳಲ್ಲಿ ಕೊಂಡೊಯ್ದು ಸಮಾಧಿ ಮಾಡಲಾಗುತ್ತಿದೆ. ಹೀಗಿದ್ದರೂ ಮೃತದೇಹದಿಂದ ಸೋಂಕು ಹರಡುವುದಿಲ್ಲ ಎಂಬುವುದು ವೈದ್ಯರ ಮಾತಾಗಿದೆ. ಆದರೆ ರೋಗಿಗಳು ಧರಿಸಿದ ಬಟ್ಟೆಯಲ್ಲಿ ಕೆಲ ಸಮಯ ವೈರಸ್ ಜೀವಂತವಾಗಿರುತ್ತದೆ.

ಇಟಲಿಯಲ್ಲಿ ಏಪ್ರಿಲ್ 3ವರೆಗೆ ಲಾಕ್‌ಡೌನ್ ಇದೆ. ಅಷ್ಟರಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ಅಲ್ಲಿನ ಪ್ರಧಾನಿ ಜೆಜೆಸ್ಬೀ ಹೇಳಿದ್ದಾರೆ. ಆದರೆ ಇಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಅಷ್ಟರಲ್ಲಿ ಪರಿಸ್ಥಿತಿ ಹತೋಟಿಗೆ ಬರುವುದು ಅನುಮಾನವೇ ಸರಿ. ಇಲ್ಲಿ ಕಳೆದ 24 ಗಂಟೆಯಲ್ಲಿ 500 ಮಂದಿ ಸಾವನ್ನಪ್ಪಿದ್ದಾರೆ.

ಇಟಲಿಯ ಶವಾಗಾರಗಳು ಶವಗಳಿಂದ ತುಂಬಿದೆ. ಇಟಲಿಯಲ್ಲಿ ಮೊದಲ ಪ್ರಕರಣ ಫೆಬ್ರವರಿ 20 ರಂದು ಬೆಳಕಿಗೆ ಬಂದಿತ್ತು. ಅಷ್ಟರಲ್ಲಾಗಲೇ ಇಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಇಟಲಿಯಲ್ಲಿ ಕಳೆದೊಂದು ವಾರದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮಾರ್ಚ್ 22 ರಂದು 651, ಮಾರ್ಚ್ 23ರಂದು 601, ಮಾರ್ಚ್ 24 ರಂದು 743, ಮಾರ್ಚ್ 25 ರಂದು 683, ಮಾರ್ಚ್ 26 ರಂದು 712, ಮಾರ್ಚ್ 27 ರಂದು 919, ಮಾರ್ಚ್ 28 ರಂದು 889 ಸಾವನ್ನಪ್ಪಿದ್ದಾರೆ.

loader